- Friday
- September 4th, 2026
ಸುಬ್ರಹ್ಮಣ್ಯ ಮಹಿಳಾ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ವಾರಿಜಾಕ್ಷಿ ರವರ ಪತಿ ಚಂದ್ರಶೇಖರ ನೂಚಿಲ ರವರು ಇಂದು(ಜು.13) ನಿಧನರಾಗಿದ್ದು, ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸುಬ್ರಹ್ಮಣ್ಯ ಜುಲೈ 13 : ಒಕ್ಕಲಿಗ ಗೌಡ ಸೇವಾ ಸಂಘ(ರಿ.) ಕಡಬ ತಾಲೂಕು ಇದರ ಸುಬ್ರಹ್ಮಣ್ಯ ವಲಯದ ಏನೆಕಲ್ಲು ಗ್ರಾಮದ ಒಕ್ಕಲಿಗ ಗೌಡರ ಮಹಾ ಅಭಿಯಾನ ಕಾರ್ಯಕ್ರಮ ರವಿವಾರ ಯೇನೆಕಲ್ಲಿನಲ್ಲಿ ನಡೆಯಿತು. ಈ ಅಭಿಯಾನದಲ್ಲಿ ಏನೆಕಲ್ಲು ಗ್ರಾಮದ ಮುತ್ಲಾಜೆ ಬೈಲು, ಕಲ್ಕುದಿ ಬೈಲು, ಕರ್ನಾಜೆ ಕಿಬ್ಬೊಡಿ ಬೈಲು, ಮಲ್ಲಾರ ಮಾದನಮನೆ ಬೈಲು, ಕೋಟಿ ಗೌಡನ ಮನೆ...
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮಲೆಯಾಳ ನಿವಾಸಿ ಗೋಪಾಲಕೃಷ್ಣ ಭಟ್ ಮಲೆಯಾಳ(93) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿಯೂ, ಹವ್ಯಾಸಿ ಯಕ್ಷಗಾನ ವೇಷ ಧಾರಿಯೂ, ಯಕ್ಷ ಗುರುಗಳಾಗಿಯೂ ಪ್ರಸಿದ್ಧಿ ಹೊಂದಿದ್ದರು. ಯಕ್ಷಗುರುಗಳಾದ ಇವರು ಪುತ್ತೂರು, ಸುಳ್ಯ ತಾಲೂಕಿನ ಅನೇಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡಿ ಮಕ್ಕಳು ಯಕ್ಷ ರಂಗಸ್ಥಳದಲ್ಲಿ ಮಿಂಚುವಂತೆ ಮಾಡಿದವರು....
ಸುಬ್ರಹ್ಮಣ್ಯ ಜುಲೈ 11 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗ ಪ್ರತಿಷ್ಠ ಮಂಟಪದಲ್ಲಿ ಶೇಖರಣೆಯಾದ ನಾಗ ಶಿಲಾ ಕಲ್ಲುಗಳನ್ನು ಶನಿವಾರ ಕುಮಾರಧಾರ ನದಿಯಲ್ಲಿ ಜಲ ಸ್ತಂಭಗೊಳಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಅರ್ಚಕರು, ಸರ್ಪಸಂಸ್ಕಾರ ವಿಭಾಗದ ಅರ್ಚಕರು ಹಾಗೂ ಕ್ರಿಯಾಕರ್ತರು ನಾಗ ಪ್ರತಿಷ್ಠಾ ಶಿಲಾ ಕಲ್ಲುಗಳನ್ನು ಪ್ರತಿಷ್ಟಾ ಮಂಟಪದಿಂದ ತೆರವುಗೊಳಿಸಿ ಕುಮಾರಧಾರ ನದಿಗೆ ಕೊಂಡೊಯ್ಯಲು ಜುಲೈ...
ಸುಳ್ಯ: ಸುಳ್ಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಮಿತ್ತಡ್ಕ, ಅಮರ ಮುಡ್ನೂರು ಗ್ರಾಮದ ದೊಡ್ಡತೋಟ ಹಾಗೂ ಕಡಬ ತಾಲೂಕಿನ ಐನೆಕಿದು...
