ಕೃಷಿ ಇಲಾಖೆಯಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ

ಜನರ ಆರ್ಥಿಕ ವ್ಯವಸ್ಥೆ ಸುಭದ್ರ ಸ್ಥಿತಿಯಲ್ಲಿರಬೇಕಾದರೆ ಕೃಷಿಯೊಂದಿಗೆ ಉಪ ಕಸುಬುಗಳು ಇಂದಿನ ಅಗತ್ಯವಾಗಿದೆ ಎಂದು ಎಂದು ಸುಳ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಹೇಳಿದರು.ಅವರು ಸುಳ್ಯ ಕೃಷಿ ಇಲಾಖೆಯಲ್ಲಿ ನಡೆದ ೨೦೨೩-೨೪ನೇ ಸಾಲಿನ ಕೃಷಿ ತಂತ್ರಜ್ಞಾನ ನಿರ್ಮಾಣ ಸಂಸ್ಥೆ ಎ.ಟಿ.ಎಂ.ಎ ಯೋಜನೆಯಡಿ ಉಜಿರೆಯ ಕರಿಗಂಧ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ನಡೆದ ಜಿಲ್ಲೆಯೊಳಗಿನ...

ಗುತ್ತಿಗಾರು : ಸೌಜನ್ಯ ಪರ ಬೃಹತ್ ಪ್ರತಿಭಟನೆಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಚಾಲನೆ – ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು

ಸೌಜನ್ಯ ಹೋರಾಟ ಸಮಿತಿ ವತಿಯಿಂದ ಗುತ್ತಿಗಾರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಗೆ ಮಹೇಶ್‌ ಶೆಟ್ಟಿ ತಿಮರೋಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗಿರೀಶ್ ಮಟ್ಟಣ್ಣನವ‌ರ್, ತಮಣ್ಣ ಶೆಟ್ಟಿ, ಪ್ರಸನ್ನ ರವಿ, ನ್ಯಾಯವಾದಿ ಮೋಹಿತ್ ಕುಮಾರ್, ಸುರೇಶ್ ಶೆಟ್ಟಿ ಯೆಯ್ಯಾಡಿ, ಡಿ.ಬಿ.ಬಾಲಕೃಷ್ಣ, ಎನ್.ಟಿ.ವಸಂತ್, ಚಂದ್ರ ಕೋಲ್ಚಾರ್, ನೀತಿ ತಂಡದ ಜಯಂತ ಪೂಜಾರಿ, ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ...
Ad Widget

ಡಿ.25-26: ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆ- 2023 ಮತ್ತು ಮನೆ ಹಸ್ತಾಂತರ ಕಾರ್ಯಕ್ರಮ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.) ಸುಳ್ಯ ಇದರ ವತಿಯಿಂದ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟರಮಣ ಗೌಡರ 95ನೇ ಜನ್ಮದಿನದ ಸವಿ ನೆನಪಿಗೆ ಕೆವಿಜಿ ಸುಳ್ಯ ಹಬ್ಬವನ್ನು ಡಿ. 25 ಮತ್ತು 26ರ ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ತಿಳಿಸಿದರು....

ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಏಜೆನ್ಸಿ ವತಿಯಿಂದ ಡಿ. 19 ರಂದು ಪ್ರದಾನಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ವಿತರಣಾ ಸಮಾರಂಭ

ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಏಜೆನ್ಸಿ ಅರಂತೋಡು ಇದರ ವತಿಯಿಂದ ಡಿಸೆಂಬರ್ 19 ರಂದು ಪ್ರಧಾನಮತ್ರಿ ಉಜ್ವಲ ಯೋಜನೆಯಡಿಯಲ್ಲಿ ಆಯ್ಕೆಯಾದ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣಾ ಸಮಾರಂಭವು ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿರಿಸೌಧ ಸಭಾಂಗಣದಲ್ಲಿ ನಡೆಯಲಿದೆ. ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಕು!...

ನವೀನ್ ಕುಮಾರ್ ಕೊಟ್ಟೆಕಾಯಿಯವರ ಸಂಶೋಧನಾ ಪತ್ರಕ್ಕೆ ಬೆಸ್ಟ್ ಬಿಸಿನೆಸ್ ಅಕಾಡೆಮಿಕ್ ವರ್ಷದ ವ್ಯಕ್ತಿ 2023 ಹಾಗೂ ಚಿನ್ನದ ಪದಕ

ಡಿ.13ರಿಂದ ಡಿ. 15 ರಂದು ನಡೆದ 74 ನೇ ಅಖಿಲ ಭಾರತ ವಾಣಿಜ್ಯ ಸಮ್ಮೇಳನದಲ್ಲಿ ಬೆಳ್ಳಾರೆಯ ನವೀನ್ ಕುಮಾರ್ ಕೊಟ್ಟೆಕಾಯಿಯವರು ಮಂಡಿಸಿದ ಸಂಶೋಧನಾ ಪತ್ರಕ್ಕೆ ಚಿನ್ನದ ಪದಕದೊಂದಿಗೆ ಬೆಸ್ಟ್ ಬಿಸಿನೆಸ್ ಅಕಾಡೆಮಿಕ್ ವರ್ಷದ ವ್ಯಕ್ತಿ 2023' ಪ್ರಶಸ್ತಿ ಲಭಿಸಿದೆ. ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕೊಟ್ಟೆಕಾಯಿ ರಾಮ ನಾಯ್ಕ ಹಾಗು ಶ್ರೀಮತಿ ಗೀತಾ ರವರ ಪುತ್ರರಾಗಿರುವ...

ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ಕೆ.ವಿ.ಜಿ. ಸಾಧನೆ-ಸಂಸ್ಮರಣೆ ಕಾರ್ಯಕ್ರಮ

"ಶಿಕ್ಷಣವೇ ಸುಳ್ಯದ ಅಭಿವೃದ್ಧಿಗೆ ಬೇಕಾದ ಪ್ರಮುಖ ಮೂಲಸೌಕರ್ಯ ಎಂಬುದನ್ನು ಅರಿತ ಡಾ. ಕುರುಂಜಿ ಅವರ ದೂರದೃಷ್ಟಿ ಮತ್ತು ಕೊಡುಗೆಗಳು ಅಪಾರ, ಈ ನೆಲದ ದಣಿವರಿಯದ ಧೀಮಂತ ವ್ಯಕ್ತಿಯಾದ ಇವರು ನಮ್ಮೆಲ್ಲರ ಪ್ರಾತಃ ಸ್ಮರಣೀಯರು " ಎಂದು ಸಂಪನ್ಮೂಲ ವ್ಯಕ್ತಿಗಳಾಗಿದ ಶ್ರೀ ಕೆ.ಆರ್. ಗೋಪಾಲಕೃಷ್ಣ ಇವರು ತಿಳಿಸಿದರು. ಇವರು ದಿನಾಂಕ 16-12.2023 ರಂದು ಕೆ.ವಿ.ಜಿ ಸುಳ್ಯ ಹಬ್ಬ...

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಐವರು ಆರೋಪಿಗಳ ಬಗ್ಗೆ ರಾಷ್ಟ್ರೀಯ ತನಿಖಾ ತಂಡದಿಂದ ಮಹತ್ವದ ಪ್ರಕಟನೆ !

ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮನವಿ ಮಾಡಿದೆ. ನಿಷೇಧಿತ ಪಾಪ್ಯುಲ‌ರ್ ಫ್ರಂಟ್ ಇಂಡಿಯಾ ಸಂಘಟನೆಗೆ ಸೇರಿದವರಾದ ಬೆಳ್ಳಾರೆಯ ಬೂಡು ನಿವಾಸಿ ಎಂ.ಡಿ.ಮುಸ್ತಫ, ನೆಕ್ಕಿಲಾಡಿ...

ಸಂಪಾಜೆ : ಬೈಕ್ ಸ್ಕಿಡ್ ಆಗಿ ಸವಾರನಿಗೆ ಗಾಯ – ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಸಂಪಾಜೆ ಬಳಿ ಬೈಕ್ ಸವಾರ ಸ್ಕಿಡ್ ಆಗಿ ಬಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ. ಗಾಯಗೊಂಡ ಸವಾರನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಗೊಂಡ ವ್ಯಕ್ತಿ ಕೂತ್ಕುಂಜ ಗ್ರಾಮದ ನಾಗತೀರ್ಥ ನಿವಾಸಿ ನವೀನ ಡಿ.ಎಸ್. ಎಂದು ತಿಳಿದುಬಂದಿದೆ. https://youtu.be/-8edJK9NkMc?si=57g95_pXamSMIVNq

ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿ ಸಂತೃಪ್ತಿ ರೈ ಗೆ ಬೇಕಿದೆ ದಾನಿಗಳ ಸಹಾಯಹಸ್ತ

ಬಳ್ಪ ಸಮೀಪದ ಬೇಂಗನಡ್ಕ ವಿಠಲ ನಿವಾಸದ ಸಂತೋಷ್ ಕುಮಾರ್ ಹಾಗೂ ಅನುಷಾ ರೈ ದಂಪತಿಯ 10 ವರ್ಷದ ಪುತ್ರಿ ಸಂತೃಪ್ತಿ ರೈ ಕಳೆದ 3 ತಿಂಗಳಿನಿಂದ ರಕ್ತಕ್ಕೆ ಸಂಬಂಧಿಸಿದ(High Risk Acute Myeloid Leukaemia) ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು, ಎಲ್ಲಾ ಮಕ್ಕಳಂತೆ ತನ್ನ ಸಹಪಾಠಿಗಳೊಂದಿಗೆ ಆಡಿ ನಲಿಯಬೇಕಿದ್ದ ಬಾಲಕಿ ಇದೀಗ ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್...

ಕಾಂಗ್ರೇಸ್ ಪಕ್ಷ ನುಡಿದಂತೆ ಜಾರಿಗೆ ತಂದ ಜನಪ್ರಿಯ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ .. ಸುಳ್ಯ ಬ್ಲಾಕ್ ಕಾಂಗ್ರೆಸ್

ಕರ್ನಾಟಕದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇವರುಗಳ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ೦ತಹ ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳಿಗೆ ಯಜಮಾನಿಯ ಖಾತೆಗೆ ರೂಪಾಯಿ 2000/- ದಂತೆ ಜಮೆ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗಾಗಲೇ ಕಾಂಗ್ರೆಸ್ ಸರಕಾರವು...
Loading posts...

All posts loaded

No more posts

error: Content is protected !!