- Thursday
- October 1st, 2026
ಮೆನಾಲ ವರಮಹಾಲಕ್ಷ್ಮೀ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ೨೦೨೨-೨೩ನೇ ಸಾಲಿನ ಆಧ್ಯಕ್ಷರಾಗಿ ಮಮತಾ ರೈ ಬೇಳೆಂತಿಮಾರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪೂರ್ಣಿಮಾ ಅವಿನ್ ರೈ ಬೇಲ್ಯ ಹಾಗೂ ಉಷಾ ಬಾಲಕೃಷ್ಣ ಕಲ್ಲಗುಡ್ಡೆ, ಪ್ರಧಾನ ಕಾರ‍್ಯದರ್ಶಿಯಾಗಿ ಚಿತ್ರಾ ರಾಧೇಶ್, ಕಾರ‍್ಯದರ್ಶಿಯಾಗಿ ದೀಪ್ತಿ ಸುನೀಲ್ ರೈ ಹಾಗೂ ಪ್ರಮೀಳಾ ತುದಿಯಡ್ಕ ಆಯ್ಕೆಯಾದರು.ಆಗಸ್ಟ್ 5ರಂದು ಶ್ರೀಕೃಷ್ಣ ಭಜನಾ ಮಂದಿರ...
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರ ಪೆನ್ಸಿಲ್ ಆರ್ಟ್ ಭಾವಚಿತ್ರವನ್ನು ಸುಳ್ಯ ಕಸಬಾದ ಬೆಟ್ಟಂಪಾಡಿ ನಿವಾಸಿ ಪೂಜಾ ರವರು ಬರೆದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ,ಹೇಮನಾಥ ಕೆ.ವಿ,ಜಗದೀಶ್ ಅಡ್ತಲೆ, ರಜತ್ ಅಡ್ಯಾರ್, ನವನೀತ್ ಬೆಟ್ಟಂಪಾಡಿ ಉಪಸ್ಥಿತರಿದ್ದರು.
ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿ ಪೋಷಕರು ಬೆಳೆಸಬೇಕು. ಎಳವೆಯಲ್ಲಿಯೇ ಭಜನೆ ಇನ್ನಿತರ ಧಾರ್ಮಿಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಿದಲ್ಲಿ ಒಳ್ಳೆಯ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಹೇಳಿದರು.ಅವರು ಆ 5 ರಂದು ವಿಷ್ಣು ಗೇಮ್ಸ್ ಕ್ಲಬ್ ಮೇನಾಲ, ವರಮಹಾಲಕ್ಷ್ಮೀ ಪೂಜಾ ಸಮಿತಿ ಮೇನಾಲ...
ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮತ್ತು ಸಾಂಪ್ರದಾಯಿಕ ವಿಶೇಷತೆಯ ಬಗ್ಗೆ ತಿಳುವಳಿಕೆ ಮೂಡಿಸುವ ಕುರಿತಾಗಿ ಆಟಿ ಉತ್ಸವ ಕಾರ್ಯಕ್ರಮವನ್ನು ಕೆ.ವಿ.ಜಿ. ಅಮರ ಜ್ಯೋತಿ ಪಿ.ಯು. ಕಾಲೇಜಿನಲ್ಲಿ ಆ.10 ರಂದು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಆಟಿ ಸಾಂಪ್ರದಾಯಿಕ ಅಡುಗೆ ತಯಾರಿ, ಜನಪದ ನೃತ್ಯ ಮತ್ತು ಹಾಡು ಸಾಂಪ್ರದಾಯಿಕ ಕರಕುಶಲ ವಸ್ತುಗಳ ತಯಾರಿಯ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ರೊ| ಲತಾ ಮಧುಸೂಧನ್...
ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಮೂರು ಪ್ರಮುಖ ಆರೋಪಿಗಳಾದ ಶಿಯಾಬ್,ಬಶೀರ್ ಮತ್ತು ರಿಯಾಜ್ ರನ್ನು ಬಂಧನ ಮಾಡಲಾಗಿದ್ದು, ಮೂವರು ಸುಳ್ಯ ಮೂಲದವರು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಮಧ್ಯಾಹ್ನ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಪ್ರವೀಣ್ ನೆಟ್ಟಾರು ಹಂತಕರಲ್ಲಿ ಬಂಧಿತ ಆರೋಪಿಗಳಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ ಪದಾಧಿಕಾರಿಗಳಾಗಿದ್ದಾರೆ. ಕೊಲೆ ಪ್ರತೀಕಾರಕ್ಕಾಗಿ ನಡೆಯಿತೇ ಅಥವಾ...
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಪಾಜೆ ಗ್ರಾಮದಲ್ಲಿ ಜಲಸ್ಪೋಟ ಉಂಟಾಗಿ ಹಾನಿ ಸಂಭವಿಸಿದೆ. ಈ ಸ್ಥಳವನ್ನು ಸೇವಾ ಭಾರತಿ ಅಡಿಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಅಭಿಷೇಕ್ ತೊಡಿಕಾನ, ಉಮಾಶಂಕರ್ ಅಡ್ಯಡ್ಕ, ಸುಧಾ ಬಾಚಿಗದ್ದೆ, ಯೋಗೀಶ್ ದಂಡೆಕಜೆ, ಬಿಪಿನ್ ಚಂದ್ರನಾಗೇಶ್, ಪೆರಾಲು ಲಕ್ಷ್ಮಣ್ ಪೇರಾಲು, ಅನಿಲ್ ಗೂನಡ್ಕ, ಮನೀಶ್ ಗೂನಡ್ಕ, ಬಬಿನ್ ಸಂಪಾಜೆ, ಹರೀಶ್ ಸಂಪಾಜೆ,...
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಂಧನವಾಗಿರುವುದಾಗಿ ತಿಳಿದು ಬಂದಿದೆ. ದ.ಕ ಜಿಲ್ಲಾ ಪೊಲಿಸರು ಬಂಧಿಸಿರುವುದಾಗಿ ತಿಳಿದು ಬಂದಿದ್ದು ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಆ.10 ರಂದು ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ 6 ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆದಿತ್ತು. ಈ ಬಗ್ಗೆ ಇಂದು ಮಧ್ಯಾಹ್ನ 12.30 ಕ್ಕೆ...
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಘಟನೆಗೆ ಸಂಬಂಧಿಸಿದಂತೆ ಆ.9 ರಂದು ಬಂಧಿತನಾದ ಸುಳ್ಯ ಜಟ್ಟಿಪಳ್ಳ ನಿವಾಸಿ ಆರೋಪಿ ಸಿ.ಎ.ಕಬೀರ್ ಎಂಬಾತನನ್ನು ಆ.10 ರಂದು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸುಳ್ಯ ನ್ಯಾಯಾಲಯದಿಂದ ಆಗಸ್ಟ್ 12 ರ ವರೆಗೆ ಆತನಿಗೆ ಎರಡು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.
ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಆ.10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಅಂಗವಾಗಿ ಒಂದರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡ್ ಜೋಲ್ ಮಾತ್ರೆಗಳ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿ ಶ್ರೀಮತಿ ಲಲಿತಾ ಮಾಹಿತಿ ನೀಡಿದರು. ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ...
Loading posts...
All posts loaded
No more posts
