Ad Widget

ಸುಳ್ಯಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದ ಹಳೆಯ 33ಕೆ.ವಿ. ವಿದ್ಯುತ್ ಲೈನ್ ಸುಸ್ಥಿತಿಯಲ್ಲಿಡುವಂತೆ ಬಿಜೆಪಿ ಮನವಿ

ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33ಕೆ.ವಿ ವಿದ್ಯುತ್ ಮಾರ್ಗದಲ್ಲಿ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಹಿಂದೆ ಹೊಸ ವಿದ್ಯುತ್ ಮಾರ್ಗ ಎಳೆಯುವ ಸಂದರ್ಭದಲ್ಲಿ ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದರೂ, ಹಳೆಯ ವಿದ್ಯುತ್ ಮಾರ್ಗವನ್ನು ಯಾವುದೇ ನಿರ್ವಹಣೆ ಮಾಡದೇ ಇದ್ದುದರಿಂದ ಬದಲಿ ಮಾರ್ಗವಾಗಿ ಹಳೆಯ ವಿದ್ಯುತ್ ಲೈನ್ ಅನ್ನು ಬಳಸಲು ಸಾಧ್ಯವಿಲ್ಲದಂತಾಗಿದೆ.....

‌ಜಟ್ಟಿಪಳ್ಳ : ತೆಂಗಿನ ಮರ ಬಿದ್ದು ವಿದ್ಯುತ್ ಕಂಬ ತುಂಡು – ಅಪಾಯದಿಂದ ಪಾರಾದ ಅಟೋರಿಕ್ಷಾ ಪ್ರಯಾಣಿಕರು

ಜಟ್ಟಿಪಳ್ಳ ರಸ್ತೆಯ ವಿಶ್ವಕಾಂಪ್ಲೆಕ್ಸ್ ಎದುರು ಭಾಗದಲ್ಲಿ ರಸ್ತೆಗೆ ತೆಂಗಿನಮರ ಬಿದ್ದ ಪರಿಣಾಮ ವಿದ್ಯುತ್ ಲೈನ್ ಗೆ ಹಾನಿಯಾಗಿದ್ದು ಕಂಬ ಮುರಿದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಅಟೋ ದ ಎದುರು ಭಾಗಕ್ಕೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
Ad Widget

ಪುತ್ತೂರು : 4ನೇ ವಾರಕ್ಕೆ ಕಾಲಿಟ್ಟ ಭಾವ ತೀರ ಯಾನ – ಮಾ.13 ಮತ್ತು 14 ರಂದು ಸಂಜೆ 7.15 ಕ್ಕೆ ಶೋ

ಸುಳ್ಯದ ಯುವ ಸಂಗೀತ ನಿರ್ದೆಶಕ ಮಯೂರ ಅಂಬೆಕಲ್ಲು ಸಾರಥ್ಯದಲ್ಲಿ ಮೂಡಿಬಂದ "ಭಾವ ತೀರ ಯಾನ" ಚಲನಚಿತ್ರ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಮಾ. 13 ಮತ್ತು 14 ರಂದು ಸಂಜೆ 7.15 ಕ್ಕೆ  ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್‌'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ...

ಮಾರ್ಚ್ 15 ರಿಂದ 18 ರವರೆಗೆ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವವು ಮಾ 15,16,17 ಹಾಗೂ 18 ರಂದು ವಿಜ್ರಂಭಣೆಯಿಂದ ನಡೆಯಲಿದೆ. ಮಾ.15 ರಂದು ಬೆ.10 ರಿಂದ ಹಸಿರುವಾಣಿ ಮೆರವಣಿಗೆ , ಕಲವರ ನಿರಕ್ಕಲ್ (ಉಗ್ರಾಣ ತುಂಬುವುದು), ರಾ.7.00 ರಿಂದ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು, ಶ್ರೀ ಕೊರ್ತಿಯಮ್ಮನ ಕೋಲಗಳು, ಶ್ರೀ ಪೊಟ್ಟನ್ ದೈವದ ಕೋಲ ನಡೆಯಲಿದೆ....

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜ‌ರ್ ರೈಲಿಗೆ ತಿಂಗಳಾಂತ್ಯದೊಳಗೆ ಹಸಿರು ನಿಶಾನೆ: ಕ್ಯಾ. ಚೌಟ

ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜ‌ರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಈಗಾಗಲೇ ಮಂಜೂರಾತಿ ನೀಡಿದ್ದು, ರೈಲ್ವೆ ಸಚಿವ ವಿ. ಸೋಮಣ್ಣ ಅವರ ದಿನಾಂಕ ನಿಗದಿಪಡಿಸಿಕೊಂಡು ಮಾರ್ಚ್ ಅಂತ್ಯದೊಳಗೆ ಈ ರೈಲು ಸೇವೆಗೆ ಚಾಲನೆ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾ.12ರಂದು ರೈಲ್ವೆ ಖಾತೆ ರಾಜ್ಯ ಸಚಿವ...