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದ ರಾಮನಗರ ಜಿಲ್ಲೆಯ 30 ವರ್ಷದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ರಾಮನಗರ ಜಿಲ್ಲೆಯ ಕೈಲಂಜ ಹೋಬಳಿ, ಕೆ.ಪಿ.ದೊಡ್ಡ ಅಂಚೆ, ಉಚ್ಚಮ್ಮನದೊಡ್ಡಿ ನಿವಾಸಿ ಮಧು.ಎಸ್(30) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಧು ಅವರು ಜುಲೈ 8ರಂದು ಕುಕ್ಕೆ ಶ್ರೀ...
“ಕರ್ನಾಟಕ ಘನ ಸರ್ಕಾರದಿಂದ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಈಗಾಗಲೇ ನೋಂದಣಿಗೊಳಿಸಿರುವ ಗೃಹಬಳಕೆ ವಿದ್ಯುತ್ ಸ್ಥಾವರಗಳ ಮಾಹಿತಿಯನ್ನು ಪರಿಶೀಲನೆ ಮಾಡಲು ಮೆಸ್ಕಾಂ ಇಲಾಖೆಯ ವತಿಯಿಂದ ಮಾಪನ ಓದುಗರು ಹಾಗೂ ಪವರ್ ಮ್ಯಾನ್ ಸಿಬ್ಬಂದಿಗಳು ಪ್ರತೀ ಮನೆಗಳಿಗೆ ಭೇಟಿ ನೀಡಲಿದ್ದು, ಸದ್ರಿ ಭೇಟಿಯ ಸಂದರ್ಭದಲ್ಲಿ ವಿದ್ಯುತ್ ಗ್ರಾಹಕರುಗಳು ಗೃಹಜ್ಯೋತಿ ಯೋಜನೆಯ ನೋಂದಣಿ ಸಂದರ್ಭದಲ್ಲಿ ನೀಡಿರುವ ಆಧಾರ್ ಕಾರ್ಡ್ ಜೊತೆಗೆ...
ಸುಬ್ರಹ್ಮಣ್ಯ : “ಪತ್ರಿಕೆಯು ಸಮಾಜವನ್ನು ತಿದ್ದುವ ಅಧಮ್ಯ ಕಾರ್ಯವನ್ನು ಮಾಡುತ್ತಿದೆ. ಹರಿತವಾದ ಆಯುಧವಾದ ಪೆನ್ನಿನ ಮೂಲಕ ಜನತೆಯ ಆಶೋತ್ತರಕ್ಕೆ ತಕ್ಕುದಾಗಿ ಕಾರ್ಯನಿರ್ವಹಿಸುವ ಅಂಗ ಇದಾಗಿದೆ. ಪತ್ರಕರ್ತರು ಪತ್ರಿಕೆಯಲ್ಲಿನ ತಮ್ಮ ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿಯ ಬೀಜವನ್ನು ಬಿತ್ತುತ್ತಾರೆ. ಸಮಾಜವನ್ನು ಒಗ್ಗೂಡಿಸಿ ದೇಶವನ್ನು ಕಟ್ಟುವ ಕಾಯಕವನ್ನು ಪತ್ರಿಕೋದ್ಯಮ ಮಾಡುತ್ತಿದೆ. ಆಧುನಿಕ ಯುಗದಲ್ಲಿ ಮೊಬೈಲ್ ವ್ಯಾಮೋಹವನ್ನು ತ್ಯಜಿಸಿ ಪತ್ರಿಕೆ...
ಸುಬ್ರಹ್ಮಣ್ಯ ಜುಲೈ.08 : ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್(ರಿ.) ಸುಬ್ರಹ್ಮಣ್ಯ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಕುರ್ಚಿ ಹಾಗೂ ಟೀಪಾಯಿಗಳನ್ನು ಕೊಡುಗೆಯಾಗಿ ಮಂಗಳವಾರ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಡಾ. ಎ.ಎ ತಿಲಕ್...
ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೇತೃತ್ವದಲ್ಲಿ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಜು.09 ರಂದು ಪೂರ್ವಾಹ್ನ ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇದರ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮವನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ...
Loading posts...
All posts loaded
No more posts
