Ad Widget

ಗೂನಡ್ಕ: ಸ್ಕೂಟಿ ಮತ್ತು ಕಂಟೈನರ್ ಲಾರಿ ನಡುವೆ ಭೀಕರ ಅಪಘಾತ- ಸ್ಕೂಟಿ ಸವಾರ ಗಂಭೀರ

ಗೂನಡ್ಕ ಬೈಲೆ ಸಮೀಪದ ಶಿರಾಡಿ ದ್ವಾರದ ಬಳಿ ಸ್ಕೂಟಿ ಮತ್ತು ಕಂಟೈನರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಾಸರಗೋಡಿನ ಜುನೈದ್ ಅವರು ಎಮ್ಮೆಮಾಡಿಗೆ ಹೋಗಿ ವಾಪಸ್ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮತ್ತು ಜುನೈದ್ ಅವರ...

ಹಿಂದೂ ಯುವಕರ ಬಂಧನ ವಿರೋಧಿಸಿ, ಸರಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿದ ಹಿಂದೂ ಸಂಘಟನೆಗಳು – ವಿಶ್ವಹಿಂದೂ ಪರಿಷದ್, ಭಜರಂಗದಳ, ದುರ್ಗವಾಹಿನಿ ಹಾಗೂ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿಂದು (ಸೆ.24) ಬೃಹತ್ ಪ್ರತಿಭಟನೆ

ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುಸ್ಲಿಂ ಯುವಕನಿಗೆ ಹಲ್ಲೆಯಾಗಿತ್ತು,ಆತ ಸುಳ್ಯ  ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ತೆರಳಿ ಕೇರಳದ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಂತೆ ಪೋಲಿಸ್ ಅಧಿಕಾರಿಗಳು ಹಿಂದು ಯುವಕರನ್ನು ವಿಚಾರಣೆಯ ನೆಪದಲ್ಲಿ ಕರೆಸಿದ್ದರು. ಯುವಕರನ್ನು ಬಿಡಿಸಲು ಬಂದ ಕಾರ್ಯಕರ್ತನನ್ನು ಸೇರಿಸಿ ಬಂಧನ ಮಾಡಿ, ನ್ಯಾಯಾಂಗ ಬಂಧನ ಆಗುವಂತೆ ಪೋಲಿಸ್ ಅಧಿಕಾರಿಗಳು ಮಾಡಿದ್ದರು.  ವಿದ್ಯಾರ್ಥಿನಿ ನೀಡಿದ ದೂರಿಗೆ...
Ad Widget

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ .

ಜೆ.ಡಿ.ಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ ನೀಡಿದರು.. ದಂಪತಿ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು ಬಳಿಕ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಕರ್ನಾಟಕ ರಾಜ್ಯ ಸರಕಾರ ಕಳೆದ ಒಂದುವರೆ ವರ್ಷದ ಆಡಳಿತದ ಅವಧಿಯಲ್ಲಿ ಸಂಪೂರ್ಣ ವಿಫಲತೆಯನ್ನು ಕಾಣುವುದರೊಂದಿಗೆ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಈ ಬಗ್ಗೆ ರಾಜ್ಯಾದ್ಯಂತ...

ಮಂಗಳೂರು ಆಸ್ಪತ್ರೆಗೆ ಮಗುವನ್ನು ಕರೆದೊಯ್ಯುತ್ತಿದ್ದ ಸುಳ್ಯದ ಅಂಬ್ಯುಲೆನ್ಸ್‌ ಕಬಕದಲ್ಲಿ ಅಪಘಾತ .

ಸುಳ್ಯ ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿದ್ದ ಸುಳ್ಯದ ಶಿವ ಅಂಬ್ಯುಲೆನ್ಸ್ ಕಬಕದಲ್ಲಿ ಅಪಘಾತ ವಾಗಿರುವ ಘಟನೆ ಸೆ. 23 ರಂದು ಸಂಜೆ ವರದಿಯಾಗಿದೆ. ಕಬಕ ಬಳಿ ರಸ್ತೆಗೆ ಅಡ್ಡಲಾಗಿ ಬಂದ ದೋಸ್ತ್ ವಾಹನಕ್ಕೆ ಅಂಬ್ಯುಲೆನ್ಸ್ ಡಿಕ್ಕಿ ಹೊಡೆದಿದ್ದು ವಾಹನಗಳು ಜಖಂಗೊಂಡಿದೆ. ಮಗುವನ್ನು ಮತ್ತು ಮನೆಯವರನ್ನು ಬೇರೆ ವಾಹನದಲ್ಲಿ ಮಂಗಳೂರಿಗೆ ಕಳುಹಿಸಿ ಕೊಡಲಾಗಿದೆ ಎಂದು...

