ಸುಳ್ಯದಲ್ಲಿ (ಆ.27) ನಾಳೆ ಕರೆಂಟಿಲ್ಲ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ಪಿ. ಪೀಡರುಗಳಲ್ಲಿ ಆ.27 ರಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಕೇರ್ಪಳ, ಶ್ರೀರಾಂಪೇಟೆ, ಜಬಳೆ, ಡಿಪ್ಪೋ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ,ಕೇನ್ಯ, ಆರಂತೋಡು, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ...

ಯೇನೆಕಲ್ಲು :- ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಪಂಜ-ಸುಬ್ರಹ್ಮಣ್ಯ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಯೇನೆಕಲ್ಲು, ಯೇನೆಕಲ್ಲು ಬಿ, ಸುಬ್ರಹ್ಮಣ್ಯ, ದೇವರಹಳ್ಳಿ-ಕಲ್ಲಾಜೆ, ಕುಲ್ಕುಂದ ಒಕ್ಕೂಟಗಳ ಸಹಯೋಗದೊಂದಿಗೆ ಆ.25 ರಂದು ಶ್ರೀ ಆದಿಶಕ್ತಿ ಭಜನಾ ಮಂದಿರ ಬಾಲಾಡಿ-ಯೇನೆಕಲ್ಲು ಇಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ನೂತನ ಒಕ್ಕೂಟಗಳ ಪದಗ್ರಹಣ ಸಮಾರಂಭ ನಡೆಯಿತು. ಆದಿಶಕ್ತಿ...
Ad Widget

ಪಂಜ: ಫ್ರೆಂಡ್ಸ್ ಸರ್ಕಲ್ ವತಿಯಿಂದ ಶಾಲೆಯ ಪಂಪ್ ಖರೀದಿಗೆ ದೇಣಿಗೆ ಹಸ್ತಾಂತರ

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪಂಪ್ ಖರೀದಿಗೆಫ್ರೆಂಡ್ಸ್ ಸರ್ಕಲ್ ಕೃಷ್ಣ ನಗರ ಪಂಜ ಇದರ ವತಿಯಿಂದ ರೂ.27500 ದೇಣಿಗೆಯ ಹಸ್ತಾಂತರ ಕಾರ್ಯಕ್ರಮ ಆ.25 ರಂದು ಜರುಗಿತು. ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಡಾ|ದೇವಿಪ್ರಸಾದ್ ಕಾನತ್ತೂರ್, ಕಾರ್ಯದರ್ಶಿ ಲಿಗೋಧರ ಆಚಾರ್ಯ,ಪೂರ್ವಾಧ್ಯಕ್ಷರರಾದ ನಾರಾಯಣ ಕೃಷ್ಣನಗರ, ಚೆನ್ನಕೇಶವ ಆಚಾರ್ಯ ರವರುಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ...

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಕಲ್ಕಿ ಮೊಬೈಲ್ ಮಳಿಗೆಯಲ್ಲಿ ಸೆ.3 ರವರೆಗೆ ಬಿಗ್ ಆಫರ್

ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕೃಷ್ಣಪ್ರಸಾದ್ ಮಾಲಕತ್ವದ ಕಲ್ಕಿ ಮೊಬೈಲ್ ಮಳಿಗೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬಿಗ್ ಆಫರ್ ಸೆ.3 ರವರೆಗೆ ನಡೆಯಲಿದೆ. ರೂ.8000 ಮೇಲ್ಪಟ್ಟ ಯಾವುದೇ ಮೊಬೈಲ್ ಗಿಫ್ಟ್ ಉಚಿತ. ಎಲ್ಲಾ ಬಿಡಿಭಾಗಗಳ ಮೇಲೆ ಶೇ.70ರವರೆಗೆ ಭಾರಿ ರಿಯಾಯತಿಯಿದೆ. ಅಲ್ಲದೇ ನಿಮ್ಮ ಹಳೆಯ ಮೊಬೈಲನ್ನು ನ ಹೊಸ...

ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್

ಆರೋಗ್ಯ ಇಲಾಖೆ ಮತ್ತು ವಿಕಲಚೇತನರ ಇಲಾಖೆ ವತಿಯಿಂದ ತಾಲ್ಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ಆ. 23 ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ತಾಲ್ಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ತಾಲ್ಲೂಕು ಪಂಚಾಯತ್ ನ ವಿಕಲಚೇತನ ಇಲಾಖೆಯ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಪ್ರವೀಣ್ ನಾಯಕ್,...

ಕೆವಿಜಿ: ಶಿಕ್ಷಕರ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾಸಿಕ ಸಭೆ

ಕೆವಿಜಿ ಸಂದರ್ಶನದಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಅ.22ರಂದು ಶಿಕ್ಷಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾಸಿಕ ಸಭೆ ನಡೆಯಿತು.ಸಭೆಯಲ್ಲಿ ಐಪಿಎಸ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು ಜೊತೆಗೆ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ ಇವರ ನಿರ್ದೇಶನದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ...

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ರಚನೆ.

ಇತ್ತೀಚೆಗೆ ನಡೆದ ಅಜ್ಜಾವರದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿಗೆ ಗೌರವ ಸಲಹೆಗಾರರಾಗಿ ನಿವೃತ್ತ ಕೆ ಎಸ್‌ ಆರ್ ಟಿ.ಸಿ ಉದ್ಯೋಗಿ ಕರುಣಾಕರ ಗೌಡ ಕೊಡೆಂಕಿರಿ, ಸುಳ್ಯ ಪಶು ಸಂಗೋಪನ ಇಲಾಖೆಯ ನಿವೃತ್ತ ಉದ್ಯೋಗಿ ವಿಜಯ ಪಡ್ಡಂಬೈಲು ಹಾಗೂ ಎಲ್.ಐ.ಸಿ....

ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ರಿಕಾಲಿಂಗ್ ಅಮರ ಸುಳ್ಯ ಕೃತಿ ಬಿಡುಗಡೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ "ರಿಕಾಲಿಂಗ್ ಅಮರ ಸುಳ್ಯ" ಕೃತಿಯನ್ನು ಆ. 24 ರಂದು ಮಂಗಳೂರಿನ ತುಳು-ಭವನದ ಸಿರಿಚಾವಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಪುಸ್ತಕ ಲೋಕಾರ್ಪಣೆಯ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತುಳುವ ಬೊಳ್ಳಿ ಶ್ರೀ ದಯಾನಂದ ಜಿ. ಕತ್ತಲ್ ಸಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿಗಳಾದ ಕಾರ್ಗಿಲ್ ಯುದ್ದದ ಸಮಯದಲ್ಲಿ...

ಆ. 31 ರಂದು ವಳಲಂಬೆಯಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ವಳಲಂಬೆಯಲ್ಲಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 19 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಆ. 31 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿ ರವೀಂದ್ರ ಹೊಸೊಳಿಕೆ ತಿಳಿಸಿದ್ದಾರೆ.ಆ. 31 ರಂದು ಬೆಳಿಗ್ಗೆ 9 ಗಂಟೆಗೆ...

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ (ರಿ.) ಸುಳ್ಯ, ಅರಣ್ಯ ಇಲಾಖೆ ಸುಳ್ಯ ಅಧಿಕಾರಿಗಳ ಮನೋರಂಜನಾ ಸಂಘ (ರಿ) ಸುಳ್ಯ ಇವರ ಸಹಯೋಗದಲ್ಲಿ ಸುಳ್ಯದ ಸ್ತ್ರೀಶಕ್ತಿ ಭವನದಲ್ಲಿ ಆ.24 ರಂದು ವನಮಹೋತ್ಸವ, ವಿಶ್ವ ಸ್ತನ್ಯಪಾನ ಸಪ್ತಾಹ, ಮಹಿಳೆಯರಿಗೆ ಪಶುಸಂಗೋಪನಾ ಇಲಾಖೆಯಿಂದ ಸಿಗುವ ವಿವಿಧ ಸವಲತ್ತುಗಳ ಕುರಿತು...
Loading posts...

All posts loaded

No more posts

error: Content is protected !!