Ad Widget

ಕರಿಯಮೂಲೆ : ತಾತ್ಕಾಲಿಕ ಅಂಗನವಾಡಿ ಕೇಂದ್ರದಲ್ಲಿ ಊರವರಿಂದ ಶ್ರಮದಾನ

ಸುಳ್ಯ: ಕರಿಯಮೂಲೆಯಲ್ಲಿ ಈ ಹಿಂದೆ ನಿರ್ಮಿಸಲಾದ ಅಂಗನವಾಡಿ ಕೇಂದ್ರದಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯು ತಾತ್ಕಾಲಿಕವಾಗಿ ವಿಷ್ಣು ನಗರದಲ್ಲಿರು ಮನೆಯೊಂದನ್ನು ಅಂಗನವಾಡಿ ಕೇಂದ್ರವಾಗಿ ಮಾರ್ಪಾಡು ಮಾಡಲು ತೀರ್ಮಾನಿಸಿದ್ದರು.‌ ಈ ಹಿನ್ನಲೆಯಲ್ಲಿ ವಿಷ್ಣು ನಗರದ ಮನೆಯ ಪರಿಸರದಲ್ಲಿ ಊರವರಿಂದ ಶ್ರಮದಾನ ನಡೆಸಲಾಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಎನ್.ಎಸ್.ಯು.ಐ. ಪದಾಧಿಕಾರಿಗಳ ನೇಮಕ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಿತಿಯ ಪದಾಧಿಕಾರಿಗಳ ನೇಮಕವನ್ನು ಎನ್.ಎಸ್.ಯು.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಧನುಷ್ ಕುಕ್ಕೇಟಿ ಮತ್ತು ಜಿಲ್ಲಾ ಎನ್.ಎಸ್.ಯು.ಐ ಉಪಾದ್ಯಕ್ಷರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಸ್ತುವಾರಿಗಳಾದ ಕೀರ್ತನ್ ಗೌಡ ಕೊಡಪಾಲ ರವರ ನೇತೃತ್ವದಲ್ಲಿ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸುಹನ್ ಆಳ್ವ...
Ad Widget

ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ

ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ವಿದ್ಯಾ ಬೋಧಿನಿ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. 17ರ ವಯೋಮಿತಿಯ ಬಾಲಕರ ತಂಡ ಪ್ರಶಸ್ತಿ ,17ರ ವಯೋಮಿತಿಯ ಬಾಲಕಿಯರ ತಂಡ ಪ್ರಶಸ್ತಿ, 17ರ ವಯೋಮಿತಿಯ ಬಾಲಕ/ ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿವಿಧ ಕ್ರೀಡಾ ವಿಭಾಗದಲ್ಲಿ ವಿದ್ಯಾರ್ಥಿಗಳು ಜಿಲ್ಲಾ...

ಸುಬ್ರಹ್ಮಣ್ಯದ ಕುಮಾರಧಾರ ವೆಂಟೆಡ್ ಡ್ಯಾಮ್ ಬಳಿ ಸ್ವಚ್ಛತಾ ಕಾರ್ಯ

ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬಂದು ಭಕ್ತಾದಿಗಳ ಸ್ನಾನಘಟ್ಟ ಬಳಿಯ ವೆಂಟೆಡ್ ಡ್ಯಾಮ್ ಬಳಿ ಮರ, ಕಸ, ಕಡ್ಡಿ, ಕಲ್ಲು ,ಸೇರಿಕೊಂಡು ನೀರು ಶೇಖರಣೆಗೊಂಡು ಮಲಿನ ಗೊಂಡಿತ್ತು. ಇದನ್ನು ಮನಗಂಡ ರವಿ ಕಕ್ಕೆ ಪದವು ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್...

ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆಯಲ್ಲಿ ಬಹುಮಾನ

ದ. ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗೆ ಒಳಪಟ್ಟ ಸಿ.ಬಿ.ಎಸ್.ಇ ಮತ್ತು ಐ ಸಿ ಎಸ್ ಇ ಶಾಲೆಗಳ ಒಕ್ಕೂಟದ ಸಹಯೋಗದೊಂದಿಗೆ ಮಂಗಳೂರಿನ ಯೆನೆಪೋಯ ಶಾಲೆಯ ಆತಿಥ್ಯದಲ್ಲಿ ಮಂಗಳೂರಿನ ಎಮ್ಮೆಕೆರೆ ಸ್ಮಾರ್ಟ್ ಸಿಟಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಅ.26 ರಂದು ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಾರೆಯ ಜ್ಞಾನ ಗಂಗಾ...

ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುತ್ತಿರುವ ಗುತ್ತಿಗಾರಿನ ರಾಘವೇಂದ್ರ – ಸಹೃದಯಿಗಳ ಸಣ್ಣ ಕಾಣಿಕೆ ಈ ಬಡ ಕುಟುಂಬದ ಬಾಳಲ್ಲಿ ಬೆಳಕು ಕಾಣುವಂತಾಗಲಿ

ಗುತ್ತಿಗಾರು ಗ್ರಾಮದ ಪೈಕ ನಿವಾಸಿ ರಾಘವೇಂದ್ರ(ಕುಮಾರ) ಎಂಬವರ ತಲೆಯಲ್ಲಿ ಗೆಡ್ಡೆ ಬೆಳೆದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ಶಸ್ತ್ರ ಚಿಕಿತ್ಸೆಗೆ ಅಂದಾಜು 3 ರಿಂದ 5 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಅದಲ್ಲದೆ ಇವರಿಗೆ ಸುಮಾರು ಕೆಲ ವರ್ಷದ ಹಿಂದೆ ಅಪಘಾತವಾಗಿ ಒಂದು ಕೈ ಸ್ವಾಧೀನ ಕಳೆದು ಕೊಂಡಿದ್ದರು. ಆದರೂ ಒಂದು...