ಸುಳ್ಯಕ್ಕೆ ಸಂಜೆ ವೇಳೆಗೆ ವಿದ್ಯುತ್ ಸರಬರಾಜು ಸಾಧ್ಯತೆ

ಮಾ.13 ರಂದು ಸಂಜೆ ಸುರಿದ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ  33/11 ಕೆ.ವಿ‌. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜತೆಗೆ ಇಲ್ಲಿ ಕಾವು ಸಬ್ ಸ್ಟೇಷನ್ ನಿಂದ ಬರುವ ಕನಕಮಜಲು 11 ಕೆ.ವಿ.ಪೀಡರ್ ನ 2 ಕಂಬಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ...

ಏಪ್ರಿಲ್ 26 & 27 ಸಂಪಾಜೆಯಲ್ಲಿ ಗೌಡ ಪ್ರೀಮಿಯರ್ ಲೀಗ್ -2025 ಓವರ್ ಆರ್ಮ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

ಏಪ್ರಿಲ್ 26 ಶನಿವಾರ ಹಾಗೂ ಏಪ್ರಿಲ್ 27 ಆದಿತ್ಯವಾರದಂದು ಗೌಡ ಸಮುದಾಯದವರ 10 ತಂಡಗಳ‌ ಲೀಗ್ ಮಾದರಿಯ ಗೌಡ ಪ್ರೀಮಿಯರ್ ಲೀಗ್ -2025 ಓವರ್ ಆರ್ಮ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದ ಪ್ರಥಮ ಬಹುಮಾನ 50000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 30000 ನಗದು...

ಮಾ.14 ಮತ್ತು 15 ರಂದು ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವ – ಕಾರಣಿಕದ ಪುರುಷ ದೈವ ಹಾಗೂ ರಾಜ್ಯದೈವದ ನೇಮ

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನಲ್ಲಿ ನಡೆಯುವ ಜಾತ್ರೋತ್ಸವದ ಅಂಗವಾಗಿ ಫೆ.10 ರಂದು ಕಂಚು ಕಲ್ಲಿಗೆ ತೆಂಗಿನಕಾಯಿ ಹೊಡೆಯುವ ಕಾರ್ಯಕ್ರಮ, ಮಾ.02 ರಂದು ಬದಿ ಬಾಗಿಲು ತೆಗೆಯುವ ಕಾರ್ಯಕ್ರಮ, ಮಾ 09 ರಂದು ನಾಗ ತಂಬಿಲ, ಪ್ರತಿಷ್ಠಾ ದಿನಾಚರಣೆ ನಡೆದಿದ್ದು ಮಾ.14 ಮತ್ತು 15 ರಂದು ದೈವಗಳ ನೇಮೋತ್ಸವ ನಡೆಯಲಿದೆ....

ಅಂತಾರಾಜ್ಯ ಸಂಪರ್ಕಿಸುವ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸೇತುವೆ – ಈ ಬಗ್ಗೆ ಜನಪ್ರತಿನಿಧಿಗಳು ಏನು ಹೇಳ್ತಾರೆ?

ಅಂತಾರಾಜ್ಯ ಸಂಪರ್ಕಿಸುವ ಸುಳ್ಯ ಕೋಲ್ಚಾರು ಬಂದ್ಯಡ್ಕ ರಸ್ತೆಯಲ್ಲಿ ಪಯಸ್ವಿನಿ ನದಿಗೆ ನಾಗಪಟ್ಟಣದಲ್ಲಿ ನಿರ್ಮಿಸಲಾದ ಸೇತುವೆ ಹಲವು ಕಡೆ ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಸೇತುವೆಯ ಮೇಲ್ಭಾಗದ ಅಲ್ಲಲ್ಲಿ ಕಾಂಕ್ರೀಟ್ ಎದ್ದು ಹೋಗಿದ್ದು ತಳಭಾಗ ಕಾಣಿಸುತ್ತಿದೆ. ಪಾದಾಚಾರಿಗಳು ಎಚ್ಚರ ತಪ್ಪಿದರೇ ಕಾಲು ಮುರಿದುಕೊಳ್ಳುವ ಹಂತ ತಲುಪಿದೆ. ಸೇತುವೆಯ ಮೇಲೆ ನಿಂತಾಗ ಅಟೋ ರಿಕ್ಷಾ ಸಂಚರಿಸಿದರೂ ಘನ ವಾಹನ ಸಂಚರಿಸಿಂತ...

ಆನೆಗುಂಡಿಯಲ್ಲಿ ಮರ ಬಿದ್ದು ವಿದ್ಯುತ್ ಕಂಬ ಬ್ರೇಕ್ ಡೌನ್ – ವಿದ್ಯುತ್ ವಿಳಂಬ ಸಾಧ್ಯತೆ

ಇಂದು ಸುರಿದ ಪ್ರಥಮ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ  33/11 ಕೆ.ವಿ‌. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದಿರುತ್ತದೆ. ಈ ಹಿನ್ನೆಲೆಯಲ್ಲಿ ಸುಳ್ಯಕ್ಕೆ ವಿದ್ಯುತ್ ಸರಬರಾಜು ವಿಳಂಬವಾಗಬಹುದೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ
Loading posts...

All posts loaded

No more posts

error: Content is protected !!