- Saturday
- May 9th, 2026
ಬೆಳ್ಳಾರೆ ಗ್ರಾಮದ ಕಾವಿನಮೂಲೆ ವಿಶ್ವನಾಥ್ ಎಂಬವರ ಮನೆಗೆ ಜು 16 ರಂದು ಸಂಜೆ ಮರ ಬಿದ್ದು ಹಾನಿಯಾಗಿದೆ. ಈ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ತೊಂದರೆಯಾಗಿಲ್ಲ. ಎಂಟು ಸಿಮೆಂಟ್ ಶೀಟ್, ಸಿಂಟೆಕ್ಸ್ ನೀರಿನ ಟಾಂಕಿ ಹಾಗೂ ಕಂಗಿನ ಗಿಡಗಳಿಗೆ, ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಸುಮಾರು ಮೂವತ್ತು ಸಾವಿರ ರೂ ನಷ್ಟವಾಗಿದೆ ಎಂದು ಮನೆಯವರು...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ರವರ ಜನ ಮಂಗಲ ಕಾರ್ಯಕ್ರಮದ ಅಡಿಯಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಎ" ಒಕ್ಕೂಟದ ಕಾರ್ಯದರ್ಶಿಯಾದ ಅನಿತಾ ಬೊಂಬಿಲ ರವರ ಅತ್ತೆಯಾದ ಬಾಲಕಿ ರವರಿಗೆ ಸುಮಾರು 3 ತಿಂಗಳಿನಿಂದ ಮೂಳೆ ಸವೆತದಿಂದ ನಡೆದಾಡಲು ಕಷ್ಟವಾದ ಕಾರಣ ವೀಲ್ ಚೇರ್ ಗಾಗಿ ಯೋಜನೆಗೆ ಮನವಿ ಸಲ್ಲಿಸಿದ್ದರು....
ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ಸಾನಿಧ್ಯಕ್ಕೆ ಜು.16 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ರವರು ಭೇಟಿ ನೀಡಿ ದೈವದ ಆಶಿರ್ವಾದ ಪಡೆದರು.ಈ ಸಂದರ್ಭದಲ್ಲಿ ಸುರೇಶ್ ಉಜಿರಡ್ಕ ರವರು ಹರೀಶ್ ಇಂಜಾಡಿ ರವರನ್ನು ಗೌರವದಿಂದ ಬರಮಾಡಿಕೊಂಡರು.ಹರೀಶ್ ಇಂಜಾಡಿ ರವರು ಈ ಹಿಂದೆಯೂ ಕೂಡ ಸಾನಿಧ್ಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು.
ಸುಬ್ರಹ್ಮಣ್ಯ : ಸದಾ ಸಮವಸ್ತ್ರ ಧರಿಸಿ ಕಾಲೇಜಿನಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು ಕೆಸರು ತುಂಬಿದ ಗದ್ದೆಗೆ ಇಳಿದು ರೈತರಂತೆ ಕೈಯಲ್ಲಿ ನೇಜಿ ಹಿಡಿದು ನೇಜಿ ನಾಟಿ ಮಾಡಿ ಖುಷಿಪಟ್ಟರು.ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾ ವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ, ಐಕ್ಯೂಎಸಿ ಘಟಕ ಆಶ್ರಯದಲ್ಲಿ ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನತೆಯ ಪಾತ್ರ ಕಾರ್ಯಕ್ರಮದ ಅಂಗವಾಗಿ ನೇಜಿ...
