- Thursday
- November 28th, 2024
https://youtu.be/1LvFzIBDdy4?si=td4WWFfiMcgQQV38 ತೊಡಿಕಾನ ದೇವಸ್ಥಾನದ ನೂತನ ಆಡಳಿತ ಸಮಿತಿಯ ವಿಚಾರವಾಗಿ ತೀರ್ಥರಾಮ ಪರ್ನೋಜಿ ಎಂಬವರು ಸೆ.25 ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ಆಲೆಟ್ಟಿ ಗ್ರಾಮದ ಸತ್ಯಪ್ರಸಾದ್ ಗಬಲ್ಕಜೆ ಅವರನ್ನು ಉಲ್ಲೇಖಿಸಿ ಜಾತಿ ನಿಂದನೆಯಾಗುವಂತೆ ಮಾತನಾಡಿದ್ದರು. ಮಾಧ್ಯಮಗಳಲ್ಲಿ ವಿಡಿಯೋ ಸಹಿತ ವರದಿ ಪ್ರಸಾರಗೊಂಡಾಗ ತೀರ್ಥರಾಮರವರು ಜಾತಿ ನಿಂದನೆ ಮಾಡಿರುವ ವಿಚಾರ ಹಾಗೂ ಈ ಹಿಂದೆ...
ಇವತ್ತು ಪರಿಚಯಸ್ಥರೊಬ್ಬರ ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ “ಅಳು ಅನ್ನುವ ಶಬ್ದವು ಆಳು ಎನ್ನುವ ಶಬ್ದಕ್ಕಿಂತ ಬಹು ಮೌಲ್ಯಯುತವಾಗಿರುತ್ತದೆ” ಎಂಬ ವಾಕ್ಯವನ್ನು ಓದಿದೆ. ಅವರು ಯಾವ ಅರ್ಥದಿಂದ ಈ ವಾಕ್ಯವನ್ನು ಬರೆದಿದ್ದಾರೋ ಗೊತ್ತಿಲ್ಲ. ಆದರೆ ಇಂದಿನ ಈ ಸಮಾಜದಲ್ಲಿ ತಮ್ಮ ಬದುಕಿನಲ್ಲಿರುವ ಕಷ್ಟ-ನೋವುಗಳಿಂದ ಕೊರಗಿ ನಿಜವಾಗಿಯೂ ಕಣ್ಣೀರು ಸುರಿಸುತ್ತಾ ನೊಂದವರು ಒಂದೆಡೆಯಾದರೆ, ತಮ್ಮ ಕಾರ್ಯಸಾಧನೆಗಾಗಿ ಮೊಸಳೆ...
33ಕೆ.ವಿ. ಕಾವು - ಸುಳ್ಯ ಏಕಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 01-10-2024 ಮಂಗಳವಾರ ಪೂರ್ವಾಹ್ನ 09:30 ರಿಂದ ಸಾಯಂಕಾಲ 05:00 ಗಂಟೆಯವರೆಗೆ 33ಕೆ.ವಿ. ಕಾವು - ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆ.ವಿ. ಕಾವು ಹಾಗೂ ಸುಳ್ಯ ವಿದ್ಯುತ್ ಉಪಕೇಂದ್ರದಿಂದ...
ಜ್ಯೋತಿ ವಿದ್ಯಾಸಂಘದ ವಾರ್ಷಿಕ ಮಹಾಸಭೆಯು ಜ್ಯೋತಿ ಪ್ರೌಢಶಾಲೆಯಲ್ಲಿ ಸಂಘದ ಅಧ್ಯಕ್ಷ ಎನ್.ಎ ಜ್ಞಾನೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಎನ್.ಎ ಜ್ಞಾನೇಶ್ ರವರನ್ನು ಪುನರಾಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಮುಡುಕಜೆ ಹರಿಶ್ಚಂದ್ರ, ಕೋಶಾಧಿಕಾರಿಯಾಗಿ ಲೋಕನಾಥ್ ಅಮೆಚೂರು ಇವರುಗಳನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಪ್ರಸನ್ನ ನಿಡ್ಯಮಲೆ ಹಾಗೂ ಪ್ರವೀಣ್ ಮಜಿಕೋಡಿ ರವರನ್ನು ನೂತನವಾಗಿ ಆಯ್ಕೆ ಮಾಡಲಾಯಿತು.ಈ...
