ಆ. 25,26 ರಂದು ಸುಳ್ಯದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ಆ. 25,26 ರಂದು ಸುಳ್ಯದಲ್ಲಿ ಉಚಿತವಾಗಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ. ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.00ರ ತನಕ ನಡೆಯಲಿದ್ದು,ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಆಸಕ್ತರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತರಬೇಕಾಗಿ ಬಿಜೆಪಿ ಮಂಡಲ ಸಮಿತಿ ಪ್ರಕಟಣೆ ಯಲ್ಲಿ ತಿಳಿಸಿದೆ.

ದಶಕಗಳ ಬೇಡಿಕೆಗೆ ಈಡೇರಿಕೆಯ ನಿರೀಕ್ಷೆ – ನಾರ್ಕೊಡು ಅಜ್ಜಾವರ ಸಡಕ್ ರಸ್ತೆಯನ್ನಾಗಿ ಅಭಿವೃದ್ಧಿಗೆ ಅನುದಾನ ಬಿಡುಗಡೆ

ಆಲೆಟ್ಟಿ ಮತ್ತು ಅಜ್ಜಾವರ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಆಗಬೇಕೆಂಬ ದಶಕಗಳ ಬೇಡಿಕೆಗೆ ಕಾಲಕೂಡಿಬಂದಿದೆ. ನಾರ್ಕೊಡು ಅಜ್ಜಾವರ ರಸ್ತೆಯ 6.75 ಕಿ.ಮೀ. ಸುಮಾರು 6.54 ಕೋಟಿ ರೂಗಳಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ‌ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಯಾಗಲಿದೆ.ಆ. 25 ರಂದು ಈ ರಸ್ತೆಯ ಗುದ್ದಲಿ ಪೂಜೆ ಸಮಾರಂಭವು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾದ ನಳಿನ್ ಕುಮಾರ್...
Ad Widget

ಭೂಮಿಕಾ ಕುಕ್ಕುಜೆ ಕೈಬರಹ ಸ್ಪರ್ಧೆಯಲ್ಲಿ ಪ್ರಥಮ

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ, ಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಭೂಮಿಕಾ ಕುಕ್ಕುಜೆ ಸಮಾಜ ಕಲ್ಯಾಣ ಇಲಾಖೆ (KREIS) ವತಿಯಿಂದ ನಡೆದ ಜಿಲ್ಲಾ ಮಟ್ಟದ ಸ್ಪುಟವಾದ ಕೈ ಬರಹ ಸ್ಪರ್ಧೆಯಲ್ಲಿ ಹಿಂದಿ ವಿಭಾಗ ದಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಈಕೆ ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 93%ಅಂಕಗಳನ್ನುಪಡೆದಿದ್ದಾಳೆ . ಈಕೆ ನಾಲ್ಕೂರು ಗ್ರಾಮದ ಕುಕ್ಕುಜೆ...

ವಿಖಾಯ ಕಾರ್ಯಕರ್ತರು ಸಂಚಾರಿ ರಕ್ತನಿಧಿ ಇದ್ದಂತೆ – ತಾಜುದ್ದೀನ್ ಟರ್ಲಿ

ಎಸ್ ಕೆ ಎಸ್ ಎಸ್ ಎಲ್ ವಿಖಾಯ ಕಾರ್ಯಕರ್ತರು ಸಂಚಾರಿ ರಕ್ತನಿಧಿ ಇದ್ದಂತೆ, ಯಾವ ಕ್ಷಣದಲ್ಲೂ ನಿಮಗೆ ರಕ್ತದ ಬೇಡಿಕೆ ಬರಬಹುದು, ರಕ್ತದಾನವು ಶಿಬಿರಗಳಿಗೆ ಮಾತ್ರ ಸೀಮಿತಗೊಳಿಸದೆ ತುರ್ತು ಬೇಡಿಕೆ ಬರುವ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ರಕ್ತದಾನಕ್ಕೆ ತಯಾರಾಗಬೇಕೆಂದು ದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ಜಿಲ್ಲಾ ಉಸ್ತುವಾರಿ ತಾಜುದ್ದೀನ್...

ನವೀನ್ ಗೆ ತುರ್ತು ಚಿಕಿತ್ಸೆಗೆ ನೆರವಾಗುವಿರಾ

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ದಿ.ರಾಧಾಕೃಷ್ಣ ಹಾಗೂ ಶ್ರೀಮತಿ ಪುಷ್ಪಾವತಿ ದಂಪತಿಗಳ ದ್ವಿತೀಯ ಪುತ್ರನಾದ ನವೀನ್ ಕಾಣಿಯೂರು ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಇದೀಗ ಮೆದುಳಿನಲ್ಲಿ ರಕ್ತಸ್ರಾವ ಆಗುವ ಪರಿಣಾಮ ಆಪರೇಷನ್ ಮಾಡುವ ಅವಶ್ಯಕತೆ ಇದ್ದು ತೀರ ಸಂಕಷ್ಟದ ಸ್ಥಿತಿಯಲ್ಲಿದ್ದಾನೆ. ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 3 ರಿಂದ 4...

