- Monday
- November 25th, 2024
ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಕಳೆದ 50 ವರ್ಷಗಳಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ, ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ ಸದಾ ಪಾದರಸದಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಗೋಕುಲ್ ದಾಸ್ ಸುಳ್ಯ ಇವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು...
ಸುಳ್ಯ:ನವೆಂಬರ್01: ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ "ಒಲವಿನ ಕರ್ನಾಟಕ" ಎಂಬ ಧ್ಯೇಯ ವಾಕ್ಯದಡಿ ಧ್ವಜಾರೋಹಣ ಕಾರ್ಯಕ್ರಮವು ಸುಳ್ಯದ ಗಾಂಧಿನಗರದ ಪಕ್ಷದ ಕಚೇರಿಯ ಮುಂಭಾಗದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ ಬ್ಲಾಕ್ ಸಮಿತಿಯ ಉಪಾಧ್ಯಕ್ಷರಾದ ಸಲೀಂ ಗೂನಡ್ಕ ರವರು ಧ್ವಜಾರೋಹಣಗೈದರು. ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ...
ಬೆಳ್ಳಾರೆಯ ಮುಖ್ಯರಸ್ತೆ ಬಳಿಯ ಶ್ರೀ ದುರ್ಗಾ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸುಪ್ರಭ ಜ್ಯುವೆಲ್ಲರಿ ವರ್ಕ್ಸ್ ಸಂಸ್ಥೆಯು 14ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಈ ಪ್ರಯುಕ್ತ ಸಂಸ್ಥೆಯಲ್ಲಿ ನ.01ರಂದು ಗಣಹೋಮ, ಲಕ್ಷ್ಮೀಪೂಜೆ ಹಾಗೂ ವಾಹನಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸತ್ಯನಾರಾಯಣ ಆಚಾರ್ಯ ಬೆಳ್ಳಾರೆ ಹಾಗೂ ಪ್ರಸಾದ್ ಆಚಾರ್ಯ ಬೆಳ್ಳಾರೆ ಮತ್ತು ಮನೆಯವರು ಹಾಗೂ ಸಂಸ್ಥೆಯ ಸಿಬ್ಬಂದಿ...
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ನ.01ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಸಂದರ್ಭದಲ್ಲಿ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು, ವಸಂತ ಕುಮಾರ್ ನಾಲ್ಕುತ್ತು, ಭರತ್ ಪಂಜಿಗಾರು, ಮಿಥುನ್ ಗೌರಿಹೊಳೆ, ಹಿಮಾಂಶು ಕುಂಟಿಕಾನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಡಪ್ಪಾಡಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ , ಕಸ್ತೂರಿ ರಂಗನ್ ವರದಿಯ ವಿರುದ್ಧ , ಪಿಡಿಓ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಶ್ರೀ ಕಿಶೋರ್ ಶಿರಾಡಿಯವರು ಭಾಗವಹಿಸಿ , ವರದಿಯ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸದಸ್ಯರಾದ ಚಂದ್ರಶೇಖರ ಬಾಳುಗೋಡು ಉಪಸ್ಥಿತರಿದ್ದರು. ಗ್ರಾಮ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕಾಲೇಜಿನ ಷಷ್ಠ್ಯಬ್ದ ರಂಗಮಂದಿರದಲ್ಲಿ ಆಚರಿಸಲಾಯಿತು. ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ., ಆಂತರಿಕ ಗುಣಮಟ್ಟ...
ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ ಕೆಳ ಭಾಗದಲ್ಲಿ ಬಲೂನಿನಂತೆ ಊದಿಕೊಂಡು ಅಥವಾ ಸರಿದುಕೊಂಡು ಮಾಯವಾಗುವ ಸ್ಥಿತಿಯಾಗಿರುತ್ತದೆ. ಅಚ್ಚಕನ್ನಡದಲ್ಲಿ ಉಸುರು ಬುರುಡೆ ಅಥವಾ ಬೂರು ಎಂದು ಕರೆಯುತ್ತಾರೆ. ನಾವು ಉಸಿರು ದೀರ್ಘವಾಗಿ ತೆಗೆದುಕೊಂಡಾಗ ಹೊಟ್ಟೆಯ ಭಾಗದಲ್ಲಿ ಒತ್ತಡ...
ನಾಡಿನೆಲ್ಲೆಡೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ ಎಂದು ಜನತೆ ಸಂದೇಶ ಸಾರಿದರೇ ಇತ್ತ ಮೆಸ್ಕಾಂ ಬೆಳಕಿನಿಂದ ಕತ್ತಲಿನಡೆಗೆ ಎಂಬ ಸಂದೇಶ ಸಾರುತ್ತಿದೆ. ದೀಪಗಳ ಹಬ್ಬವಾದ ದೀಪಾವಳಿಯನ್ನು ಸ್ವಾಗತಿಸುವ ಮೊದಲ ದಿನವೇ ಸುಳ್ಯವನ್ನು ಕತ್ತಲೆಗೆ ದೂಡಿದ ಮೆಸ್ಕಾಂ. ದೀಪಗಳ ಹಬ್ಬವಾದ ದೀಪಾವಳಿ ಪ್ರಾರಂಭದ ದಿನವಾದ ಇಂದು ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಂಜೆ 6:30 ರ ಬಳಿಕ...
ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಶ್ರೀರಾಂಪೇಟೆಯ ಕುರುಂಜಿ ಕಾಂಪ್ಲೆಕ್ಸ್ ನಲ್ಲಿರುವ ಕುರುಂಜಿ ಎಂಟರ್ ಪ್ರೈಸಸ್ ನ ತಿಮರೆ ಮಳಿಗೆಯಲ್ಲಿ ಅ.31 ರಂದು ಸಂಜೆ ಧನಲಕ್ಷ್ಮಿ ಪೂಜೆ ನೆರವೇರಿತು.ಎ.ಒ.ಎಲ್.ಇ ಇದರ ಜನರಲ್ ಸೆಕ್ರೆಟರಿ ಅಕ್ಷಯ್ ಕೆ ಸಿ. , ಸಾಯಿರಾಂ ಕೆವಿಜಿ,ಕುರುಂಜಿ ಎಂಟರ್ಪ್ರೈಸಸ್ ನ ದೀಪಕ್ ಕುಮಾರ್ ,ಅನಿಲ್ ಕುಮಾರ್ ಎಲಿಮಲೆ ,ಗಣೇಶ್ ಕುಮಾರ್, ಸುನಿಲ್, ಗುರುಪ್ರಸಾದ್...
ಅಜ್ಜಾವರ ಗ್ರಾಮದ ಕರಿಯಮೂಲೆಯಲ್ಲಿ ಕಾರ್ಯಾಚರಿಸುತಿದ್ದ ಅಂಗನವಾಡಿ ಕೇಂದ್ರವನ್ನು ಕಾಟಿಪಳ್ಳಕ್ಕೆ ಸ್ಥಳಾಂತರ ಮಾಡಲಾಯಿತು. ಬೆಳಗ್ಗೆ ಗಣಹೋಮ ನಡೆಸಲಾಯಿತು. ಸಿಡಿಪಿಒ ಶೈಲಜಾ ದಿನೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ , ಸದಸ್ಯರಾದ ದೇವಕಿ ಮೇನಾಲ , ಗ್ರಾಮ ಸಹಾಯಕ ಶಿವಣ್ಣ , ಗ್ರಾ. ಪಂ ಪಿಡಿಒ ಜಯಮಾಲ ಹಾಗೂ...
Loading posts...
All posts loaded
No more posts