Ad Widget

*ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿಲಿಲ್ಲ ಕಟ್ರೇಲಾ ಟ್ರೇಡರ್ಸ್ ಮಾಲಕರ ಸ್ಪಷ್ಟನೆ*

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು , ಜುಲೈ 16ರಂದು ಸಂಜೆ ಆರು ಗಂಟೆಯ ವೇಳೆ ಗಾಂಧಿನಗರದಲ್ಲಿ ಒಂದು ಅಂಗಡಿಯಲ್ಲಿ ವ್ಯಾಪಾರ ನಡೆಯುತ್ತಿದ್ದು ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಸಾರಮಾಡಿತ್ತು. ಇದಕ್ಕೆ ಕೂಡಲೇ ಕಾರ್ಯಪ್ರವೃತ್ತರಾದ ಸಂಬಂಧಪಟ್ಟ ಅಧಿಕಾರಿಗಳು  ಅಂಗಡಿ ಮಾಲಕರನ್ನು ಕರೆಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ ಎಂದು...

ಕಟ್ಟೆಕಾರ್ ಬಳಿ ಸಂಜೆವರೆಗೆ ತೆರೆದಿದ್ದ ಅಂಗಡಿ

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸುಳ್ಯದಲ್ಲಿಯೂ ಸಹ ಇಂದು ಲಾಕ್ ಡೌನ್ ಹೇರಲಾಗಿತ್ತು. 11 ಗಂಟೆ ತನಕ ಅಗತ್ಯ ವಸ್ತುಗಳಿಗ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸುಳ್ಯ ಪೊಲೀಸ್ ಠಾಣೆ ಸಮೀಪದ ಅಂಗಡಿಯೊಂದು ಸಂಜೆ ಸುಮಾರು 6.30 ರ ತನಕ ಅರ್ಧ ಬಾಗಿಲು ತೆರೆದಿದ್ದು, ವ್ಯಾಪಾರ ವಹಿವಾಟು...
Ad Widget

ಕೊರೊನ ಸೋಂಕಿಗೆ ತಾಲೂಕಿನಲ್ಲಿ ಮೂರನೇ ಬಲಿ – ಐವರ್ನಾಡಿನ ವ್ಯಕ್ತಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸಾವು- ಇಂದು ಜಿಲ್ಲೆಯಲ್ಲಿ 6 ಬಲಿ

ಐವರ್ನಾಡು ಪರ್ಲಿಕಜೆಯ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿತರಾಗಿ ಮೃತಪಟ್ಟಿದ್ದಾರೆ . 54 ವರ್ಷದ ಈ ವ್ಯಕ್ತಿಯು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು . ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಿ ಗಂಟಲದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು . ಇದೀಗ ವರದಿ ಬಂದಿದ್ದು ಕೊರೊನಾ ಪಾಸಿಟಿವ್ ಆಗಿರುವುದಾಗಿ ತಿಳಿದುಬಂದಿದೆ . ಇದರೊಂದಿಗೆ ಸುಳ್ಯದಲ್ಲಿ ಕೊರೋನಾ ಕಾರಣದಿಂದ ಮೂರನೇ ಸಾವು ಸಂಭವಿಸಿದಂತಾಗಿದೆ. ದಕ್ಷಿಣ...

ಬ್ರಾಹ್ಮಣ ಸಮುದಾಯವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಆದೇಶ

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ ಆದೇಶ ಹೊರಡಿಸುವ ಮೂಲಕ ನಮ್ಮ...

ಜುಲೈ 15ರ ರಾತ್ರಿ 8ರಿಂದ – ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ : ಜಿಲ್ಲಾಧಿಕಾರಿ ಆದೇಶ ವೈದ್ಯಕೀಯ ಸೇವೆ ನಿರಂತರ, ದಿನಸಿ,ತರಕಾರಿ ಹಾಲು, ಪೇಪರ್ ಗೆ ಸಮಯ ನಿಗದಿ

ಜುಲೈ 15ರ ರಾತ್ರಿ 8ರಿಂದ ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ ಆದೇಶ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಸೇವೆ ನಿರಂತರ, ಅಗತ್ಯ ವಸ್ತುಗಳಾದ ದಿನಸಿ,ತರಕಾರಿ ಹಾಲು, ಪೇಪರ್ ಪಡೆಯಲು ಬೆಳಿಗ್ಗೆ 8 ರಿಂದ ಪೂ. 11 ಗಂಟೆಯವರೆಗೆ ನಿಗದಿ ಪಡಿಸಲಾಗಿದೆ. ಇನ್ನುಳಿದ ಬೇರೆ ಅಂಗಡಿಗಳು ಬಂದ್ ಆಗಲಿದೆ...

