ಸೆ.26 : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ “ನಿರಂಜನ ಬದುಕು – ಬರಹ: ನೆನಪು” ಕಾರ್ಯಕ್ರಮ

ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರೆಂದೇ ಪ್ರಸಿದ್ಧರಾದ ಕುಲ್ಕುಂದ ಶಿವರಾಯರ ಜನ್ಮ ಶತಮಾನೋತ್ಸವದ ಪ್ರಯುಕ್ತ "ನಿರಂಜನ ಬದುಕು - ಬರಹ : ನೆನಪು" ಕಾರ್ಯಕ್ರಮವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 26,2025ನೇ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ...

ನಿಧನ : ದ.ಕ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ನಾಳ ಕುಶಾಲಪ್ಪ ಗೌಡ

ಸುಬ್ರಹ್ಮಣ್ಯ ಸೆಪ್ಟೆಂಬರ್ 25 : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧಿಕ್ಷಕ  ನಾಳ ಕುಶಾಲಪ್ಪ ಗೌಡ ಏನೇಕಲ್ಲು(83) ಗುರುವಾರ ಮುಂಜಾನೆ ವಯೋಸಹಜವಾಗಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರರಾದ  ಏನೇಕಲ್ಲು ಶಂಖಪಾಲ ಹಾಗೂ ಬಚ್ಚನಾಯಕ ದೇವಸ್ಥಾನ  ಹಾಗೂ ಕುಲ್ಕುಂದ ಬಸವೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮನೋಹರ ನಾಳ, ಮಹೇಶ್, ಮುರಳಿ...
Ad Widget

ನಿಧನ : ನಿವೃತ್ತ ಹೆಡ್ ಕಾನ್ಸ್ಟೇಬಲ್ ಸಣ್ಣಣ್ಣ ಗೌಡ ದೋಳ

ಹರಿಹರ ಪಳ್ಳತ್ತಡ್ಕ ಗ್ರಾಮದ ಬೆಂಡೋಡಿಯ ದೋಳಮನೆ ನಿವೃತ್ತ ಹೆಡ್ ಕಾನ್ಸ್ಟೇಬಲ್ ಪ್ರಸ್ತುತ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ನೆಲೆಸಿದ ಸಣ್ಣಣ್ಣ ಗೌಡ ದೊಳಮನೆ ಇವರು ಸೆಪ್ಟೆಂಬರ್ 23ರಂದು ನಿಧನರಾದರು. ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಇವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಬೇರೆ ಬೇರೆ ಕಡೆ ಕೆಲಸವನ್ನು ನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು...

ಹರಿಹರ ಪಳ್ಳತ್ತಡ್ಕ : ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಸಹಯೋಗದೊಂದಿಗೆ ಸೆ.25 ರಂದು ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಹರ ಹಾಗೂ ಬಾಳುಗೋಡು ಗ್ರಾಮದ “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ” ನಡೆಯಿತು.ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ...

ಸುಳ್ಯ : ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ವಿಜಯದಶಮಿ ಪ್ರಯುಕ್ತ ವಿಶೇಷ ಕೊಡುಗೆ

ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ವಿಜಯದಶಮಿ ಪ್ರಯುಕ್ತ ತನ್ನ ಎಲ್ಲಾ ಗ್ರಾಹಕರಿಗೆ ಸೆ.24ರಿಂದ ಅ.05ರವರೆಗೆ ಚಿನ್ನದ ಆಭರಣಗಳು, ವಜ್ರದ ಆಭರಣಗಳು, ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಚಿನ್ನಾಭರಣಗಳ ಮೇಲೆ ಪ್ರತೀ 8ಗ್ರಾಂಗೆ ರೂ.2400/- ನೇರ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್‌ಗೆ ರೂ.5000/- ನೇರ ರಿಯಾಯಿತಿ ಹಾಗೂ ಬೆಳ್ಳಿ...

