- Saturday
- April 19th, 2025

ಎತ್ತರದ ಆಗಸದಿ ತಂಪಾದ ಮಳೆ ಹನಿಯು ಇಂಪಾದ ಸದ್ದಿನಲಿ ಭುವಿಯ ಸೇರುತಿದೆ, ಇಳೆಯ ತಂಪಾಗಿಸುತಿದೆ…ಪಟ ಪಟನೇ ಬೀಳುವ ಮಳೆ ಹನಿಯ ಸದ್ದು ಕಿವಿಗೆ ಇಂಪು, ಮನಸಿಗೆ ನೀಡುತಿದೆ ತಂಪು…ಜೋರಾಗಿ ಮಳೆ ಬಂದು ನಿಂತ ಆ ಕ್ಷಣ ಸುತ್ತಲಿನ ಪರಿಸರವು ಹಸಿರಾಗಿ ತುಂಬಿ, ಹಕ್ಕಿಗಳ ಚಿಲಿಪಿಲಿ ನಾದವು ಇಂಪಾಗಿ ಕೇಳುತಿದೆ, ಕಿವಿಗೆ ಇಂಪಾಗಿ ಕೇಳುತಿದೆ…ಸದ್ದಿಲ್ಲದೇ ಬರುವ ಆ...

ನಮ್ಮ ತುಳುನಾಡಿನಲ್ಲಿ ತರವಾಡು ಮನೆಗೆ ಭಾರಿ ಮಹತ್ವವಿದೆ . ತರವಾಡು ಮನೆಯಿಲ್ಲದ ಕುಟುಂಬವಿರದು. ತರವಾಡು ಮನೆಯು ತನ್ನ ಕುಟುಂಬದ ಮನೆಗಳ ದೈವಗಳ ಕಾರ್ಯ ದೇವರ ಕಾರ್ಯಗಳ ಮುಂದುವರಿಕೆಗೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ತರವಾಡು ಮನೆಯ ಯಜಮಾನನು ತನ್ನದೆ ಆದ ಗೌರವವನ್ನು ಹೊಂದಿದ್ದು , ಕುಟುಂಬ ಸದಸ್ಯರನ್ನು ಪ್ರೀತಿ , ಸಹನೆ , ತಾಲ್ಮೆಯಿಂದ ಸಮರ್ಪಕವಾಗಿ ನಿಭಾಯಿಸುವ...

ಉರುಳುತಿದೆ ಕಾಲವು, ಸಾಗುತಿದೆ ಜೀವವು…ಕನಸನೆಲ್ಲಾ ಮೂಟೆ ಕಟ್ಟಿ, ಕೊನೆಯೇ ಇರದ ದಾರಿ ಮುಟ್ಟಿ ಸಾಗುತಿದೆ ಜೀವವು, ಉರುಳುತಿದೆ ಕಾಲವು…ಕನಸಿನ ದಾರಿಯ ದಾಟಿ, ಮನಸಿನ ಮೌನವ ಮೀರಿ ಮೈಲಿಗಲ್ಲು ಇರದ ದಾರಿ ಹುಡುಕಿ ಸಾಗಿ…ಉರುಳುತಿದೆ ಕಾಲವು, ಸಾಗುತಿದೆ ಜೀವವು…ಏತಕೆ ತಿಳಿಯದ ಪಯಣ, ಸಾಗಿದೆ ಹುಡುಕಿ ಕಾರಣ…ಸಾಗುವುದೆಲ್ಲೋ, ಸೇರುವುದೆಲ್ಲೋ ತಿಳಿದೇ ಇಲ್ಲ…ಕ್ಷಣಿಕದ ಬದುಕಿನಲ್ಲಿ ಕ್ಷಣ ಕ್ಷಣವು ಅನುಭವ ತಾನೇ,...

ಸುಡುವ ಬಿಸಿಲಿನಲಿಕೊರೆಯುವ ಚಳಿಯಲಿದಿನನಿತ್ಯ ನಮ್ಮ ಕಾಯುವಧೀರ ಸೈನಿಕನೇನಿನಗೊಂದು ನನ್ನ ಸಲಾಂ.. ನೀನಿದ್ದರೆ ಈ ಭೂಮಿಯಲ್ಲಿನಮಗೆಲ್ಲ ಸುಖ ನಿದ್ರೆನಮಗಾಗಿ ಹೋರಾಡುವ ಸೈನಿಕನಿನಗೊಂದು ನನ್ನ ಸಲಾಂ.. ತನ್ನವರನ್ನು ಮರೆತುಕೈಯಲ್ಲಿ ಬಂದೂಕನ್ನು ಹಿಡಿದುದೇಶದ ಜನರಿಗಾಗಿ ನಿದ್ರೆ ಬಿಡುವ ಸೈನಿಕನಿನಗೊಂದು ನನ್ನ ಸಲಾಂ.. ದೇಶದ ಮೂಲೆ ಮೂಲೆಗಳಲ್ಲಿಇರುವ ಶತ್ರುಗಳನ್ನು ಸದೆ ಬಡಿಯಲುಎದೆ ಉಬ್ಬಿಸಿ ನಿಂತಿರುವ ಸೈನಿಕನಿನಗೊಂದು ನನ್ನ ಸಲಾಂ.. ಸಾಗರದಂತಹ ಸುಳಿಗಳೆಡೆಯಲಿಬೀಸುವ...

