- Tuesday
- September 1st, 2026
ಸುಳ್ಯ ವಿಧಾನಸಭಾ ಕ್ಷೇತ್ರದ ಆಕ್ರಮ ಸಕ್ರಮ ಸಮಿತಿ ರಚಿಸಿ, ಜಾರಿಗೊಳಿಸಿ ಸರಕಾರ ಆದೇಶಿಸಿದೆ. ಈ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಸದಸ್ಯರಾಗಿ ಸುಳ್ಯದ ಗೀತಾ ಕೋಲ್ಚಾರು , ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಾಜಿರಕುಕ್ಕ ಮನೆ ಹೆಚ್ ಆದಂ, ಇನ್ನೋರ್ವ ಸದಸ್ಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಮದ ದರ್ಜಿ ಮಜಲು ಮನೆ...
ಆನೆಗುಂಡಿ ರಕ್ಷಿತಾರಣ್ಯ ಭಾಗದಿಂದ ಬಂದ ಒಂಟಿ ಸಲಗವು ಜ.3 ರಂದು ಮುಂಜಾನೆ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನುಗ್ಗಿ ಹತ್ತು ಬಾಳೆ ನಾಲ್ಕು ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ, ಕೊಂಬೆಗಳನ್ನು ಮುರಿದು ತಿಂದಿದೆ.ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾ ಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು...
ಸುಳ್ಯ :- 67ನೇ ರಾಷ್ಟ್ರ ಮಟ್ಟದ 17 ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾವಳಿಯು ತೆಲಂಗಾಣ ಕಾಮರೆಡ್ಡಿ ನಗರದಲ್ಲಿ ಜನವರಿ 6ರಿಂದ 11 ರ ವರೆಗೆ ಆಯೋಜಿಸಿಲಾಗಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯದ ತಂಡದ ಕ್ರೀಡಾಪಟುಗಳ ಸುರಕ್ಷತೆ ಹಾಗೂ ಮೇಲ್ವಿಚಾರಕರಾಗಿ ಕರ್ನಾಟಕ ಪಬ್ಲಿಕ್‌ಸ್ಕೂಲ್ ಬೆಳ್ಳಾರೆ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ ಇವರನ್ನು...
ಪುತ್ತೂರು : ಕರ್ನಾಟಕ ಬ್ಯಾಂಕ್ ಕ್ಲರಿಕಲ್ ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉದ್ಯೋಗಕ್ಕೆ ಆಯ್ಕೆಗೊಂಡಿರುತ್ತಾರೆ. ಶ್ರೀ ಮಹೇಶ್ ಕೆ ಎಂ ರವರು ಪುತ್ತೂರಿನ ನಿವಾಸಿಯಾಗಿದ್ದು , ಶ್ರೀ ಶ್ರೀವತ್ಸ ಭಾರದ್ವಾಜ್ ರವರು ಸುಳ್ಯದ ನಿವಾಸಿಯಾಗಿರುತ್ತಾರೆ. ಇವರು ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಐ.ಆರ್.ಸಿ.ಎಂ.ಡಿ ಶಿಕ್ಷಣ...
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅಶೋಕ ಎಂಬ ಯುವಕ ಅರಂತೋಡು ಗ್ರಾಮದಲ್ಲಿ ಕಾರ್ಯಚರಿಸುತ್ತಿರುವ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಅವರು ಡಿ.28 ರ ಗುರುವಾರದಂದು ವಿಷ ಸೇವಿಸಿ ರಾತ್ರಿ 12 ಗಂಟೆಗೆ ಮನೆಯ ಬಳಿಗೆ ಬಂದಿದ್ದರು. ಇದನ್ನು ಗಮನಿಸಿದ ಮನೆಯವರು ಮತ್ತು ಸಂಬಂಧಿಕರು ತಕ್ಷಣವೇ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ...
ಪುತ್ತೂರಿನ ಆಶೀರ್ವಾದ ಎಂಟರ್ಪ್ರೈಸಸ್ ಪ್ರಸ್ತುತ ಪಡಿಸುತ್ತಿರುವ ಆಶೀರ್ವಾದ ಲಕ್ಕಿ ಸ್ಕೀಮ್ ಮೂಲಕ ಕನಸಿನ ಮನೆಯನ್ನು ಗೆಲ್ಲುವ ಸುವರ್ಣಾವಕಾಶ ಒದಗಿಸಿದೆ. ಪ್ರತಿ ತಿಂಗಳು ಬಂಪರ್ ಬಹುಮಾನ ಹಾಗೂ ತಿಂಗಳಿಗೆ 50 ಆಕರ್ಷಕ ಬಹುಮಾನ ಕೂಡ ಪಡೆಯಲು ಅವಕಾಶವಿದೆ. ತಿಂಗಳಿಗೆ ಕೇವಲ 1000ರೂ ನಂತೆ ಪಾವತಿಸಬೇಕು. ಒಟ್ಟು 20 ತಿಂಗಳು ಅವಧಿಯ ಈ ಯೋಜನೆಯಾಗಿದ್ದು ಅದೃಷ್ಟದ ಬಹುಮಾನ ಸಿಗದಿರುವ...
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಸುವರ್ಣ ಮಹೋತ್ಸವ ಸಂಭ್ರಮಕಾರ್ಯಕ್ರಮವು ಜ.12,13 ಮತ್ತು 14 ರಂದು ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು ಜ.01ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ,ಮಾಜಿ ಸಚಿವ ಎಸ್.ಅಂಗಾರ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚೊಕ್ಕಾಡಿ ವಿದ್ಯಾ ಸಂಸ್ಥೆ ಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಸಮಿತಿ...
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಡಾl ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಜಂಟಿಯಾಗಿ ಸನ್ಮಾನವನ್ನು ಏರ್ಪಡಿಸಲಾಯಿತು. ಆನೆ ಮಾವುತ ಶ್ರೀನಿವಾಸಗೌಡರ ಹುಟ್ಟೂರು, ಬಾಲ್ಯದಿಂದ ಬೆಳೆದ ರೀತಿ, ತನ್ನ ಅಜ್ಜನ ಕಾಲದಿಂದ ವಂಶ ಪಾರಂಪರಿಯವಾಗಿ ಆನೆ ಮಾವತರಾಗಿ ಸೇವೆ...
ವಿವೇಕ ಶಾಲಾ ಕಟ್ಟಡ ಯೋಜನೆಯಡಿ ರೂ 13.90 ಲಕ್ಷ ಅನುದಾನದಲ್ಲಿ ದೇವಚಳ್ಳ ಗ್ರಾಮದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆ ಇದರ ನೂತನ ಕಟ್ಟಡ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ ಈ,...
ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಬೆಳ್ಳಿಹಬ್ಬದ ಆಮಂತ್ರಣ ಪತ್ರಿಕೆ ಇಂದು ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ ಭಟ್, ಕಾನೂನು ಸಲಹೆಗಾರ ಪಿ. ಭಾಸ್ಕರ ರಾವ್, ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಪ್ರ.ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ನಿತ್ಯಾನಂದ ಬಿ. ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
Loading posts...
All posts loaded
No more posts