ಕ್ಯಾನ್ಸರ್ ಪೀಡಿತ ಸ್ನೇಹಿತೆಯ ಖುಷಿಗಾಗಿ ತಲೆಕೂದಲು ದಾನ ಮಾಡಿದ ಸುಳ್ಯದ ಹುಡುಗಿ ರೇಷ್ಮಾ- ಮಾನವೀಯ ಗುಣಕ್ಕೆ ಜಾಲತಾಣದಲ್ಲಿ ಮೆಚ್ಚುಗೆ

ನಾರಿ ಸುಂದರವಾಗಿ ಕಾಣಲು ಕೇಶರಾಶಿ ಕೂಡಾ ತುಂಬಾ ಮುಖ್ಯ. ಆದರೆ ಸೌಂದರ್ಯದ ಸಂಕೇತವಾದ ಕೂದಲನ್ನು ದಾನ ಮಾಡುವುದೆಂದರೆ, ಹೆಣ್ಮಕ್ಕಳಿಗೆ ಅದೊಂದು ಸಂಕಟವೇ ಸರಿ. ಅಂಥದ್ದರಲ್ಲಿ‌ ಇಲ್ಲೊಬ್ಬಾಕೆ ಹೆಣ್ಣುಮಗಳು ತನ್ನ ಸುಂದರ ಕೇಶವನ್ನು ಕ್ಯಾನ್ಸರ್ ಪೀಡಿತ ಸ್ನೇಹಿತೆಗೆ ದಾನವಿತ್ತಿದ್ದಾರೆ. ಸುಳ್ಯ ಮೂಲದ ಸದ್ಯ ಮಂಗಳೂರು‌ ನಿವಾಸಿಯಾಗಿರುವ ರೇಶ್ಮಾ ರಾಮದಾಸ್ ಈ ಮಹತ್ಕಾರ್ಯ ಮಾಡಿರುವವರು.ಈಗ ಮಂಗಳೂರಿನ ಶಕ್ತಿನಗರ ನಿವಾಸಿಯಾಗಿರುವ...

ಆ.22 ರಂದು ಗಾಂಧಿನಗರದಲ್ಲಿ ಶ್ರೀ ಟೆಕ್ನಾಲಜೀಸ್ ಶುಭಾರಂಭ

ಸುಳ್ಯ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಟೆಕ್ನಾಲಜೀಸ್ ಆ.22 ರಂದು ಶುಭಾರಂಭಗೊಳ್ಳಲಿದೆ. ಎಲ್ಲಾ ಕಂಪನಿಯ ಇನ್ವರ್ಟರ್, ಬ್ಯಾಟರಿ, ಸೋಲಾರ್ ಇನ್ವರ್ಟರ್ , ಸೋಲಾರ್ ವಾಟಾರ್ ಹೀಟರ್ ಹಾಗೂ ಸಿಸಿ ಕ್ಯಾಮರಾ ಮಾರಾಟ ಮತ್ತು ಸೇವೆ ನೀಡಲಾಗುವುದು. ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಕೂಡ ನೀಡಲಾಗುವುದು ಎಂದುಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ಕೊಲ್ಲಮೊಗ್ರದ ಯುವಕ ಕಟ್ಟಡದಿಂದ ಹಾರಿ ಆತ್ಮಹತ್ಯೆ

ಕೆವಿಜಿ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಕೊಲ್ಲಮೊಗ್ರದ ಸತ್ತಾರ್ (35) ಎಂಬ ಯುವಕ ಮಾನಸಿಕ ಅಸ್ವಸ್ಥರಾಗಿ ಚಿಕಿತ್ಸೆ ಎರಡು ದಿನಗಳ ಹಿಂದೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಇಂದು ಸಂಜೆ ವೇಳೆಗೆ ಅವರು ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದರೆಂದು ತಿಳಿದು ಬಂದಿದೆ. ಅವರನ್ನು ಜೊತೆಗಿದ್ದ ವ್ಯಕ್ತಿ...

ಸುಳ್ಯ ಬ್ಲಾಕ್‌ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮ ದಿನಾಚರಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮ ದಿನಾಚರಣೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಜಯಪ್ರಕಾಶ್ ರೈ ಎನ್ , ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸಭೆ ಯನ್ನುದ್ದೇಶಿಸಿ ಮಾತನಾಡಿದರು. ಕೆ...

ಆ.24 ರಂದು ಐವರ್ನಾಡಿನಲ್ಲಿ ಪೆಟ್ರೋಲ್ ಪಂಪ್ ಶುಭಾರಂಭ

ಐವರ್ನಾಡಿನಲ್ಲಿ ಶ್ರೀ ಪಂಚಲಿಂಗೇಶ್ವರ ಎಂಟರ್ ಪ್ರೈಸಸ್ ಆಶ್ರಯದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಆ. 24 ರಂದು ಶುಭಾರಂಭಗೊಳ್ಳಲಿದೆ. ಉದ್ಘಾಟನೆಯನ್ನು ಶಾಸಕ ಎಸ್ ಅಂಗಾರ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಎಸ್ ಎನ್ ಮನ್ಮಥ, ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ಜೇನು ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ಐವರ್ನಾಡಿನ ವೈದ್ಯರಾದ ಡಾ.ಬಾಲಸುಬ್ರಹ್ಮಣ್ಯ ಭಟ್, ಯುವಶಕ್ತಿ...
Loading posts...

All posts loaded

No more posts

error: Content is protected !!