ಕೊಲ್ಲಮೊಗ್ರು : ಗ್ರಾಮ ಪಂಚಾಯತ್ ನಲ್ಲಿ ನಡೆದ ಅವ್ಯವಹಾರವನ್ನು ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ – ರಾಜಿನಾಮೆ ನೀಡಿದ ಗ್ರಾಮ ಪಂಚಾಯತ್ ಸದಸ್ಯರು – ಪೀಠೋಪಕರಣ ಕಳವು ಹಾಗೂ ಸಿಸಿ ಕ್ಯಾಮಾರ ದುರ್ಬಳಕೆ ಬಗ್ಗೆ ಕ್ರಮಕ್ಕೆ ಪೋಲೀಸ್ ದೂರು ನೀಡಿದ ಪಿಡಿಓ ಮತ್ತು ಅಧ್ಯಕ್ಷರು

ಭ್ರಷ್ಟಾಚಾರ ವಿರೋಧಿಸಿ ಕೆಲವು ದಿನಗಳ ಹಿಂದೆ ಪ್ರತಿಭಟನೆ ಸಾಕ್ಷಿಯಾಗಿದ್ದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವಠಾರದಲ್ಲಿ ಇಂದು ಮತ್ತೆ ಎರಡನೇ ಹಂತದ ಪ್ರತಿಭಟನೆ ನಡೆದಿದೆ.‌ಭ್ರಷ್ಟಾಚಾರದ ವಿರುದ್ಧದ ಕೂಗಿನೊಂದಿಗೆ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನರು ಒಗ್ಗಟ್ಟಾಗಿ ರೂಪುಗೊಳಿಸಿದ “ನ್ಯಾಯಕ್ಕಾಗಿ ಹೋರಾಡೋಣ” ಸಮಿತಿಯ ವತಿಯಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ ಸೆ.25 ರಂದು ಬೃಹತ್ ಪ್ರತಿಭಟನೆ ನಡೆಯಿತು. ಕೊಲ್ಲಮೊಗ್ರು...

ಕೊಲ್ಲಮೊಗ್ರ: ಪಂಚಾಯತ್ ಅವ್ಯವಹಾರ ಖಂಡಿಸಿ ಪ್ರತಿಭಟನೆ- ಸದಸ್ಯರಿಂದ ರಾಜೀನಾಮೆ

ಭ್ರಷ್ಟಾಚಾರ ವಿರೋಧಿಸಿ ಕೆಲವು ದಿನಗಳ ಹಿಂದೆ ಪ್ರತಿಭಟನೆ ಸಾಕ್ಷಿಯಾಗಿದ್ದ ಕೊಲ್ಲಮೊಗ್ರ ಗ್ರಾಮಪಂಚಾಯತ್ ವಠಾರ ಮತ್ತೆ ಪ್ರತಿಭಟನೆ ನಡೆಯುತ್ತಿದೆ.ಭ್ರಷ್ಟಾಚಾರದ ವಿರುದ್ಧದ ಕೂಗಿನೊಂದಿಗೆ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನರುಗಳ ಒಗ್ಗಟ್ಟಿನೊಂದಿಗೆ ರೂಪುಗೊಂಡ “ನ್ಯಾಯಕ್ಕಾಗಿ ಹೋರಾಡೋಣ” ಸಮಿತಿಯ ವತಿಯಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯುತ್ತಿದೆ ಹಾಗೂ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಿಬ್ಬಂದಿ ಕಳವು ಆರೋಪದ ಬಗ್ಗೆ...

