- Thursday
- April 10th, 2025

ಬೆಳ್ಳಂಬೆಳಗ್ಗೆ ಆಗಮಿಸಿ ತುಂಬಿ ಹರಿಯುವ ಹೊಳೆಯಿಂದ ಕಾಣೆಯಾದ ಯುವಕನ ಶೋಧನೆ ನಡೆಸಿ ಯಶಸ್ವಿಯಾದ ಹೀರೋ ವಿಪತ್ತು ನಿರ್ವಹಣಾ ತಂಡದ ಸದಸ್ಯ , ಅಂಬ್ಯುಲೆಂನ್ಸ್ ಚಾಲಕ ಯಾರು ಗೊತ್ತಾ , ಇವರು ನಡೆಸಿದ ಕಾರ್ಯಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಸುಳ್ಯ: ಸುಳ್ಯದಲ್ಲಿ ಹಲವಾರು ಜೀವ ರಕ್ಷಕ ವಾಹನಗಳು ಇದ್ದು ಅವುಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಕೂಡ ಆಪತ್ಬಾಂಧವರೆ ಆಗಿದ್ದು...

ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ.ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ...

World Vitiligo Awareness Day...June 25 ತೊನ್ನು ಏನಿದರ ಮರ್ಮ?ತೊನ್ನು ಎನ್ನುವುದು ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು ಆಂಗ್ಲಭಾಷೆಯಲ್ಲಿ ಈ ರೋಗವನ್ನು ‘ವಿಟಿಲಿಗೊ’ ಎಂದು ಕರೆಯುತ್ತಾರೆ. ಈ ತೊನ್ನು ರೋಗ ಸಾಂಕ್ರಾಮಿಕ ರೋಗವಲ್ಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದ ಮುಖಾಂತರ ಹರಡುವುದಿಲ್ಲ. ಅದೇ ರೀತಿ ತೊನ್ನು ರೋಗಕ್ಕೂ ಕುಷ್ಠ ರೋಗಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ತೊನ್ನು...

ಪ್ರತಿ ವರ್ಷ ಜೂನ್ 19ರಂದು ವಿಶ್ವ ಸಿಕಲ್ ಸೆಲ್ ದಿನ ಎಂದು ಆಚರಿಸಲಾಗುತ್ತಿದ್ದು, 2009ರಿಂದ ವಿಶ್ವ ಸಂಸ್ಥೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ಜಾರಿಗೆ ತಂದಿತು. ಇದೊಂದು ರಕ್ತಸಂಬಂಧಿ ಅನುವಂಶೀಯ ಖಾಯಿಲೆ ಆಗಿದ್ದು, ಕೆಂಪು ರಕ್ತಕಣಗಳು ಈ ರೋಗದಿಂದ ಬಳಲುತ್ತವೆ. ಈ ರೋಗಿಗಳಲ್ಲಿ ಕೆಂಪು ರಕ್ತಕಣಗಳ ರಚನೆಯಲ್ಲಿ ವ್ಯತ್ಯಯ ಉಂಟಾಗಿ,...

ಅಪ್ಪ ಎಂದರೆ ಜಗವು ಸ್ನೇಹ ಅಕ್ಕರೆಯ ಪ್ರತಿರೂಪವೂ..... ಮಕ್ಕಳ ಪಾಲಿನ ವಾತ್ಸಲ್ಯಮಯಿತನ್ನೆಲ್ಲಾ ಸುಖವ ಮುಡಿಪಾಗಿಡುವ ತ್ಯಾಗಮಯಿ...... ಹೌದು ಪ್ರತಿಯೊಬ್ಬ ಮಕ್ಕಳ ಪಾಲಿಗೆ ತನ್ನ ಅಪ್ಪನೇ ಮೊದಲ ಹೀರೋ. ಅಪ್ಪ ಎಂದರೆ ಅದೊಂದು ಪದ ಮಾತ್ರವಲ್ಲ. ಆ ಪದವೇ ಮಕ್ಕಳಿಗೆ ಸ್ನೇಹ ಅಕ್ಕರೆಯ ಪ್ರತಿರೂಪ. ಅಪ್ಪ ಜೊತೆಗಿದ್ದರೆ ಆದೇನೋ ಒಂದು ಧೈರ್ಯ ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಏನೋ...

ಬದುಕಿನ ಬವಣೆಯಲಿ ನೊಂದು ಬೆಂದವರಿಗೆ ನೋವಾಗುವುದು ಸಹಜ, ನೋವಿನಲ್ಲೇ ನಲಿವು ಅಡಗಿರುವುದು ತಿಳಿ ಮನುಜ...ಕಷ್ಟ-ನೋವುಗಳು ಹೇಳಿ ಕೇಳಿ ಬರುವುದಿಲ್ಲ ಅದು ಸಹಜ, ಕಷ್ಟ-ನಷ್ಟಗಳಿಗೆ ಕರುಣೆ ಎಂಬುವುದು ಇಲ್ಲ, ನಿನ್ನ ಕಣ್ಣೀರಿಗೆ ಕರಗುವವರು ಇಲ್ಲಿ ಯಾರೂ ಇಲ್ಲ...ಇಲ್ಲಿ ಎಲ್ಲರೂ ನಿನ್ನವರು ಎಂದು ನೀ ಅಂದುಕೊಂಡಿರುವೆಯಲ್ಲಾ, ನಿನ್ನ ಕಷ್ಟದ ಸಂದರ್ಭದಲ್ಲಿ ಅವರಲ್ಲಿ ಕೆಲವರೆಷ್ಟು ದೂರ ನಿಂತಿದ್ದರೆಂದು ನೀ ಗಮನಿಸಿದೆಯಲ್ಲಾ...ನಿನ್ನ...

