“ಸಮಾಜಮುಖಿ ಸೇವೆಯು ತ್ರಿಚಕ್ರ ಸಾರಥಿಗಳ ಧ್ಯೇಯವಾಗಲಿ” : ರಾಜೇಶ್ ಎನ್.ಎಸ್ ಅಭಿಮತ ; ಕುಕ್ಕೆ ಆಟೋ ಚಾಲಕ ಸಂಘದ ಪದಗ್ರಹಣ

ಸುಬ್ರಹ್ಮಣ್ಯ : “ಜನತೆಗೆ ಸೇವೆ ನೀಡುವ ಮೂಲಕ ಉತ್ತಮ ಕಾರ್ಯವನ್ನು ಅಟೋ ಸಂಘವು ನಡೆಸುತ್ತಿದೆ. ಜನ ಹಿತ ಕಾರ್ಯವನ್ನು ನೆರವೇರಿಸುವುದು ತ್ರಿಚಕ್ರ ಸಾರಥಿಗಳ ಧ್ಯೇಯವಾಗಬೇಕು. ಪ್ರತಿಯೊಬ್ಬ ಚಾಲಕರೂ ಸಮಾಜಸೇವೆಗೆ ಮುಂದಡಿಯಿಟ್ಟರೆ ಸಂಘಕ್ಕೆ ಕೂಡಾ ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ನಿಕಟಪೂರ್ವ ಗ್ರಾ.ಪಂ ಉಪಾಧ್ಯಕ್ಷರಾದ ರಾಜೇಶ್ ಎನ್.ಎಸ್ ಹೇಳಿದರು. ಸುಬ್ರಹ್ಮಣ್ಯದ ಕುಕ್ಕೆಶ್ರೀ ಅಟೋ...

ಯೇನೆಕಲ್ಲು : ಮಹಿಮಾತ್ಮಕ ಬಚ್ಚನಾಯಕ ದೈವದ ಭಕ್ತಿ ಶ್ರದ್ಧೆಯ ನೇಮೋತ್ಸವ

ಸುಬ್ರಹ್ಮಣ್ಯ : ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಬುಧವಾರ ಇತಿಹಾಸ ಪ್ರಸಿದ್ಧ ಹಾಗೂ ಮಹಿಮಾತ್ಮಕ ಶ್ರೀ ಬಚ್ಚನಾಯಕ ದೈವದ ನೇಮೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಸಹಸ್ರಾರು ಭಕ್ತಾದಿಗಳು ಕಾರಣೀಕ ದೈವದ ದರುಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಅಲ್ಲದೆ ಕಾರಣೀಕ ದೈವದ ನೇಮ ನಡಾವಳಿಗಳನ್ನು ವೀಕ್ಷಿಸಿದರು.ಹರಿಕೆ ಸಮರ್ಪಣೆ :...
Ad Widget

ಬೆಳ್ಳಾರೆ ಜ್ಞಾನದೀಪದಲ್ಲಿ ನೇರವಾಗಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿಗೆ ದಾಖಲಾತಿ ಆರಂಭ ; ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇಲ್ಲಿದೆ ಅವಕಾಶ

ಬೆಳ್ಳಾರೆಯ ಕಲ್ಪವೃಕ್ಷ ಆರ್ಕೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ ಸಂಸ್ಥೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಆಶಾಕಿರಣವಾಗಿದೆ. ಹಿಂದಿನ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆ ಬರೆದು ಶಿಕ್ಷಣವನ್ನು ಮುಂದುವರಿಸುವ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ. ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೆ ಹೊಸ ದಾರಿಯನ್ನು ತೋರಿಸಿಕೊಡುವ...

ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ 2025-26ನೇ ಸಾಲಿನ ಪುಟಾಣಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ 2025-26ನೇ ಸಾಲಿನ ಪುಟಾಣಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಮಾ.31 ರಂದು ಬಾಲವಿಕಾಸ ಸಮಿತಿ ಆಧ್ಯಕ್ಷೆ ಶ್ರೀಮತಿ ದೇವಿಕಾ.ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿ ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಸಹಾಯಕಿ ಶ್ರೀಮತಿ ಸುಜಾತ ಸಹಕರಿಸಿದರು.ಅಂಗನವಾಡಿ ಪುಟಾಣಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅಂಗನವಾಡಿಗೆ ವಿವಿಧ ಕೊಡುಗೆಗಳನ್ನು ನೀಡಿದರು.

ಮಾ.31ರಂದು ಸುರಿದ ಭಾರೀ ಗಾಳಿ-ಮಳೆಗೆ ಕಜ್ಜೋಡಿ ಹಾಗೂ ಮುಳ್ಳುಬಾಗಿಲು ಭಾಗದಲ್ಲಿ ಧರೆಗುರುಳಿದ ಅಡಿಕೆ ಹಾಗೂ ತೆಂಗಿನ ಮರಗಳು ; ಅಪಾರ ನಷ್ಟ ಅನುಭವಿಸಿದ ಕೃಷಿಕರು

ನಿನ್ನೆ(ಮಾ.31) ಸಂಜೆಯಿಂದ ರಾತ್ರಿವರೆಗೆ ಹರಿಹರ ಪಳ್ಳತ್ತಡ್ಕ ಹಾಗೂ ಕೊಲ್ಲಮೊಗ್ರು ಪರಿಸರದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಮಳೆಯ ಜೊತೆಗೆ ಬೀಸಿದ ಭಾರೀ ಗಾಳಿಯಿಂದಾಗಿ ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ಹಾಗೂ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಭಾಗದಲ್ಲಿ ಕೃಷಿ ತೋಟಗಳಿಗೆ ವಿಪರೀತ ಹಾನಿ ಸಂಭವಿಸಿದ್ದು, ಕೃಷಿಕರಿಗೆ ಅಪಾರ ನಷ್ಟ ಉಂಟಾಗಿದೆ.ಕಜ್ಜೋಡಿ ಭಾಗದ ಕೃಷಿಕರ ತೋಟಗಳಲ್ಲಿ ಅಂದಾಜು ತಲಾ 10...

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಿರಿಯ ಮುಖ್ಯೋಪಾಧ್ಯಾಯ ಶ್ರೀಧರ ಗೌಡ ಕೆರೆಮೂಲೆ ನಿವೃತ್ತಿ

2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಮರಮುಡ್ನೂರು ಗ್ರಾಮದ ಕೆರೆಮೂಲೆ ಶ್ರೀಧರ ಗೌಡರು ತಮ್ಮ ಸುದೀರ್ಘ 36 ವರ್ಷಗಳ ಶಿಕ್ಷಕ ವೃತ್ತಿಜೀವನದಿಂದ ಮಾ.31ರಂದು ನಿವೃತ್ತಿ ಹೊಂದಿದರು. ಅಮರಮುಡ್ನೂರು ಗ್ರಾಮದ ಪೈಲಾರಿನ ಕೆರೆಮೂಲೆ ದಿ. ಎಲ್ಯಣ್ಣ ಗೌಡ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಮಗನಾದ ಶ್ರೀಧರ ಗೌಡರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚೊಕ್ಕಾಡಿ...

ಸುಳ್ಯ ಹಾಗೂ ಕಡಬ ತಾಲೂಕಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಗುತ್ತಿಗಾರು, ನಡುಗಲ್ಲು, ಹರಿಹರ ಪಳ್ಳತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯ, ಐನೆಕಿದು ಸೇರಿದಂತೆ ಉಭಯ ತಾಲೂಕುಗಳ ಹಲವು ಕಡೆಗಳಲ್ಲಿ ಇಂದು(ಮಾ.31) ಸಂಜೆಯ ವೇಳೆಗೆ ಗಂಟೆಗಳ ಕಾಲ ಗುಡುಗು-ಸಿಡಿಲು ಹಾಗೂ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಕುಕ್ಕೆ ಸುಬ್ರಹ್ಮಣ್ಯ...

