ಆಡ್ತಲೆ : ಆನೆ ದಾಳಿ ಕೃಷಿ ಹಾನಿ – ಶಾಸಕರ ಭೇಟಿ

ಅರಂತೋಡು ಗ್ರಾಮದ ಅಡ್ತಲೆ ಮತ್ತಿತರ ಭಾಗಗಳಲ್ಲಿ ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ, ಕಿರ್ಲಾಯ ಶಾಲೆಯ ಆವರಣಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಭೇಟಿಯಾಗಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಹರೀಶ ಕಂಜಿಪಿಲಿ, ಪ್ರಮುಖರಾದ ಶೇಖರ ಚೋಡಿಪಣೆ, ಭಾರತಿ ಉಳುವಾರು, ಬೂತ್...

ಜೆಸಿಐ ಉಡುಪಿ ಸಿಟಿ ವತಿಯಿಂದ ಕೃಷ್ಣ ಅಚ್ರಪ್ಪಾಡಿಯವರಿಗೆ ಸನ್ಮಾನ

ಉಡುಪಿ ಸಿಟಿಯ ಜೆಸಿಐ ವತಿಯಿಂದ ನಡೆದ ಟಾಪ್ ಟ್ರೈನರ್ಸ್ ಟ್ರೈನಿಂಗ್ ನಲ್ಲಿ ಭಾಗವಹಿಸಿದ್ದ ಕೃಷ್ಣ ಅಚ್ರಪ್ಪಾಡಿಯವರ ಸಾಧನೆಯನ್ನು ಗುರುತಿಸಿ ಜ.31 ರಂದು ಸನ್ಮಾನ ಮಾಡಲಾಯಿತು.ಕೃಷ್ಣ ಅಚ್ರಪ್ಪಾಡಿಯವರು ವಿದ್ಯುತ್ ಹರಿಯುವಾಗ  ಬರಿಗೈಯಿಂದ ನೇರವಾಗಿ ಮುಟ್ಟಿದಾಗ ಅವರ ಶರೀರವೆಲ್ಲಾ ವಿದ್ಯುತ್ ಮಯವಾಗುತ್ತದೆ. ಅವರ ಶರೀರದ ಯಾವುದೇ ಭಾಗಕ್ಕೆ ಟೆಸ್ಟರ್ ತಾಗಿಸಿದರೂ ಟೆಸ್ಟರ್ ಉರಿಯುತ್ತದೆ. ಆದರೆ ಇವರಿಗೆ ಏನೂ ಆಗುವುದಿಲ್ಲ(ಹಾಗಂತ...
Ad Widget

ಬೆಳ್ಳಾರೆ : ಭಾರತ್ ಕೃಷಿ ಅಭಿವೃದ್ಧಿ
ಸಂಸ್ಥೆ ವತಿಯಿಂದ ಫಲಾನುಭವಿಗಳಿಗೆ ಏಣಿ ವಿತರಣೆ

ಬೆಳ್ಳಾರೆ, ಕೊಡಿಯಾಲ ಹಾಗೂ ಪೆರುವಾಜೆ ಮೂರು ಗ್ರಾಮಗಳ 35 ಮಂದಿ ಫಲಾನುಭವಿ ರೈತರಿಗೆ ಫೆ.11 ರಂದು ವಿಟ್ಲದ ಭಾರತ್ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿರಾಂಬೃತ ಯೋಜನೆಯ ಮೊದಲ ಹಂತದ ಏಣಿಯನ್ನು ವಿತರಿಸಲಾಯಿತು.ಈ ವಿತರಣಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು,ಶಪಿಡಿಒ ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಫಲಾನುಭವಿ ರೈತರು ಪಾಲ್ಗೊಂಡಿದ್ದರು.

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ
ಸವಲತ್ತುಗಳ ವಿತರಣೆ ; “ಸಂಪಾಜೆ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ” :ಎಂ.ಎ ಗಫೂರ್

"ಗ್ರಾಮಗಳ ಅಭಿವೃದ್ಧಿಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿಯಾಗಿದೆ" ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ರವರ ವಿಶೇಷ ಮುತುವರ್ಜಿಯಿಂದ ಮುಖ್ಯ...

ಕಂದ್ರಪ್ಪಾಡಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಂದ್ರಪ್ಪಾಡಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.12ರಂದು ನಡೆಯಿತು.ಆಮಂತ್ರಣ ಪತ್ರಿಕೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲುರವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನವರು ಉಪಸ್ಥಿತರಿದ್ದರು.

ಬೆಳ್ಳಾರೆ ಗ್ರಾ.ಪಂ.ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಭೇಟಿ ನೀಡಿದ ಕೆ.ಪಿ.ಎಸ್ ವಿದ್ಯಾರ್ಥಿಗಳು

ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ-ಗ್ರಂಥಾಲಯದಲ್ಲಿ ಫೆ.10 ರಂದು "ಶಾಲಾ ವಿದ್ಯಾರ್ಥಿಗಳು ಒಂದು ದಿನ" ಕಾರ್ಯಕ್ರಮ ನಡೆಯಿತು.  ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಖುಷಿಪಟ್ಟರು.‌ಈ ಸಂದರ್ಭದಲ್ಲಿ ಸಹಶಿಕ್ಷಕರುಗಳಾದ ಅರುಣಾಕ್ಷಿ ಕೆ.ಎಲ್, ಸುಶೀಲ ಹೆಗಡೆ, ಇಳಶ್ರೀ ಸಿ.ಜಿ, ತೃಪ್ತಿ ಎಂ.ಎಂ ಉಪಸ್ಥಿತರಿದ್ದರು.ಗ್ರಂಥಾಪಾಲಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿ ವಂದಿಸಿದರು.