ಒಬ್ಬ ವ್ಯಕ್ತಿಯ “ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಮತೋಲಿತ, ಸುರಕ್ಷಿತ ಆಹಾರ ಅತೀ ಅಗತ್ಯ. ಬಹುತೇಕ ರೋಗಗಳನ್ನು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳನ್ನು ಸರಿಪಡಿಸಿ ಪ್ರಾರಂಭಿಕ ಹಂತದಲ್ಲಿಯೇ ತಡೆಯಬಹುದು. ಉತ್ತಮ ದೈಹಿಕ ವ್ಯಾಯಾಮ ಮತ್ತು ವಿಟಮಿನ್, ಪ್ರೋಟಿನ್, ಲವಣಾಂಶ, ಪೋಷಕಾಂಶ, ಶರ್ಕದ ಪಿಷ್ಠ ಮತ್ತು ನಾರುಯುಕ್ತ ಸಮತೋಲಿತ ಆಹಾರದಿಂದ ನೂರು...

ಮುತ್ತಿನಂತೆ ಪಳಪಳ ಹೊಳೆಯುವ ಬಿಳುಪಾದ ಹಲ್ಲುಗಳು ಇರಬೇಕೆಂದು ಪ್ರತಿಯೊಬ್ಬರೂ ಆಶಿಸುತ್ತಾರೆ. ಆದರೆ ಎಲ್ಲರ ಹಲ್ಲುಗಳ ಬಣ್ಣ ಬೇರೆ ಬೇರೆ ಇರುತ್ತದೆ. 90 ಶೇಕಡಾ ಮಂದಿಗೆ ಬಿಳಿಯಾದ ಹಲ್ಲುಗಳು ಇರುತ್ತವೆ. ಇನ್ನುಳಿದ 10 ಶೇಕಡಾ ಮಂದಿಗೆ ತೆಳು ಹಳದಿ, ಹಳದಿ, ಗುಲಾಬಿ ಬಣ್ಣ, ಕಪ್ಪಾಗಿರುವ ಹಲ್ಲು ಹೀಗೆ ಬೇರೆ ಬೇರೆ ಬಣ್ಣದ ಹಲ್ಲುಗಳು ಇರುವ ಸಾಧ್ಯತೆ ಇರುತ್ತದೆ....

ಇರುವುದೊಂದೇ ಜೀವನ ಖುಷಿಯಿಂದಲೇ ಬದುಕಬೇಕು ಎನ್ನುವರು ಎಲ್ಲರೂ, ಆದರೆ ಕಷ್ಟ-ನೋವು, ಜವಾಬ್ದಾರಿಗಳ ನಡುವೆ ಖುಷಿಯನ್ನು ಹುಡುಕುವುದಾದರೂ ಹೇಗೆ ಹುಡುಕಿದವರೇ ಬಲ್ಲರು...ಇತರರೆದುರು ಖುಷಿಯಿಂದ ನಗುನಗುತ್ತಲೇ ಇರುವರು ಎಲ್ಲರೂ, ಅವರವರ ಬದುಕಿನ ಕಷ್ಟ-ನೋವುಗಳನ್ನು ಅವರವರೇ ಬಲ್ಲರು, ಇತರರೆದುರು ಖುಷಿಯಿಂದಿದ್ದರೂ ಒಳಗೊಳಗೆ ತಮ್ಮ ಬದುಕಿನ ಕಷ್ಟಗಳನ್ನು ನೆನೆದು ನೋವು ಅನುಭವಿಸುತ್ತಿರುವರು ಎಲ್ಲರೂ...ಬಾಲ್ಯದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುವರು ಎಲ್ಲರೂ, ದೊಡ್ಡವರಾದಾಗಲೇ...

"ಅಯ್ಯೋ ಈ ಕಣ್ಣಿನ ಸಮಸ್ಯೆಗೆ ಸಾಯುವ ತನಕವೂ ಕಣ್ಣಿಗೆ ಆಲೋಪಥಿ ಔಷಧ ಹಾಕ್ಬೇಕಾ? ಬೇರೆ ಪರಿಹಾರವೇ ಇಲ್ಲವೇ?", " ನನಗೆ ರೆಟಿನಾ ಸಮಸ್ಯೆ( ಏಜ್ ರಿಲೇಟಡ್ ಮ್ಯಾಕ್ಯುಲಾರ್ ಡಿಜನರೇಷನ್) ಇದೆ ಎಂದು ವೈದ್ಯರು ಹೇಳಿದ್ದಾರೆ. ಹದಿನಾರು ಸಾವಿರ ರೂಪಾಯಿ ಇಂಜೆಕ್ಷನ್ ಎರಡು ವರ್ಷಗಳಲ್ಲಿ ಹದಿನಾಲ್ಕು ಸಲ ತೆಗೆದುಕೊಂಡಿದ್ದೇನೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಬೇರೇನೂ ಉಪಾಯ ಇಲ್ಲ...

All posts loaded
No more posts