ಪಿಯುಸಿ ಫಲಿತಾಂಶ : ದ.ಕ, ಉಡುಪಿ ಸಮಬಲ -ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಶೇ 90.71 ಫಲಿತಾಂಶ ಪಡೆದಿದ್ದು, ಆದ್ದರಿಂದ ಎರಡು ಜಿಲ್ಲೆ ಪ್ರಥಮ ಸ್ಥಾನ ಪಡೆದಂತಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪರೀಕ್ಷಿಸಬೇಕಾದರೆ ಇಲ್ಲಿ ಕ್ಲಿಕ್ ಮಾಡಿ 👇 http://www.karresults.nic.in/indexPUC_2020.asp

ಮರ್ಕಂಜ ಯುವ ಕಾಂಗ್ರೆಸ್ : ಅಧ್ಯಕ್ಷ ಚರಣ್ ಕಾಯರ- ಕಾರ್ಯದರ್ಶಿ ಆದರ್ಶ ಪಾರೆಪ್ಪಾಡಿ

ಆದರ್ಶ ಪಾರೆಪ್ಪಾಡಿ ಮರ್ಕಂಜ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷ ರಾಗಿ ಯುವ ನ್ಯಾಯವಾದಿ ಚರಣ್ ಕಾಯರ ಹಾಗೂ ಕಾರ್ಯದರ್ಶಿ ಯಾಗಿ ಆದರ್ಶ ಪಾರೆಪ್ಪಾಡಿ ಆಯ್ಕೆಯಾಗಿದ್ದಾರೆ.

ಸಂವಿಧಾನ ಶಿಲ್ಪಿಗೆ ಅಪಮಾನ – ಸಂಪಾಜೆ ದಲಿತ ಸಂಘರ್ಷ ಸಮಿತಿ ಖಂಡನೆ

ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು, ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ.ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಭಾವನೆಗಳನ್ನು ಭಾರತದ ಪ್ರಜೆಗಳಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನವನ್ನು ಅಪಮಾನಿಸುವ ಮನಸ್ಥಿತಿಯವರು ಈ ಕಾಲದಲ್ಲೂ ಇದ್ದಾರೆ ಎಂಬುದು ಅತಂಕಕಾರಿ ವಿಷಯವಾಗಿದೆ.ಶಿಕ್ಷಣ ಸಂಘಟನೆ, ಹೋರಾಟ ಎಂಬ ಮೂರು ಧ್ಯೇಯವನ್ನು...

ಆದರ್ಶ ಗ್ರಾಮದಲ್ಲಿ ಆದರ್ಶ ಮೆರೆದ ಯುವಬ್ರಿಗೇಡ್ – ಅಂಧ ಕೂಲಿ ಕಾರ್ಮಿಕನಿಗೆ ಅರಮನೆ ಹಸ್ತಾಂತರ ಮಾಡಿದ ಚಕ್ರವರ್ತಿ

ಟಾರ್ಪಲ್ ಹಾಸಿದ ಜೋಪಡಿಯಲ್ಲಿ ವಾಸಿಸುತ್ತಿದ್ದ ಅಂಧವ್ಯಕ್ತಿಗೆ ಇಂದು ಅರಮನೆ ಸಿಕ್ಕಂತಹ ಸಂತೋಷ. ಆ ವ್ಯಕ್ತಿಯೇ ಕಡಬ ತಾಲೂಕಿನ  ಕೇನ್ಯ ಗ್ರಾಮದ ಪೆರ್ಲಕಟ್ಟೆ ನಿವಾಸಿ ಲಿಂಗು.  ಇವರ ಸಂತೋಷಕ್ಕೆ ಕಾರಣಕರ್ತರಾಗಿದ್ದು ರಾಷ್ಟೀಯತೆಯನ್ನು ಉಸಿರಾಗಿಸಿಕೊಂಡು ಹೆಮ್ಮರವಾಗಿ ಬೆಳೆದಿರುವ ದೇಶಾಭಿಮಾನಿಗಳ ಯುವ ತಂಡ ಯುವ ಬ್ರೀಗೇಡ್. ಯುವ ಬ್ರೀಗೇಡ್ ತಂಡದೊಂದಿಗೆ ಚಕ್ರವರ್ತಿ ಅಂಧವ್ಯಕ್ತಿಯಾಗಿದ್ದರೂ ಆತನದ್ದು ಸ್ವಾವಲಂಬಿ ಸ್ವಾಭಿಮಾನದ ಬದುಕು. ಜೊತೆಯಲ್ಲಿ...

*ಡಯಾಲಿಸಿಸ್ ಗೆ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಎಸ್.ಎಸ್ ಎಫ್ ಸಲ್ಲಿಸಿದ ಮನವಿಗೆ ತುರ್ತು ಸ್ಪಂದನೆ*

ಕೋವಿಡ್- 19 ಮಹಾವ್ಯಾಧಿಯು ತಾಲೂಕಿನಲ್ಲೂ ಕಾಣಿಸಿಕೊಂಡಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪಾಸಿಟಿವ್ ವರದಿ ಬಂದು ಆಸ್ಪತ್ರೆಯು ಸೀಲ್ ಡೌನ್ ಆಗಿದ್ದರಿಂದ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದ ಸುಮಾರು 33ರಷ್ಟು ಡಯಾಲಿಸೀಸ್ ರೋಗಿಗಳು ಅತಂತ್ರ ಸ್ಥಿತಿಗೊಳಗಾಗಿದ್ದಾರೆ. ಈ ಬಗ್ಗೆ ತಕ್ಷಣ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯು ಮಾನ್ಯ ತಾಲೂಕು ವೈದ್ಯಾಧಿಕಾರಿಯವರಿಗೆ ತುರ್ತು ಕ್ರಮಕೈಗೊಂಡು ಬದಲಿ ವ್ಯವಸ್ಥೆ ಕಲ್ಪಿಸುವಂತೆ...
Loading posts...

All posts loaded

No more posts

error: Content is protected !!