ಏ.01 ರಿಂದ ಜನಗಣತಿ ಪ್ರಾರಂಭ ; ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ – ಸಾರ್ವಜನಿಕರಿಗೆ ಸ್ವಯಂ ಗಣತಿಗೆ ಅವಕಾಶ

ಏ.01 ರಿಂದ ಪ್ರಾರಂಭವಾಗಲಿರುವ ಜನಗಣತಿ ದೇಶದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯುತ್ತಿದ್ದು, ಕೋವಿಡ್ ಕಾರಣದಿಂದ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಈಗ ನಡೆಸಲಾಗುತ್ತಿದೆ.ತ್ವರಿತ ದತ್ತಾಂಶ ಸಂಗ್ರಹಣೆ : ಹಿಂದೆ ಕಾಗದದ ಪಾರ್ಮ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಸ್ಕ್ಯಾನ್ ಮಾಡಿ ಫಲಿತಾಂಶ ಪ್ರಕಟಿಸಲು ವರ್ಷಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೆ ಈಗ ಡಿಜಿಟಲ್...

ಅಂದು ಶಿಕ್ಷಕರ ಜೀವನದಲ್ಲಿ ಚೆಲ್ಲಾಟ ಇಂದು ವಿದ್ಯಾರ್ಥಿಗಳ ಭಾಷಾವಾರು ವಿಷಯಗಳನ್ನು ಇಟ್ಟುಕೊಂಡು ಚೆಲ್ಲಾಟವೇ…?

ಮೊದಲು ಶಿಕ್ಷಕರ ಜೀವನದಲ್ಲಿ ಚೆಲ್ಲಾಟವಾಡಿದರು. ಅಂದರೆ ಶಿಕ್ಷಕರು ಕೇವಲ ಪಾಠ ಮಾಡುವುದಲ್ಲದೆ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಥವಾ ಹೊರಸೆಳೆಯುವ ಕಾಯಕ ಯೋಗಿಗಳಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಅಕ್ಷಯ ಪಾತ್ರೆಯಂತೆ ಕಾರ್ಯನಿರ್ವಹಿಸುವ ಅಂದ ಹಾಗೇ “ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ”.ವಿದ್ಯೆಯನ್ನು ಧಾರೆ ಎರೆಯುದರಲ್ಲಿ ಸೈ ಎನಿಸಿಕೊಂಡವರು ಗುರುಗಳು. ಅಲ್ಲದೆ ಶಿಕ್ಷಕರು ತಮ್ಮ ಪ್ರೀತಿಯ...

ಪೈಚಾರು : ಶ್ರೀ ವೀರಭದ್ರ ಮಾರಿಯಮ್ಮ ದೇವಿಗೆ ಗೋಕುಲ್ ದಾಸ್ ಅವರಿಂದ ಬೆಳ್ಳಿ ಸಮರ್ಪಣೆ

ಪೈಚಾರಿನಲ್ಲಿರುವ ಶ್ರೀ ವೀರಭದ್ರ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾರಿಯಮ್ಮ ದೇವಿಯ ಮೂರ್ತಿಗೆ ಬೆಳ್ಳಿಯ ಕವಚ ನಿರ್ಮಾಣದ ಕೆಲಸ ನಡೆಯುತ್ತಿದ್ದು, ಸುಳ್ಯದ ಗೋಕುಲ್ ದಾಸ್ ಅವರು ತಮ್ಮ ಹರಕೆಯ ಬೆಳ್ಳಿಯನ್ನು ದೇವಿ ಕ್ಷೇತ್ರದಲ್ಲಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಬೆಳ್ಳಿ ಸಮರ್ಪಣೆಗೆ ಗೋಕುಲ್ ದಾಸ್ ಅವರು ಚಾಲನೆ ನೀಡಿದರು.
Loading posts...

All posts loaded

No more posts

error: Content is protected !!