ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿ ಸಂತೃಪ್ತಿ ರೈ ಗೆ ಬೇಕಿದೆ ದಾನಿಗಳ ಸಹಾಯಹಸ್ತ

ಬಳ್ಪ ಸಮೀಪದ ಬೇಂಗನಡ್ಕ ವಿಠಲ ನಿವಾಸದ ಸಂತೋಷ್ ಕುಮಾರ್ ಹಾಗೂ ಅನುಷಾ ರೈ ದಂಪತಿಯ 10 ವರ್ಷದ ಪುತ್ರಿ ಸಂತೃಪ್ತಿ ರೈ ಕಳೆದ 3 ತಿಂಗಳಿನಿಂದ ರಕ್ತಕ್ಕೆ ಸಂಬಂಧಿಸಿದ(High Risk Acute Myeloid Leukaemia) ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು, ಎಲ್ಲಾ ಮಕ್ಕಳಂತೆ ತನ್ನ ಸಹಪಾಠಿಗಳೊಂದಿಗೆ ಆಡಿ ನಲಿಯಬೇಕಿದ್ದ ಬಾಲಕಿ ಇದೀಗ ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್...

ಕಾಂಗ್ರೇಸ್ ಪಕ್ಷ ನುಡಿದಂತೆ ಜಾರಿಗೆ ತಂದ ಜನಪ್ರಿಯ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ .. ಸುಳ್ಯ ಬ್ಲಾಕ್ ಕಾಂಗ್ರೆಸ್

ಕರ್ನಾಟಕದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇವರುಗಳ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ೦ತಹ ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳಿಗೆ ಯಜಮಾನಿಯ ಖಾತೆಗೆ ರೂಪಾಯಿ 2000/- ದಂತೆ ಜಮೆ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗಾಗಲೇ ಕಾಂಗ್ರೆಸ್ ಸರಕಾರವು...
Ad Widget

ಕರ್ಲಪ್ಪಾಡಿ ದೇವಾಲಯ ಜಾತ್ರೋತ್ಸವ ಹಿನ್ನಲೆಯಲ್ಲಿ ಶ್ರಮದಾನ

ಶ್ರೀ ಸಾಸ್ತವೇಶ್ವರ ದೇವಸ್ಥಾನ ಅಜ್ಜಾವರ ಕರ್ಲಪ್ಪಾಡಿ ಇಲ್ಲಿನ ಜಾತ್ರೋತ್ಸವ ಹಿನ್ನಲೆಯಲ್ಲಿ ಶ್ರಮದಾನ ಸೇವೆಯನ್ನು ಇಂದು ಚೈತ್ರ ಯುವತಿ ಮಂಡಲ ( ರಿ)ಅಜ್ಜಾವರ ಮತ್ತು ಧರ್ಮಸ್ಥಳ ಒಕ್ಕೂಟ "ಎ" ಅಜ್ಜಾವರ ಇದರ ಸದಸ್ಯರಿಂದ ನಡೆಯಿತು ಈ ಸಂದರ್ಭದಲ್ಲಿ ದೇವಾಲಯದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಷ್ಠಿತ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆಗೆ ದಿನ ನಿಗದಿ

ಪ್ರತಿಷ್ಠಿತ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಗೆ ದಿನ ನಿಗದಿಯಾಗಿದ್ದು ಮತ್ತೆ ರಾಜಕೀಯ ಸಂಚಲನ ಸೃಷ್ಟಿಸಲಿದೆಯೋ ಕಾದು ನೋಡಬೇಕಿದೆ. ಮಾ. 11ರಂದು ಆಡಳಿತ ಮಂಡಳಿಯ ಚುನಾವಣೆಗೆ ದಿನ ನಿಗದಿಯಾಗಿದೆ. ಚುನಾವಣೆಗೆ ಸಂಬಂಧಿಸಿ ಸದಸ್ಯ ಸಹಕಾರಿ ಸಂಘಗಳ ಡೆಲಿಗೇಟ್ ನಮೂನೆ ಮತ್ತಿತರ ದಾಖಲೆಗಳನ್ನು ಸ್ವೀಕರಿಸಲು ಹಾಗೂ ಪರಿಶೀಲಿಸಲು ಜ.4 ರಂದು ಪುತ್ತೂರಿನ ಶಿವರಾಯ...

ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಚತೆಗಾಗಿ ಕಸದ ತೊಟ್ಟಿ ಅಳವಡಿಕೆ

ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸ್ವಚ್ಛತಾ ಸಮಿತಿ ನೇತೃತ್ವದಲ್ಲಿ ಕಲ್ಲುಗುಂಡಿ ಪೇಟೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟಿ ಇಡುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾರವರು ಸ್ವಚ್ಛತೆ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಕೋರಿದರು. ಕಾರ್ಯಕ್ರಮವನ್ನು ನವಮಿ ಸ್ಟೋರ್ ಬಳಿ ಕಸದ ತೊಟ್ಟಿ ಅಳವಡಿಸುವ ಮೂಲಕ...

ಎಲಿಮಲೆ : ಪ್ರೌಢಶಾಲಾ ವಿದ್ಯಾರ್ಥಿ ಆತ್ಮಹತ್ಯೆ

ಎಲಿಮಲೆಯಲ್ಲಿ ಕಳೆದ ವರ್ಷ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿ ಶಮಂತ್ ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಇವರು ಚೊಕ್ಕಾಡಿಯವರಾಗಿದ್ದು, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ, ಶಮಂತ್ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ...

ಸುಳ್ಯ ನಗರದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ನಾಲ್ಕು ಚಕ್ರ ವಾಹನ ಸವಾರರ ಪರದಾಟ, ಅಧಿಕಾರಿಗಳೆ ಇತ್ತ ಗಮನಹರಿಸಿ !

ಸುಳ್ಯ ನಗರದ ಹೃದಯ ಭಾಗವಾದ ಸುಳ್ಯ ಜ್ಯೋತಿ ವೃತ್ತದಿಂದ ಹಿಡಿದು ಗಾಂಧಿನಗರದ ವರೆಗೆ ನಗರ ಪಂಚಾಯತ್ ಮತ್ತು ಪೋಲೀಸ್ ಇಲಾಖೆಯು ಜಂಟಿಯಾಗಿ ಎಡ ಹಾಗೂ ಬಲ ಬದಿ ಎಂಬಂತೆ ದಿನಕ್ಕೊಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಆದರೆ ವಾಹನ ಸವಾರರು ಮಾತ್ರ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿದ್ದು ಎರಡು ಬದಿಗಳಲ್ಲಿ ನಿಲ್ಲಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯಲ್ಲಿ ಓಡಾಡಲು ಕಷ್ಟ...

ಪೆರುವಾಜೆ ಜಲದುರ್ಗಾದೇವಿ ದೇವಾಲಯದ ಜಾತ್ರೆ ಹಾಗೂ ಬ್ರಹ್ಮರಥ ಸಮರ್ಪಣೆ : ಚಪ್ಪರ ಮುಹೂರ್ತ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.16 ರಿಂದ 21 ರ ತನಕ‌ ನಡೆಯಲಿರುವ ಜಾತ್ರಾ ಮಹೋತ್ಸವ ಹಾಗೂ‌ ಶತ ವರ್ಷಗಳ ಬಳಿಕ ನಡೆಯಲಿರುವ ಬ್ರಹ್ಮರಥ ಸಮರ್ಪಣೆಯ‌ ಪ್ರಯುಕ್ತ ಚಪ್ಪರ ಮುಹೂರ್ತ ಡಿ.14 ರಂದು ನಡೆಯಿತು. ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು....

ಕರ್ಲಪ್ಪಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಮದಾನ

ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ಡಿ. 14 ರಂದು ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಮದಾನ ಕಾರ್ಯ ನಡೆಯಿತು.

ಮಂಗಗಳ ಮಾರಣಹೋಮ – ಮೃತದೇಹವನ್ನು ರಸ್ತೆ ಬದಿ ಎಸೆದ ಕಿರಾತಕರು

ಬಳ್ಪ ಕಮಿಲ ಕ್ರಾಸ್ ಬಳಿಯ ಕಾಡಿನ ರಸ್ತೆಯ ಬದಿಯಲ್ಲಿ 30ಕ್ಕೂ ಹೆಚ್ಚು ಸತ್ತ ಮಂಗಗಳ ಮೃತದೇಹ ಎಸೆದಿರುವುದು ಪತ್ತೆಯಾಗಿದೆ. ಮಂಗಗಳ ಮಾರಣಹೋಮ ನಡೆಸಿ ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಅರಣ್ಯ ಇಲಾಖೆಯವರು ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Loading posts...

All posts loaded

No more posts

error: Content is protected !!