ಗುತ್ತಿಗಾರಿನಲ್ಲಿ ಕಸಾಪ ವತಿಯಿಂದ ಸರಣಿ ಕಾರ್ಯಕ್ರಮ; ಪರಿಸರ ಸಂರಕ್ಷಣೆಯಿಂದ ಆರೋಗ್ಯಕರ ಜೀವನ ಸಾಧ್ಯ – ಯಶೋಚಂದ್ರ ಪರಮಲೆ
ನಾವು ಎಷ್ಟೇ ತಾಂತ್ರಿಕವಾಗಿ ಬೆಳೆದರು ಪರಿಸರವೇ ನಮ್ಮ ಜೀವಾಳ ಅದನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವುದು ನಮ್ಮ ಕರ್ತವ್ಯ ಪರಿಸರವನ್ನು ಸಂರಕ್ಷಿಸೋಣ ಎಂದು ಪರಿಸರ ಪ್ರೇಮಿ, ಪ್ರಗತಿಪರ ಕೃಷಿಕ ಯಶೋಚಂದ್ರ ಪರಮಲೆ ಹೇಳಿದರು.ಅವರು ಜು.16 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಕಾಲೇಜಿನ ಸಹಯೋಗದಲ್ಲಿ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ ನಡೆಯಿತು.ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಬಿ" ಒಕ್ಕೂಟದ ಸೌಭಾಗ್ಯ ಸಂಘದ ಸದಸ್ಯರಾದ ಲಲಿತಾ ರವರ ಪತಿ ಹುಕ್ರಪ್ಪ ಗೌಡ ಮಲ್ಲಾಜೆ ರವರಿಗೆ ಅನಾರೋಗ್ಯದಿಂದಾಗಿ ನಡೆದಾಡಲು ಕಷ್ಟವಾದ ಕಾರಣ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ...
ಪರಿಸರ ಸಂರಕ್ಷಣೆ ನಮ್ಮ ಹೊಣೆ - ಎ. ಕೆ. ಹಿಮಕರ ಹೆಚ್ಚು ಹೆಚ್ಚು ತಲೆಎತ್ತುತ್ತಿರುವ ಕೈಗಾರಿಕೆಗಳು ನಮ್ಮ ಪರಿಸರದ ನಾಶಕ್ಕೆ ಕಾರಣವಾಗಿದೆ. ಅಂದು ಶ್ರೀಮಂತ ಪರಿಸರವಾಗಿದ ನಮ್ಮ ಪ್ರದೇಶ ಇಂದು ಪ್ರಸ್ತುತತೆಯ ಜೀವನ ಶೈಲಿಗೆ ಪರಿಸರ ವಿನಾಶದ ಅಂಚಿಗೆ ತೆರಳುತಿದೆ. ಪರಿಸರವನ್ನು ಸಂರಕ್ಷಿಸೋಣಎಂದು ಪರಿಸರ ಪ್ರೇಮಿ, ಬಂಟಮಲೆ ಅಕಾಡೆಮಿ ಅಧ್ಯಕ್ಷ ಶ್ರೀ. ಎ. ಕೆ. ಹಿಮಕರ...
ದ.ಕ.ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಇದೆ ಹವಾಮಾನ ಮುಂದುವರಿಯುವ ಸೂಚನೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿರುವುದರಿಂದ ಜುಲಾಯಿ 17(ಗುರುವಾರ) ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪ್ರಾಥಮಿಕ,ಪ್ರೌಡ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಕಛೇರಿಯ ಸಭಾಂಗಣದಲ್ಲಿ ಜು.19 ರಂದು ಶನಿವಾರ ಪೂ.ಗಂ.09.30 ರಿಂದ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಹಾಗೂ ಆಧಾರ್ ಇ ಕೆವೈಸಿ ಆಗದೇ ಉಳಿದಿರುವ ಫಲಾನುಭವಿಗಳ ಇ...
ಸವಣೂರು ಗ್ರಾಮದ ಅರೆಲ್ತಡಿ ಉಳ್ಳಾಕುಲು ದೇವಸ್ಥಾನಕ್ಕೆ ಗಂಗವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಭೇಟಿ ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರನ್ನು ಸ್ವಾಗತಿಸಿದರು.ನಂತರ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾಜಿ ಸಂಸದರರಾದ ನಳಿನ್ ಕುಮಾರ್ ಕಟೀಲು, ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಸಹಿತ ಪ್ರಮುಖರು, ಕಾರ್ಯಕರ್ತರು, ಗ್ರಾಮಸ್ಥರು...
Loading posts...
All posts loaded
No more posts