ಸಂಚಾರಿ ಈ ಬದುಕು ಸಾಗುತಿದೆ ಎಲ್ಲಿಯೂ ನಿಲ್ಲದೇ,ಏಕಾಂಗಿ ಈ ಬದುಕು ನಿಂತಿದೆ ಸುತ್ತಲೂ ಯಾರಿಲ್ಲದೇ…ಗೆಲ್ಲುವ ಛಲ ತುಂಬಿದ ಬದುಕು ಸಾಗುತಿದೆ ಸೋತರೂ ಕುಗ್ಗದೇ, ಕಣ್ಣೆದುರು ಸೋಲಿದ್ದರೂ ಜಗ್ಗದೇ…ಮೌನಿ ಈ ಬದುಕು ಸಾಗುತಿದೆ ಚುಚ್ಚು ಮಾತುಗಳ ಕೇಳಿಯೂ ಕೇಳದಂತೆ, ಅಣಕಿಸುವವರ ನೋಡಿಯೂ ನೋಡದಂತೆ…ಕನಸು ಕಾಣುವ ಬದುಕು ಸಾಗುತಿದೆ ಕನಸು ನನಸಾಗಿಸಲು, ಬದುಕ ಗುರಿ ಮುಟ್ಟಿಸಲು…ಸೋಲೇ ತುಂಬಿದ ಬದುಕು...

ತಿಳಿದು ತಿಳಿದು ಮಾಡಿದ ತಪ್ಪು, ಅಳೆದು ತೂಗಿ ನೀಡಿದ ದಾನ ನಿನ್ನ ಬದುಕ ಹಾದಿಯಲ್ಲಿ ಎಂದೂ ಒಳಿತು ಮಾಡದು…ಸ್ವಾರ್ಥದಿಂದ ಮಾಡಿದ ಸೇವೆ, ಸುಳ್ಳಿನಿಂದ ಕಟ್ಟಿದ ಅರಮನೆ ಹೆಚ್ಚು ಕಾಲ ಉಳಿಯದು ಇಲ್ಲಿ ಓ ಗೆಳೆಯ…ಮನದ ಒಳಗೆ ವಿಷವ ತುಂಬಿ ಹೊರಗೆ ಸಿಹಿಯ ನೀಡುವಂತೆ ನಟಿಸಿದರೆ ಏನು ಫಲವೋ ಓ ಗೆಳೆಯ… ತಿಳಿದು ತಿಳಿದು ತಪ್ಪನೆಂದೂ ಮಾಡಲೆಬೇಡ...

ಕೋಟಿ ಹೃದಯಗಳ ಪ್ರಾರ್ಥನೆ ಹುಸಿಯಾಯಿತು…ಕೋಟಿ ಮನಸುಗಳ ಆಸೆಯು ಹುಸಿಯಾಯಿತು, ಇಂದು ಹುಸಿಯಾಯಿತು…ಪ್ರೀತಿ-ಸ್ನೇಹದ "ಅರಸು" ಮರೆಯಾದನು, ಇಂದು ಮರೆಯಾದನು…"ದೊಡ್ಮನೆ"ಯ "ಬೆಟ್ಟದ ಹೂವು" ಮರೆಯಾಯಿತು "ಆಕಾಶ"ದಲ್ಲಿ ಮರೆಯಾಯಿತು… ವಿಧಿಯ ಆಟದ ಎದುರು ಎಲ್ಲಾ ಶೂನ್ಯವಾಯಿತು, ಎಲ್ಲಾ ಮುಗಿದು ಹೋಯಿತು…ಯಾರ ಊಹೆಗೂ ನಿಲುಕದ ಘಟನೆ ನಡೆದುಹೋಯಿತು, ನಮ್ಮೆದುರು ನಡೆದು ಹೋಯಿತು…ಮರಳಿ ಬಾರದ ಲೋಕಕೆ ಹೊರಟು ಹೋದನು "ವಂಶಿ", ಆ "ಪರಮಾತ್ಮ"ನ...