ಸುಬ್ರಹ್ಮಣ್ಯದಲ್ಲಿ ಪಿಂಕಿ ಫ್ಯಾಶನ್ ಡಿಸೈನಿಂಗ್ ಸೇವಾ ಸಂಸ್ಥೆ ಆರಂಭ – “ಮಹಿಳೆಯರು ಸ್ವಉದ್ಯೋಗದೊಂದಿಗೆ ಸ್ವಾಲಂಬಿ ಜೀವನ ನಡೆಸಲಿ” : ವಿಶ್ವನಾಥ ನಡುತೋಟ

ಸುಬ್ರಹ್ಮಣ್ಯ ಸೆಪ್ಟೆಂಬರ್ 24 : "ಇಂದಿನ ದಿನಗಳಲ್ಲಿ ಮಹಿಳೆಯರು ಆಬಲೆಯರು ಅಲ್ಲ. ತಮ್ಮ ಸ್ವಂತ ದುಡಿಮೆಯೊಂದಿಗೆ ಸ್ವಾಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರು. ತಾವು ಸ್ವತಃ ದುಡಿಯುವುದರೊಂದಿಗೆ ಇನ್ನಷ್ಟು ಜನ ಮಹಿಳೆಯರಿಗೆ ತರಬೇತಿ ನೀಡಿ ಸ್ವಂತ ಜೀವನವನ್ನು ಹಾಗೂ ಸ್ವಾವಲಂಬಿ ಬದುಕನ್ನು ನಡೆಸಲು ಎಲ್ಲರಿಗೂ  ಮಾರ್ಗದರ್ಶಕರಾಗಿದ್ದಾರೆ" ಎಂದು ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನುಡಿದರು. ಸುಬ್ರಹ್ಮಣ್ಯ...

ಫ್ರೆಂಡ್ಸ್ ಸಮಹಾದಿ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಲೀಗ್ ವಾಲಿಬಾಲ್ ಪಂದ್ಯಾಟ – ಟೀಮ್ ಪೋಲಾಜೆ ತಂಡ ಚಾಂಪಿಯನ್‌ ; ಕೆ.ಎಸ್.ಟಿ ಕಾಣಿಯೂರು ರನ್ನರ್ ಅಪ್

ಫ್ರೆಂಡ್ಸ್ ಸಮಹಾದಿ ಕ್ಲಬ್‌ ಆಶ್ರಯದಲ್ಲಿ ಆರು ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ಸಮಹಾದಿ ಮೈದಾನದಲ್ಲಿ ಸೆ.21 ಭಾನುವಾರದಂದು ನಡೆಯಿತು.ಕ್ಲಬ್ ಅಧ್ಯಕ್ಷರಾದ ರಿಯಾಝ್ ರಾಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಪಂದ್ಯಾಟವನ್ನು ಉದ್ದೇಶಿಸಿ ಮಾತನಾಡಿ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪಿ.ಎಂ ಅಬ್ದುಲ್...

ಎಲಿಮಲೆ : ಶ್ರೀ ದುರ್ಗಾ ವೆಲ್ಡಿಂಗ್ ಶಾಪ್ ಶುಭಾರಂಭ

ಎಲಿಮಲೆಯ ಕೊಡಿಮಜಲು ಜಾಕೆ ಕಾಂಪ್ಲೆಕ್ಸ್ ನಲ್ಲಿ ಶ್ರೀ ದುರ್ಗಾ ವೆಲ್ಡಿಂಗ್ ಶಾಪ್ ಸೆ.24 ರಂದು ಶುಭಾರಂಭಗೊಂಡಿತು.ಗಣಪತಿ ಹವನ ಮತ್ತು  ಆಯುಧ ಪೂಜೆಯೊಂದಿಗೆ ಶುಭಾರಂಭಗೊಂಡಿತು. ಪೂಜಾ ವಿದಿವಿಧಾನಗಳನ್ನು ನಟರಾಜ್ ಭಟ್ ನೀರಬಿದಿರೆ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ನಿಶ್ಚಿತ್ ಪರ್ಲಡಿ ಮನೆಯವರು ಮತ್ತು ಯತಿಂದ್ರ ಕೊಡ್ತುಗುಳಿ ಮನೆಯವರು ಉಪಸ್ಥಿತರಿದ್ದರು. ಕಾಂಪ್ಲೆಕ್ಸ್ ಮಾಲಕರಾದ ನವೀನ್ ಜಾಕೆ,...
Loading posts...

All posts loaded

No more posts

error: Content is protected !!