ನಿಮ್ಮ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ, ಪೋಲೀಸರಿಗಾಗಿ ಹೆಲ್ಮೆಟ್ ಧರಿಸಬೇಡಿ ಜ್ಯೋತಿ ಕೆ.ವಿ. – ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕದಿಂದ ರಸ್ತೆ ಸುರಕ್ಷತಾ ಮತ್ತು ಮಾದಕ ವ್ಯಸನ ಜಾಗೃತಿ ಮಾಹಿತಿ ಕಾರ್ಯಾಗಾರ

ಜೀವನ ಅತ್ಯಂತ ಅಮೂಲ್ಯವಾದುದು. ಕೆಟ್ಟ ಚಟಗಳಿಗೆ ಬಲಿಬೀಳದೇ ಅದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ನಮಗಾಗಿ ಜೀವನ ಸವೆಸುವ ಮನೆಯ ಸದಸ್ಯರನ್ನು ನೆನಪು ಮಾಡಿಕೊಳ್ಳಬೇಕು. ಹಾಗೆಯೇ ದ್ವಿಚಕ್ರ ಸವಾರರು ನಿಮ್ಮ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ, ಪೋಲೀಸರಿಗಾಗಿ ಹೆಲ್ಮೆಟ್ ಧರಿಸಬೇಡಿ ಎಂದು ಸುಳ್ಯ ಆರಕ್ಷಕ ಠಾಣೆಯ ಪೋಲಿಸ್ ಕಾನ್ಸ್ಟೇಬಲ್ ಜ್ಯೋತಿ ಕೆ...

ಸುಳ್ಯ : ತಾಲೂಕು ಮಟ್ಟದ ಸೇವಾಪ್ರತಿನಿಧಿಗಳ ಅರ್ಧ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಯೋಜನಾ ವ್ಯಾಪ್ತಿಯ ಸೇವಾಪ್ರತಿನಿಧಿಗಳ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯನ್ನು ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.ಈ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲೆ 2 ರ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ದೀಪವನ್ನು ಪ್ರಜ್ವಲಿಸಿ ಮಾತನಾಡುತ್ತ, ಸಾಧನೆಯ ಗುರಿಯಲ್ಲಿ ಅಡೆತಡೆಗಳು...

ರೈತರ ಹಕ್ಕುಗಳ ರಕ್ಷಣೆಗಾಗಿ ಕಾನೂನು ಹೋರಾಟ ನಡೆಸಲು ಸಮಾಲೋಚನಾ ಸಭೆಯಲ್ಲಿ ನಿರ್ಧಾರ – ಸಲಹಾ ಸಮಿತಿ, ಗ್ರಾಮ ಮಟ್ಟದಲ್ಲಿ ರೈತ ಸಮಿತಿ ರಚಿಸುವ ಬಗ್ಗೆ ನಿರ್ಧಾರ ;ಬದುಕುವ ಹಕ್ಕನ್ನು ಕೇಳಲು ಹೋದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ – ವಕೀಲ ಪ್ರದೀಪ್

ಬದುಕುವ ಹಕ್ಕನ್ನು ಕೇಳಲು ಹೋದರೇ ಮಾತ್ರ ಮಲೆನಾಡಿನ ಜೀವನ ಸಾಧ್ಯ. ನಾವು ಇಂದು ಕಸ್ತೂರಿ ರಂಗನ್ ವರದಿಯ ಹಿಂದೆ ಹೋಗುವುದನ್ನು ಬಿಟ್ಟು ನಮ್ಮ ಹಕ್ಕುಗಳ ರಕ್ಷಣೆಗಾಗಿ ಕಾನೂನು ಹೋರಾಟ ಆರಂಭಿಸಬೇಕಿದೆ ಇದರಿಂದಾಗಿ ಪಶ್ಚಿಮಘಟ್ಟಗಳ ಜ್ವಲಂತ ಸಮಸ್ಯೆಗಳಿಗೆ ಹರಿಹಾರ ಸಿಗಬಹುದು ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಸಂಚಾಲಕರಾಗಿರುವ ವಕೀಲ ಪ್ರದೀಪ್ ಕೆ.ಎಲ್. ಹೇಳಿದರು. ಅವರು ಸುಳ್ಯದ...

ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಭರಾಟೆ ಜೋರು – ಪೋಲೀಸರಿಂದ ಬಿಗಿ ತಪಾಸಣೆ

ಸುಳ್ಯ : ಬೆಳಕಿನ ಹಬ್ಬ ದೀಪಾವಳಿಗೆ ಕೆಲ ದಿನಗಳು ಬಾಕಿ ಇರುವಾಗ ಪಟಾಕಿ ಸಾಗಾಟಗಳು ಹೆಚ್ಚಾಗಿ ನಡೆಯುತ್ತಿದ್ದು, ಸುಳ್ಯ ತಾಲೂಕಿನ ನಾನಾ ಭಾಗಗಳಲ್ಲಿ ಪೋಲಿಸ್ ಮತ್ತು ಇತರ ಇಲಾಖೆಗಳ ಪರವಾಣಿಗೆ ಪಡೆದುಕೊಂಡು ಪಟಾಕಿ ಮಳಿಗೆ ಆರಂಭಗೊಳ್ಳುತ್ತಿದೆ.   ಅಕ್ರಮವಾಗಿ ಪಟಾಕಿ ಸಾಗಾಟ ನಡೆಸುವುದರ ವಿರುದ್ದ ಪೋಲಿಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಸುಳ್ಯದ ಗಾಂಧಿನಗರದಲ್ಲಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದನ್ನು...
Loading posts...

All posts loaded

No more posts

error: Content is protected !!