- Saturday
- August 8th, 2026
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಬಳ್ಪ ಘಟಕದ ರಚನೆಯು ಇಂದು ಬಳ್ಪ ವಿಕ್ರಮ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಕುಶಾಲಪ್ಪ ಗೌಡ, ಅಧ್ಯಕ್ಷರಾಗಿ ಪ್ರಖ್ಯಾತ್ ರೈ, ಉಪಾಧ್ಯಕ್ಷರಾಗಿ ಹರ್ಷಿತ್ ಪಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಪರಪ್ಪಣೆ, ಕಾರ್ಯದರ್ಶಿಗಳಾಗಿ ಗುಣಶೇಖರ ಬಳ್ಪ, ಮಹೇಶ್ ಗೆಜ್ಜೆ, ಗೋಪಾಲ ಕಲ್ಲೇರಿ, ದಯಾನಂದ ,...
ಕೊಲ್ಲಮೊಗ್ರದಿಂದ ಕಟ್ಟ ಗೋವಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಕಟ್ಟ ಮೈಲ ಎಂಬಲ್ಲಿನ ಕಿರು ಸೇತುವೆ ಪ್ರತಿಶತ 80%ರಷ್ಟು ಕುಸಿತ ಕಂಡಿದ್ದು, ಪ್ರಾಣಬಲಿಗೆ ಹಾತೊರೆಯುತ್ತಿದೆ. ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.ಕಟ್ಟ- ಗೋವಿಂದನಗರ ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಟ್ಟ ಮೈಲ ಎಂಬಲ್ಲಿ ಕಿರುಸೇತುವೆಯನ್ನು ಕಟ್ಟಲಾಗಿದೆ....
ಕಂದಡ್ಕದ ಸಮೀಪ ಚೆನ್ನಡ್ಕದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ಇಂದು ಸಂಜೆ ದಾಳಿ ನಡೆಸಿದ್ದು 4 ಬೈಕ್ ಹಾಗೂ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
Udhaya Kukkudelu Anil balladka ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಅಧ್ಯಕ್ಷರಾಗಿ ಶಾಫಿ ಕುತ್ತಮೊಟ್ಟೆ ಆಯ್ಕೆಯಾಗಿದ್ದಾರೆ. ಸೆ. 6 ರಂದು ಮಂಗಳೂರಿನಲ್ಲಿ ನಡೆದ ಇಂಟೆಕ್ ಪದಾಧಿಕಾರಿಗಳ ಜಿಲ್ಲಾ ಅಧ್ಯಕ್ಷ ಮನೋಹರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.ಇಂಟೆಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉದಯಕುಮಾರ್ ಕುಕ್ಕುಡೇಲು, ಇಂಟೆಕ್ ಜಿಲ್ಲಾ ಯೂತ್ ಘಟಕದ ಉಪಾಧ್ಯಕ್ಷರಾಗಿ ಶಾಹುಲ್...
ಕೊಲ್ಲಮೊಗ್ರ ಸ.ಹಿ. ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಾಲ್ ಏನೆಕಲ್ಲು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಗುತ್ತಿಗಾರು ಜೂನಿಯರ್ ಕಾಲೇಜಿಗೆ ಭಡ್ತಿಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತಿದ್ದಾರೆ.ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟುವಾಗಿರುವ ಇವರು 1998 ರಲ್ಲಿ ಅಡ್ಪಂಗಾಯ ಹಿ.ಪ್ರಾ.ಶಾಲೆಗೆ ದೈ.ಶಿ.ಶಿಕ್ಷಕರಾಗಿ ಸೇರಿ ವೃತ್ತಿ ಆರಂಭಿಸಿದರು. ಅಲ್ಲಿ 7...
ಏನೆಕಲ್ಲು ಗ್ರಾಮದ ಶ್ರೀಮತಿ ದಮಯಂತಿ ರಾಮಣ್ಣಗೌಡ ಕುಕ್ಕಪ್ಪನ ಮನೆ ಇವರು ಏನೆಕಲ್ಲಿನ ಶ್ರೀ ಆದಿಶಕ್ತಿ ಭಜನಾ ಮಂದಿರಕ್ಕೆ ಸುಮಾರು ಹನ್ನೆರಡು ಸಾವಿರ ರೂಪಾಯಿ ಮೌಲ್ಯದ ಡಯಾಸ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ ಏನೆಕಲ್ಲು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದಲ್ಲಿ ನೂತನವಾಗಿ ಶ್ರೀದುರ್ಗಾ ಪ್ರಗತಿ ಬಂದು ಸಂಘ ರಚನೆಯಾಯಿತು. ಸಂಘದ ಉದ್ಘಾಟನೆಯನ್ನು ಕೊಡಿಯಾಲ ಒಕ್ಕೂಟದ ಅಧ್ಯಕ್ಷರಾದ ಆನಂದ ಕೆ ನೆರವೇರಿಸಿದರು. ವಲಯ ಮೇಲ್ವಿಚಾರಕರಾದ ಮುರಳೀಧರರವರು ದಾಖಲಾತಿ ಹಸ್ತಾಂತರಿಸಿ ನಿಯಮಾವಳಿಗಳ ಬಗ್ಗೆ ತಿಳಿಸಿದರು .ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ವನಿತಾ ಉಪಸ್ಥಿತರಿದ್ದರು.
ಕೊಡಗು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.6 ರಂದು ಶ್ರೀ ಒಡಿಯೂರಿನ ಗ್ರಾಮ ವಿಕಾಸ ಸಂಘದಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು, ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ರಾಜಾರಾಮ್ ಕಳಗಿ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಶ್ರೀ ಒಡಿಯೂರು ಗ್ರಾಮ ವಿಕಾಸ ಸಂಘದ ಘಟ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಗಾಂಭೀರ್,...
ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಎಂಬಲ್ಲಿ ವಾಸವಾಗಿರುವ ಕು. ಗೀತಾ ಹೆಚ್.ಸಿ ಎಂಬ ವಿದ್ಯಾರ್ಥಿನಿ ಕಲಿಯುವಿಕೆಯಲ್ಲಿ ಮುಂದಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ. ಕೊಡಗು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಈಕೆ ದ್ವಿತೀಯ ಪಿಯುಸಿ (ಕಲಾ ವಿಭಾಗ) ಪರೀಕ್ಷೆಯಲ್ಲಿ 600 ರಲ್ಲಿ 558 (93%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಪಡೆದಿರುತ್ತಾಳೆ. ಅವಳ ಸ್ವಗೃಹ ಸಂಪಾಜೆಯಲ್ಲಿ ಸೆ.6...
Loading posts...
All posts loaded
No more posts