ಸುಳ್ಯ : ಬಿಜೆಪಿ ಮಹಿಳಾ ಮೋರ್ಚಾದಿಂದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ಇದರ ವತಿಯಿಂದ ಸುಳ್ಯ ಭಾಗದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿಯ ವ್ಯವಸ್ಥೆಗಳ ಮತ್ತು ಬೇಡಿಕೆಗಳ ಬಗ್ಗೆ ಗಮನಿಸಲಾಯಿತು. ಹೊಸ ಕಟ್ಟಡದ ಬೇಡಿಕೆಯಿದ್ದು, ಶಾಸಕರ ಜೊತೆ ಮತ್ತು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವ ಭರವಸೆ ನೀಡಿದರು.ಈ...

ಫೆ.15ರಂದು ಎಲಿಮಲೆಯಲ್ಲಿ
ಬೃಹತ್ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಗ್ರಾಮ ಪಂಚಾಯತ್ ದೇವಚಳ್ಳ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಆರೋಗ್ಯ ಉಪಕೇಂದ್ರ ಎಲಿಮಲೆ ಮತ್ತು ಕಂದ್ರಪ್ಪಾಡಿ ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಎಲಿಮಲೆ,  ಲಯನ್ಸ್ ಕ್ಲಬ್ ಗುತ್ತಿಗಾರು, ಜೆ.ಸಿ.ಐ ಸುಳ್ಯ ಪಯಸ್ವಿನಿ,  ಶಿವಾಜಿ ಫ್ರೆಂಡ್ಸ್ ಕ್ಲಬ್(ರಿ.) ಹುರುಳಿಯಡ್ಕ, ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ (ರಿ.) ಎಲಿಮಲೆ ಇವುಗಳ...

ವಳಲಂಬೆ : ಅಡಿಕೆ ಕಳ್ಳರನ್ನು ಹಿಡಿದು ಪೋಲೀಸರಿಗೊಪ್ಪಿಸಿದ ಸ್ಥಳೀಯರು

ಅಡಿಕೆಗೆ ಉತ್ತಮ ಬೆಲೆ ಇರುವ ಹಿನ್ನೆಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಫೆ.11 ರಂದು ಸಂಜೆ ವಳಲಂಬೆ ಸಮೀಪ ಅಡಿಕೆ ಕಳ್ಳತನ ನಡೆಸುತ್ತಿದ್ದ ಮೂವರನ್ನು ಹಿಡಿದು ಪೋಲಿಸರು ಒಪ್ಪಿಸಿದ್ದಾರೆ.ಕಳ್ಳತನ ನಡೆಸುತ್ತಿದ್ದಾರೆ ಎಂಬ ಶಂಕೆಯಿಂದ ಸ್ಥಳೀಯರು ಕಾದು ಕುಳಿತು ಕಳ್ಳರನ್ನು ಹಿಡಿದಿದ್ದಾರೆ. ಕಳ್ಳತನ ನಡೆಸಿದ ಸತೀಶ್ ತಳೂರು, ಶಿವ ಅಡ್ಟನಪಾರೆ ಹಾಗೂ ಸರೋಜ ಎಂಬುವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳ್ಳಾರೆಯ ಶುದ್ಧ ಕುಡಿಯುವ ನೀರಿನ ಘಟಕದ ಟ್ಯಾಂಕ್ ಸ್ಪೋಟ

ಬೆಳ್ಳಾರೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಶುದ್ಧ ಕುಡಿಯುವ ನೀರಿನಘಟಕದ ಟ್ಯಾಂಕ್ ಇಂದು ಸ್ಪೋಟಗೊಂಡಿದೆ.ತಾಂತ್ರಿಕ ಅಡಚಣೆಗಳಿಂದ ಘಟಕದ ಅನಿಲ ಸಂಪರ್ಕದ ಸಿಲಿಂಡರ್ ಸ್ಪೋಟ ಸಂಭವಿಸಿದ್ದು, ಇಲ್ಲಿ ಗಾಜುಗಳು ಪುಡಿ ಪುಡಿಯಾಗಿದೆ.ಹಲವು ವರುಷಗಳಿಂದ ಕಾರ್ಯ ನಿರ್ವಹಿಸುತ್ತಾ ಇದ್ದ ಈ ಟ್ಯಾಂಕ್ ಸ್ಪೋಟದ ಬಗ್ಗೆ ಸುಳ್ಯ ತಾಲೂಕು ಪಂಚಾಯತ್ ಇಒ ರವರು ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ‌.ಈ...
Loading posts...

All posts loaded

No more posts

error: Content is protected !!