- Saturday
- July 25th, 2026
ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ ತೋಟದಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗ ಪತ್ತೆಯಾಗಿದ್ದು ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದರು. ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ...
ಸವಣೂರಿನ ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡೀಲು ಬಿದ್ದಿದ್ದು, ಸವಣೂರಿನ ಸಮಾನ ಮನಸ್ಕ ಯುವಕರ ತಂಡ ಅಂಬಾ ಬ್ರದರ್ಸ್ ಇದರ ವತಿಯಿಂದ ಈ ಗದ್ದೆಯಲ್ಲಿ ಈ ಬಾರಿ ಬೇಸಾಯ ಆರಂಭವಾಗಿದೆ.ಅಂಬಾ ಬ್ರದರ್ಸ್ ತಂಡವು ಈಗಾಗಲೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಬೇಸಾಯಕ್ಕೆ ಮುಂದಾಗಿದ್ದು ಈ...
ಕೊಡಗು ಸಂಪಾಜೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜು. 17 ರಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಭರತ್, ಸದಸ್ಯರುಗಳಾದ ಕುಮಾರ್ ಚೆದ್ಕಾರ್, ಶ್ರೀಮತಿ...
ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಮಳಿಗೆಗಳನ್ನು ಇಂದಿನಿಂದ (ಏ.30) ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 6-10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ...
ಕರ್ನಾಟಕ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಅಡಿಕೆಯ ಹಳದಿರೋಗ ಕುರಿತ ಸಂಶೋಧನೆಗೆ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ ಕವಾಗಿ 25 ಕೋಟಿ ರೂ ಪ್ಯಾಕೇಜನ್ನು ಘೋಷಿಸಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಪ್ಯಾಕೇಜ್ ನ ರೂಪುರೇಷೆ ಸಿದ್ಧವಾಗುವ ಮೊದಲೇ ಅದರೊಳಗೆ ಹುಳುಕು ಹುಡುಕುವ ಕೆಲಸವನ್ನು ಬಿಟ್ಟು ರಾಜ್ಯದಲ್ಲಿ ಮೊದಲ...
ವಳಲಂಬೆ : ಸಿನ್ಸಿಯರ್ ಆಯಿಲ್ & ಫುಡ್ ಇಂಡಸ್ಟ್ರೀಸ್ ನಿಂದ ತೆಂಗಿನಎಣ್ಣೆ ಮತ್ತು ಮಸಾಲೆ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ
ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ಆರಂಭವಾಗಿರುವ ಸಿನ್ಸಿಯರ್ ಆಯಿಲ್ & ಫುಡ್ ಇಂಡಸ್ಟ್ರೀಸ್ ಇದರ ಸಿನ್ಸಿಯರ್ ಆಯಿಲ್ ಮತ್ತು ಮಸಾಲೆ ಉತ್ಪನ್ನಗಳು ಸುಳ್ಯ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಕೊಬ್ಬರಿ ಒಣಗಿಸಲು ಸಮಯ ಹಾಗೂ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಸ್ಥಳೀಯರಿಗೆ ಉಪಯೋಗುವ ಉದ್ದೇಶದಿಂದ ಸುಲಿದ ತೆಂಗಿನಕಾಯಿಯನ್ನು ಕೊಟ್ಟರೆ ಯಾಂತ್ರಿಕೃತವಾಗಿ ಒಣಗಿಸಿ ಸಂಸ್ಕರಿಸಿ ಉತ್ತಮ...
ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಂಘದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ 13 ರಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಇವರು ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ವಾರ್ಷಿಕ ಕಾರ್ಯನಿರ್ವಹಣಾ ವರದಿ ಮತ್ತು ಕಾರ್ಯಸೂಚಿಗಳನ್ನು ಮಂಡಿಸಿದ ಅಧ್ಯಕ್ಷರು ನಮ್ಮ ಸಂಘವು ಈ ಆರ್ಥಿಕ ವರ್ಷದಲ್ಲಿ ವಾರ್ಷಿಕ 22,79,672.90...
ದೇಶದಾದ್ಯಂತ ರೈತರ ಪ್ರತಿಭಟನೆ ರೈತರ ಹಕ್ಕಿಗಾಗಿ ನಡೆಯುತ್ತಿದ್ದು, ಆಡಳಿತ ಪಕ್ಷದಲ್ಲಿ ಇರುವ ರೈತ ಸಂಘಟನೆಯವರು ರೈತ ಮೋರ್ಚಾದ ಹೆಸರಿನಲ್ಲಿ ಪ್ರಾಮಾಣಿಕ ರೈತರನ್ನು ಕಡೆಗಣಿಸುವುದು ಸರಿಯಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇವರು ರೈತರ ಬಗ್ಗೆ ಮಾತನಾಡುವ ನೈತಿಕತೆ ಇವರಲ್ಲಿ ಇಲ್ಲ ಎಂದು ಹಸಿರು ಸೇನೆ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ...
ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಮಾಸ್ತಿಕಟ್ಟೆ ಮೊಯಿದೀನ್ ಕಾಂಪ್ಲೆಕ್ಸ್ ನಲ್ಲಿ ಬೆಳ್ಳಾರೆಯ ಸಿಂಚನ ಆಟೋ ಮಾಲಕರಾದ ಲೋಕೇಶ್ ಮೊಗಪ್ಪೆ ಮತ್ತು ಶಶಿಕುಮಾರ್ ಮೊಗಪ್ಪೆ ಮಾಲಕತ್ವದ ಸಿಂಚನ ಡೆವಲಪ್ಪರ್ಸ್ ರಬ್ಬರ್ ಖರೀದಿ ಕೇಂದ್ರ ನ.22 ರಂದು ಶುಭಾರಂಭಗೊಂಡಿತು.ಬೆಳಗ್ಗೆ ಗಣಹೋಮ ನೆರವೇರಿತು.ಲೋಕೇಶ್ ಮೊಗಪ್ಪೆ ಹಾಗೂ ಶಶಿಕುಮಾರ್ ಮೊಗಪ್ಪೆಯವರ ತಾಯಿ ಶ್ರೀಮತಿ ಅನ್ನಲಕ್ಷ್ಮೀ ದೀಪ ಬೆಳಗಿಸಿ ಮಳಿಗೆಯ ಉದ್ಘಾಟನೆಗೈದರು. ಈ ಸಂದರ್ಭದಲ್ಲಿ...
ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಪೆರುವಾಜೆ ಆಳ್ವಪಾರ್ಮ್ಸ್ ಸಹಯೋಗದಲ್ಲಿ ಆಳ್ವಪಾರ್ಮ್ಸ್ ನಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಕಾರ್ಯಕ್ರಮ ನ.21 ರಂದು ನಡೆಯಿತು. ಆಳ್ವಫಾರ್ಮ್ಸ್ ಯಜಮಾನಿ ಕುಂಬ್ರ ಲಲಿತಾ ಎಸ್.ಆಳ್ವ ಅವರು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್...
Loading posts...
All posts loaded
No more posts
