- Monday
- September 14th, 2026
ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕರ್ನಾಟಕ ಹಾಲು ಒಕ್ಕೂಟದ ಸಹಯೋಗದಲ್ಲಿ ಅಡ್ತಲೆಯಲ್ಲಿ ನೂತನ ಹಾಲು ಸಂಗ್ರಹಣಾ ಕೇಂದ್ರ ತೆರೆಯುವ ಕುರಿತು ಪೂರ್ವಭಾವಿ ಸಭೆ ಹಾಗೂ ಹೈನುಗಾರಿಕೆಯ ಕುರಿತು ಮಾಹಿತಿ ಕಾರ್ಯಾಗಾರವು ಸಂಘದ ಅಧ್ಯಕ್ಷರಾದ ಮೋಹನ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಮನಮೋಹನ ಮೇಲಡ್ತಲೆ ಇವರ ಮನೆಯಲ್ಲಿ ನಡೆಯಿತು. ಅರಂತೋಡು ಹಾಲು ಉತ್ಪಾದಕರ ಸಂಘದ ನೇತೃತ್ವದಲ್ಲಿ...
ಫೆ.25 ರಂದು ಸುರಿದ ಗಾಳಿ ಮಳೆಗೆ ಆರಂತೋಡು ಕೃಷ್ಣಪ್ಪ ಗೌಡ ಕಿರ್ಲಾಯ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು, ಹಂಚುಗಳು ಪುಡಿ ಪುಡಿಯಾಗಿದ್ದು, ಸಂಪೂರ್ಣ ಮನೆಗೆ ಕೂಡ ಹಾನಿಯಾಗಿ ನಷ್ಟ ಸಂಭವಿಸಿದೆ.
ಸುಬ್ರಹ್ಮಣ್ಯ ಫೆಬ್ರವರಿ 26 : “ಅನ್ನದಾನ, ವಸ್ತ್ರದಾನ, ನೇತ್ರದಾನ, ಭೂದಾನ, ಗೋದಾನ, ವಿದ್ಯಾದಾನ ಇವೆಲ್ಲವುಗಳಲ್ಲಿ ಶ್ರೇಷ್ಠವಾದಂತಹ ಹಾಗೂ ಮನುಷ್ಯರ ಜೀವ ಉಳಿಸುವ ದಾನ ರಕ್ತದಾನವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗದಿರುವುದರಿಂದ ಮನುಷ್ಯರ ದೇಹದಿಂದಲೇ ತೆಗೆದು ಇನ್ನೊಬ್ಬ ರೋಗಿಗೆ ನೀಡಬೇಕಾಗುತ್ತದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಹೊಸ ಚೈತನ್ಯ ಕೂಡ ಮೂಡುತ್ತದೆ. ಆದುದರಿಂದ ರಕ್ತದ...
ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ.ಕ ಮತ್ತು ಉಡುಪಿ ಜಿಲ್ಲೆ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯ ತಾಲೂಕಿನ ಅರ್ಹ ಫಲಾನುಭವಿ 100 ಕುಟುಂಬಗಳಿಗೆ ದಿನ ನಿತ್ಯ ಉಪಯೋಗದ ರೂ.2 ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಗಾಂಧಿನಗರ ಸಂಸ್ಥೆ ಯ ಕಚೇರಿ ವಠಾರದಲ್ಲಿ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಜಮೀ...
ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ.) ಸುಳ್ಯ ತಾಲೂಕು ಇದರ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆಯು ಸುಳ್ಯ ಯೋಜನ ಕಚೇರಿ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪದ್ಮನಾಭ...
ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯಲ್ಲಿ ನಿರ್ಮಾಣವಾದ ನೂತನ ಆಂಗನವಾಡಿಯನ್ನು ಇಂದು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಮೊಹಿನಿ ಕಟ್ಟ, ಉಪಾಧ್ಯಕ್ಷ ಮಾಧವ ಚಾಂತಾಳ, ಸೊಸೈಟಿ ಅಧ್ಯಕ್ಷ ಡಾ.ಸೋಮಶೇಖರ ಕಟ್ಟೆಮನೆ, ಅಂಗನವಾಡಿ ಸ್ಥಳದಾನಿಗಳು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ವಿಧ್ಯಾರ್ಥಿಗಳು, ಪೋಷಕರು ,ಶಿಕ್ಷಕರು ಹಾಗೂ ಊರವರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ರೊ.ರಾಮಕೃಷ್ಣ ಪಿ.ಕೆ.ಯವರು ಫೆ.24 ರಂದು ಭೇಟಿ ನೀಡಿದರು. ರಾತ್ರಿ ಬೆಳ್ಳಾರೆಯ ದೇವಿ ಹೈಟ್ಸ್ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ವೀರನಾಥ್ ವರದಿ ಮಂಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಇಬ್ಬರಿಗೆ ಸನ್ಮಾನ ನಡೆಯಿತು....
ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ ಫೆ. 26 ಗುರುವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ1- ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಆಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಫೆ.28 ಶನಿವಾರದಂದು ಪೂರ್ವಾಹ್ನ 10:30ಕ್ಕೆ ಯೇನೆಕಲ್ಲು ಸಂತೃಪ್ತಿ ಸಭಾಭವನದಲ್ಲಿ “ಅಡಿಕೆ ಕೃಷಿ ನಿರ್ವಹಣೆ - ರೋಗ ನಿವಾರಣೆ ಮಾಹಿತಿ ಕಾರ್ಯಕ್ರಮ” ನಡೆಯಲಿದ್ದು, ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ ಕಾರ್ಯಕ್ರಮವನ್ನು...
ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕನಕಪುರ ಐವರ್ನಾಡು ಇದರ ಬ್ರಹ್ಮಕಲಶೋತ್ಸವವು ಎಪ್ರಿಲ್ 29, 30 ಹಾಗೂ ಮೇ.01 ರಂದು ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಮಿತಿ ರಚನೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಸೆಲ್ವಕುಮಾರ್, ಅಧ್ಯಕ್ಷರಾಗಿ ಮುತ್ತುಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕನ್ನದಾಸನ್ ಆಯ್ಕೆಯಾದರು. ಸದಸ್ಯರುಗಳಾಗಿ ಪೆರುಮಾಳ್, ವಿಜಯರಾಜ್, ರಾಮಸ್ವಾಮಿ, ಅಲಗರಾಜ್, ಜ್ಞಾನಶೇಖರ, ಗುಣಶೇಖರ, ಪದ್ಮನಾಭ ಆಯ್ಕೆಯಾಗಿದ್ದಾರೆ.
Loading posts...
All posts loaded
No more posts