ಓಮಿನಿ ಕಾರಲ್ಲಿ ಪತ್ತೆಯಾದ ಶವದ ಗುರುತು ಪತ್ತೆ .

ಸುಳ್ಯ ಪರಿವಾರಕಾನದಲ್ಲಿ ರಸ್ತೆ ಬದಿ ಕೆಟ್ಟು ನಿಲ್ಲಿಸಲ್ಪಟ್ಟಿದ್ದ ಓಮಿನಿ ಕಾರಿನಲ್ಲಿ ಇಂದು ಸಂಜೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆಯಾಗಿದೆ. ಶವವಾಗಿ ಪತ್ತೆಯಾದವನನ್ನು ಮನೋಹರ್ ಎಂದುಗುರುತಿಸಲಾಗಿದ್ದು ಈತನು ಮದ್ಯ ವ್ಯಸನಿಯಾಗಿದ್ದ ಎಂದು ಹೇಳಲಾಗುತ್ತಿದ್ದು ಸದ್ಯ ಈತನ ಸಾವಿಗೆ ಕಾರಣವೇನೆಂಬುದು ತಿಳಿಯದೇ ಇದ್ದು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.22 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.2023-24ನೇ ಸಾಲಿನಲ್ಲಿ ಸಂಘವು 111.28 ಕೋಟಿ ರೂ. ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 32.31 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ...

ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ – ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ

ಸುಳ್ಯದ ಪೈಚಾರಿನಿಂದ ಕರೆತಂದು ಸುಳ್ಯ ಬಸ್ಸು ನಿಲ್ದಾಣದ ಬಳಿಯಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಇಬ್ಬರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಬಂಧಿತರು ಹಿಂದು ಪರ ಸಂಘಟನೆಗಳ ಕಾರ್ಯಕರ್ತರಾದ ವರ್ಷಿತ್, ಮಿಥುನ್ ಎಂದು ತಿಳಿದು ಬಂದಿದೆ. ಸದ್ಯ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಅವರಿಗೆ ನ್ಯಾಯಾಧೀಶರು 14 ದಿನಗಳ ವರೆಗೆ ನ್ಯಾಯಾಂಗ...

ಸುಳ್ಯ : ನಿಲ್ಲಿಸಿದ್ದ ಓಮಿನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಸುಳ್ಯ:ಅಮರ ಶ್ರೀ ಹಾಲ್ ಹತ್ತಿರದ ಸ್ನೇಹ ಶಾಲೆಯ ರಸ್ತೆ ಬಳಿ ಕೆಲ ದಿನಗಳಿಂದ ಓಮಿನಿ ಕಾರು ನಿಲುಗಡೆ ಮಾಡಲಾಗಿದ್ದು ಇದೀಗ ಓಮಿನಿ ಕಾರಿನಲ್ಲಿ ಕೊಳೆತ ಮಾದರಿಯಲ್ಲಿ ಶವವೊಂದು ಪತ್ತೆಯಾಗಿದೆ.

ಏನೆಕಲ್ಲು: ಅನಾರೋಗ್ಯದಿಂದ ಪೂಜಾರಿಮನೆ ಪುಂಡರೀಕ ಗೌಡ ಮೃತ್ಯು

ಏನೆಕಲ್ಲು ಗ್ರಾಮದ ಪೂಜಾರಿಮನೆ ದಿ. ಕುಮಾರ ಗೌಡರ ಪುತ್ರ ಪುಂಡರೀಕ ಗೌಡ ಪೂಜಾರಿಮನೆಯವರು ಶಂಕಿತ ಇಲಿಜ್ವರದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.23 ರಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಚೂಡಾಮಣಿ, ಪತ್ನಿ ವಿಶಾಲಾಕ್ಷಿ, ಪುತ್ರರಾದ ಧನುಶ್, ಪ್ರತೀಕ್, ವಿನುತ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳಿಂದ ಸರಕಾರಕ್ಕೆ ಗಡುವು – ಸೆ.26 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ

ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ ಸಂಘದ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಡೆಸುವ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳು ತೀರ್ಮಾನಿಸಿದ್ದು, ಈ ಬಗ್ಗೆ ಮನವಿ ಪತ್ರವನ್ನು ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಸಲ್ಲಿಸಿದರು.ತಮ್ಮ ಮನವಿ ಪತ್ರದಲ್ಲಿ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿರಿಸಿದ್ದು ಈ ಬೇಡಿಕೆಗಳು ಈಡೇರುವವರೆಗೆ ಸೆ.26 ರಿಂದ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ...
Loading posts...

All posts loaded

No more posts

error: Content is protected !!