- Friday
- August 7th, 2026
ಎಣ್ಮೂರಿನ ಬ್ರದರ್ಸ್ ಕಾಂಪ್ಲೆಕ್ಸ್ ನಲ್ಲಿ ಕಿರಣ್ ಕುಮಾರ್ ಭೀಮಗುಳಿ ಮಾಲಕತ್ವದ ಜನ್ಯ ಎಂಟರ್ ಪ್ರೈಸಸ್ ಶುಭಾರಂಭಗೊಂಡಿದೆ. ಇಲ್ಲಿ ಎಲ್ಲಾ ವಿಧದ ಕೃಷಿ ಉಪಕರಣಗಳ ಮಾರಾಟ ಮತ್ತು ಸರ್ವೀಸ್ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ 29ನೇ ವರ್ಷದ ಶ್ರೀಗಣೇಶೋತ್ಸವವನ್ನು ಆಚರಿಸಲಾಯಿತು. ಸರಳ ಹಾಗೂ ಸಾಂಕೇತಿಕ ಆಚರಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಆಚರಣೆ ನಡೆಯುತ್ತಿದ್ದು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸೀಮಿತ ಶ್ರದ್ಧಾಳುಗಳು ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಸುಬ್ರಹ್ಮಣ್ಯ ವತಿಯಿಂದ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ವಿಘ್ನವಿನಾಯಕನ ಭವ್ಯ ವಿಗ್ರಹ ಪ್ರತಿಷ್ಟಾಪನೆ ನಡೆಯಿತು.
ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರ ಇದರ ಆಶ್ರಯದಲ್ಲಿ ಗಣೇಶೋತ್ಸವ ಆಚರಣೆ ಇಂದು ನಡೆಯಿತು. ಬೆಳಿಗ್ಗೆ ಗಣಪತಿ ಪ್ರತಿಷ್ಟೆ ನಡೆದಿದ್ದು ಮಧ್ಯಾಹ್ನ ಮಹಾಪೂಜೆಯ ನಂತರ ವಿಸರ್ಜನೆ ನಡೆಯಿತು.ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಹಾಜರಿದ್ದರು.
ಸುಳ್ಯ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಕಲ್ಯಾಣಕ್ಕಾಗಿ ಸುಳ್ಯ ದ ಜೀವ ನದಿ ಪಯಸ್ವಿನಿ ನದಿಗೆ ಬಾಗಿನ ಅರ್ಪಣೆ ಮಾಡಲಾಯಿತು. ನಾಗಪಟ್ಟಣ ಸೇತುವೆ ಬಳಿ ನಡೆದ ಸರಳ ಕಾರ್ಯಕ್ರಮ ದಲ್ಲಿ ನಾಗಪಟ್ಟಣ ಸದಾಶಿವ ದೇವಸ್ಥಾನ ದ ಅರ್ಚಕರು ಪಯಸ್ವಿನಿ ಗೆ ಪೂಜೆ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಗೋಕುಲ್ ದಾಸ್, ಧರ್ಮ ಪಾಲ...
ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದ ಮಳೆಕೊಯ್ಲು ಘಟಕವನ್ನು ಆ.21 ರಂದು ಉದ್ಘಾಟಿಸಲಾಯಿತು. ಕ್ಲಬ್ಬಿನ ಅಧ್ಯಕ್ಷರಾದ ಲ. ವಾಸುದೇವರವರ ಮನೆಯಲ್ಲಿ ನಿರ್ಮಿಸಿದ ಮಳೆ ಕೊಯ್ಲು ಘಟಕವನ್ನು ಲಯನ್ಸ್ ಕ್ಲಬ್ಬಿನ ಪ್ರಾಂತೀಯ ಅಧ್ಯಕ್ಷರಾದ ಲ.ಸಂದ್ಯಾ ಸಚಿತ್ ರೈ ರವರು ಉದ್ಘಾಟಿಸಿದರು. ಲ. ಪ್ರಶಾಂತ್ ಬಾಲನ್ ರವರು ಮಳೆ ಕೊಯ್ಲಿನ ಪ್ರಾಮುಖ್ಯತೆ ಮತ್ತು ಪ್ರಾತ್ಯಕ್ಷಿತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ಬಿನ...
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ವತಿಯಿಂದ ದಅವಾ ಕಾನ್ಫರೆನ್ಸ್, ಮುತಅಲ್ಲಿಂ ಸಂಗಮ ಆಗಸ್ಟ್ 21ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ದುಆ ನೆರೆವೇರಿಸಿದರು. ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ದಅವಾ ಕನ್ವೀನರ್ ಸಿದ್ದೀಖ್ ಹಿಮಮಿ ಸಖಾಫಿ...
ಆ.27,28 ರಂದು ಕಡಬದಲ್ಲಿ ಉಚಿತವಾಗಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ. ಕಡಬದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.00ರ ತನಕ ನಡೆಯಲಿದ್ದು, ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಆಸಕ್ತರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತರಬೇಕಾಗಿ ಬಿಜೆಪಿ ಮಂಡಲ ಸಮಿತಿ...
ಪುತ್ತೂರು : ಅಕಾಲಿಕವಾಗಿ ಇತ್ತೀಚಿಗೆ ಮೃತಪಟ್ಟ ಪುತ್ತೂರಿನ ಹಿರಿಯ ಪತ್ರಕರ್ತ ನಾರಾಯಣ ನಾಯ್ಕ ಅಮ್ಮುಂಜೆ ಕುಟುಂಬಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘ (ರಿ) ವತಿಯಿಂದ ಅರ್ಥಿಕ ಸಹಕಾರವನ್ನು ನೀಡಲಾಯಿತ್ತು. ಇಂದು ಅವರ ಮನೆಗೆ ತೆರಳಿದ ಸಂಘದ ಪದಾಧಿಕಾರಿಗಳು ಅರ್ಥಿಕ ನೆರವಿನ ಚೆಕ್ ಅನ್ನು ಕುಟುಂಬ ಸದಸ್ಯರಿಗೆ ವಿತರಿಸಿದರು.ನಾರಾಯಣ ನಾಯ್ಕ ಅಮ್ಮುಂಜೆಯವರು ಪುತ್ತೂರು ಪತ್ರಕರ್ತರ ಸಂಘದ ಹಾಲಿ...
Loading posts...
All posts loaded
No more posts