ವಿದ್ಯಾಸಂಸ್ಥೆಗಳಲ್ಲಿ ಪುಸ್ತಕ ಒದಲು ಸಮಯ ಮೀಸಲಿಡಬೇಕು: ಡಾ.ಶಿಶಿಲ ತಾಲೂಕಿನ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣವನ್ನು ಒಂದೇ ಕ್ಯಾಂಪಸ್ ನಲ್ಲಿ ನೀಡುತ್ತಿರುವ ಅನ್ಸಾರಿಯಾ ಎಜುಕೇಷನ್ ಸೆಂಟರ್ ಇದರ ಅಧೀನದ ದಅವಾ ಕಾಲೇಜಿನಲ್ಲಿ ನೂತನ ಗ್ರಂಥಾಲಯ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.ಇದಕ್ಕೆ ಬೇಕಾದ ಸುಮಾರು 50ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹಿರಿಯ ಲೇಖಕರು, ವಿಶ್ರಾಂತ ಪ್ರಾಂಶುಪಾಲರಾದ ಡಾ| ಪ್ರಭಾಕರ್ ಶಿಶಿಲ ತಾವು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇದರ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನೂತನವಾಗಿ ನಿರ್ಮಿಸಲ್ಪಡುವ ರಂಗಮಂದಿರ ಸಭಾಭವನ ಹಾಗೂ ಕೊಠಡಿಗಳ ನಿರ್ಮಾಣಕ್ಕಾಗಿ ಸಹಾಯಧನವನ್ನ ಯಾಚಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆ ಇವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ತೀರ್ಥರಾಮ ಅಂಬೆಕಲ್ಲು, ಕಾರ್ಯದರ್ಶಿಗಳು ಹಾಗೂ...
ಕಲ್ಮಡ್ಕ ಗ್ರಾಮದ ಕಾಪಡ್ಕ ನಿವಾಸಿ, ಎಣ್ಮೂರಿನ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಧನರಾಜ್ (32)ಎಂಬ ಯುವಕ ತೀವ್ರ ಅಸೌಖ್ಯದಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಸೆ.30 ರಂದು ನಡೆದಿದೆ. ಮೃತರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ, ಮತ್ತು ಸುಳ್ಯ ಹೋಬಳಿ ಘಟಕ ಹಾಗೂ ತಾಲೂಕು ಆಡಳಿತದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಸುಳ್ಯಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು. ತಹಶೀಲ್ದಾರ್ ಅರವಿಂದ್ ಕೆ. ಎಂ., ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್.,ಕ್ಷೇತ್ರ...
ದುಗ್ಗಲಡ್ಕ ಸಮೀಪದ ಕೆದ್ಕಾನ ಎಂಬಲ್ಲಿ ಸುಳ್ಯ ನಗರ ಪಂಚಾಯತ್ ಕಸ ವಿಲೇವಾರಿ ಘಟಕ ಮಾಡುವ ಪ್ರಸ್ತಾಪಕ್ಕೆ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ಸಮಿತಿ ರಚಿಸಿಕೊಂಡಿದ್ದಾರೆ. ಕೆದ್ಕಾನ, ಕೊಯಿಕುಳಿ, ಗೋಂಟಡ್ಕ, ಮಿತ್ತಮಜಲು, ಕುದ್ದಾಜೆ, ದುಗ್ಗಲಡ್ಕ ಪ್ರದೇಶದ ನಾಗರಿಕರು ದುಗ್ಗಲಡ್ಕ ದುಗ್ಗಲಾಯ ದೈವಸ್ಥಾನದ ವಠಾರದಲ್ಲಿ ಸಭೆ ಸೇರಿ ಯಾವುದೇ ಕಾರಣಕ್ಕೂ ನಗರದ ಕಸವನ್ನು ಕೆದ್ಯಾನ ಪ್ರದೇಶದಲ್ಲಿ...
ಜಾಲ್ಸೂರು ಪಂಚಾಯಿತ್ ವತಿಯಿಂದ ಸೋಣಂಗೇರಿಯಲ್ಲಿ ನಿರ್ಮಿಸಿದ್ದ ಬಸ್ ನಿಲ್ದಾಣವನ್ನು ರಸ್ತೆ ಅಗಲೀಕರಣ ವೇಳೆ ತೆರವುಗೊಳಿಸಲಾಗಿತ್ತು. ರಸ್ತೆ ಕಾಮಗಾರಿ ಸಂಪೂರ್ಣ ಮುಗಿದರೂ ಬಸ್ ನಿಲ್ದಾಣಕ್ಕೆ ಮಾತ್ರ ನೆಲೆ ಸಿಕ್ಕಿಲ್ಲ. ಈ ರಸ್ತೆ ಪ್ರಮುಖವಾಗಿ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಜಾಲ್ಸೂರು ಮುಂತಾದ ಗ್ರಾಮ ಮತ್ತು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಿದ್ಯಾರ್ಥಿಗಳು,ಪ್ರಯಾಣಿಕರು ಸಂಚರಿಸುವ ಸ್ಥಳ ಇದಾಗಿದ್ದು, ಬಸ್...
Loading posts...
All posts loaded
No more posts