ಆರಿತು ದೊಡ್ಮನೆಯ ದೀಪ ಕನ್ನಡಿಗರ ಹೃದಯ ಬೆಳಗಿದ ನಂದಾದೀಪ.ಬಾಳಿನ ಹಾದಿಯಲಿ ಕಗ್ಗತ್ತಲು ಕವಿಯಿತುಸ್ಫೂರ್ತಿಯ ಚಿಲುಮೆಯು ಬತ್ತಿಹೋಯಿತು. ನಯ ವಿನಯದ ಮಾತುಗಳು ಕೇಳಿಸುತ್ತಿಲ್ಲಆ ನಗು ಮುಖದಲ್ಲಿದ್ದ ತೇಜಸ್ಸು ಇಂದಿಲ್ಲ.ನೃತ್ಯದ ಕೈ-ಕಾಲುಗಳು ಇಂದು ನರ್ತಿಸುತ್ತಿಲ್ಲಹೃದಯದ ಹಾಡು ಹಾಡುವ ಕೋಗಿಲೆಯು ಇನ್ನಿಲ್ಲ. ಆಕಾಶದೆತ್ತರಕ್ಕೆ ಹೊಸ ಕನಸು ಬಿತ್ತಿದ ಕುವರಕನ್ನಡಿಗರ ಪ್ರೀತಿಯ ಅಪ್ಪು.ಈ ರಾಜಕುಮಾರ.ಪ್ರತಿದಿನ ಅಭಿಮಾನಿಗಳೇ ದೇವರು ಎನ್ನುತ್ತಿದ್ದವ ನೀನುಇಂದೇಕೆ ಯಾರಿಗೂ...

ಮನಸಿನ ನೋವಿಗೆ ಕನ್ನಡಿಯೇತಕೆ, ನೋಡಲು ತಿಳಿಯುವುದು…ಕಾಣುವ ಕನಸಿಗೆ ಮುನ್ನುಡಿಯೇತಕೆ, ಕಣ್ಣಿಗೆ ಕಾಣುವುದು…ನೋವನು ಸಹಿಸಿದ ಮನಸ್ಸಿಗೆ ತಾನೇ ಛಲವು ಹುಟ್ಟುವುದು,ಕಂಡ ಕನಸನು ನನಸು ಮಾಡುವ ಛಲವು ಹುಟ್ಟುವುದು… ಎಲ್ಲವು ತಿಳಿದಿದೆ ಎನ್ನುವ ಸ್ವಾರ್ಥವು ನಿನ್ನನೇ ಕೊಲ್ಲುವುದು…ಶಾಂತವಾಗಿ ಸಾಧಿಸೋ ವ್ಯಕ್ತಿಯೇ ಬದುಕಲಿ ಗೆಲ್ಲುವುದು…ಮನಸಲಿ ನೋವು ಇದ್ದರೆ ಮಾತ್ರ ಛಲವು ಹುಟ್ಟುವುದು,ನಿನಗೆ ಸಾಧಿಸೋ ಛಲವು ಹುಟ್ಟುವುದು… ಸಾಧಿಸ ಹೊರಡುವ ವ್ಯಕ್ತಿಗೆ...

ಕಳೆದೆರಡು ವರ್ಷಗಳಿಂದೀಚೆಗೆ ಶೈಕ್ಷಣಿಕ ಕ್ಷೇತ್ರದಮೇಲೆ ಮಿಡತೆಯಹಿಂಡಿನಂತೆ ಕೊರೋನ ವೈರಸ್ ದಾಳಿ ನಡೆಸಿದೆ ಬರಿಯ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೇ ಪ್ರತಿಯೊಂದು ಕ್ಷೇತ್ರದಮೇಲೆ ಪರಿಣಾಮ ಬೀರಿದೆ ಶಾಲೆಗೆ ಮಕ್ಕಳುಬಾರದೆ ಎರಡು ವರ್ಷಗಳೇ ಕಳೆಯಿತು ದೇಶದ ಭವಿಷ್ಯ ತರಗತಿಯ ನಾಲ್ಕು ಗೋಡೆಯ ಮಧ್ಯೆ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಶಾಲಾ ಕಾಲೇಜು ಪುನರಾರಂಭ ಆಗುವ ಯಾವ ಸ್ಪಷ್ಟತೆಯು ಕಾಣುತ್ತಿಲ್ಲ ಭವಿಷ್ಯದ...

All posts loaded
No more posts