- Saturday
- August 8th, 2026
ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಸುಳ್ಯ ಹಾಗೂ ಪೈಲಾರು ಒಕ್ಕೂದ ಆಶ್ರಯದಲ್ಲಿ ಸೆ.6 ಆದಿತ್ಯವಾರ ದಂದು ಮಿತ್ರ ವೃಂದ ಪೈಲಾರ್ ಕಟ್ಟಡದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ನಡೆಯಿತು. ಶ್ರೀ ದೇವಿ ತಂಡದ ಅಧ್ಯಕ್ಷರಾದ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಮಿತ್ರ ವೃಂದ ಪೈಲಾರು ಇದರ ಅಧ್ಯಕ್ಷ ಹರ್ಷಿತ್ ದಾತಡ್ಕ ಉದ್ಘಾಟಿಸಿದರು. ಗ್ರಾ.ಪಂ.ಮಾಜಿ ಸದಸ್ಯ ತಿಮ್ಮಪ್ಪ ಕೊಂಡೆಬಾಯಿ ಹಾಗೂ...
ಸುಳ್ಯದ ಜಟ್ಟಿಪಳ್ಳ ತಿರುವಿನಲ್ಲಿ ಸ್ಕೂಟಿಗೆ ಓಮಿನಿ ಕಾರೊಂದು ಡಿಕ್ಕಿಯಾಗಿ ಸವಾರನಿಗೆ ಗಾಯಗಳಾದ ಘಟನೆ ಇಂದು ನಡೆದಿದೆ. ಅಲ್ಪಸ್ವಲ್ಪ ಗಾಯಗೊಂಡ ಸವಾರನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನೂತನ ಅಧ್ಯಕ್ಷರಾಗಿ ಅನಿಲ್ ಪೂಜಾರಿಮನೆ ಆಯ್ಕೆಯಾಗಿರುತ್ತಾರೆ.ಇವರು ಅಮರ ಮುಡ್ನೂರು ಗ್ರಾಮದ ಚೊಕ್ಕಾಡಿ ಪೂಜಾರಿಮನೆ ಮನೆತನದ ಮಾಧವ ಗೌಡ ಮತ್ತು ಶ್ರೀಮತಿ ಪ್ರೇಮ ದಂಪತಿಗಳ ಪುತ್ರ. ಇವರ ಪತ್ನಿ ಸನ್ನಿಧಿ ಗೃಹಿಣಿಯಾಗಿದ್ದಾರೆ. ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪದವಿ,ನಂತರ ಸಿವಿಲ್ ಡಿಪ್ಲೋಮಾ ವ್ಯಾಸಂಗ ಮಾಡಿರುತ್ತಾರೆ.ಚೊಕ್ಕಾಡಿ ಯುವಕ ಮಂಡಲದ ಎರಡನೇ ಅಧ್ಯಕ್ಷರಾಗಿ,2008 ರಲ್ಲಿ ಯುವಜನ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(07.09.2020 ಸೋಮವಾರ ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 400ಡಬಲ್ ಚೋಲ್ 300 - 400 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 -...
ಬೆಳ್ಳಾರೆಯ ಪ್ರಧಾನ ರಸ್ತೆಯಲ್ಲಿರುವ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ವಿನೋದ್ ಕೆ ಮುಂಡುಗಾರು ಮಾಲಕತ್ವದ ಸನ್ನಿಧಿ ಅಗ್ರಿಟೆಕ್ ಸೆ.02 ರಂದು ಶುಭಾರಂಭಗೊಂಡಿತು. ಇಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸರ್ವೀಸ್ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ಅಯ್ಯನಕಟ್ಟೆಯ ಪ್ರಧಾನ ರಸ್ತೆಯಲ್ಲಿರುವ ಕೆ.ಎಸ್. ಕಾಂಪ್ಲೆಕ್ಸ್ ನಲ್ಲಿ ಎಚ್.ಎಂ.ಸಿದ್ದೀಕ್ ಹಾಗೂ ರಝಾಕ್ ಮಾಲಕತ್ವದ ಕೆ.ಎಸ್.ಸುಪಾರಿ ಟ್ರೇಡರ್ಸ್ ಇಂದು (ಸೆ.07) ಶುಭಾರಂಭಗೊಂಡಿತು. ಇಲ್ಲಿ ಅಡಿಕೆ, ಕಾಳುಮೆಣಸು ಹಾಗೂ ಕಾಡುತ್ಪನ್ನಗಳನ್ನು ಖರೀದಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ನೇತೃತ್ವದಲ್ಲಿ ತುಳುನಾಡ ಒಕ್ಕೂಟ ಸುಳ್ಯ ದ.ಕ ಇದರ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮ ಸುಳ್ಯ ಗ್ರ್ಯಾಂಡ್ ಪರಿವಾರ್ ಪರಿವಾರಕಾನ ಇದರ ಸಭಾಂಗಣದಲ್ಲಿ ಸೆ. 6 ರಂದು ನಡೆಯಿತು.ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್ ಬಿ ಪ್ರಸ್ತಾವಿಕ ಮಾತನಾಡಿ ತುಳುನಾಡ ಒಕ್ಕೂಟ , ದಕ್ಷಿಣ ಕನ್ನಡ ಹಾಗೂ...
ಕರ್ನಾಟಕ ರಾಜ್ಯ ಎನ್.ಎಸ್.ಯು.ಐ.ವತಿಯಿಂದ ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ನಡೆಯುತ್ತಿರುವ "ನಮ್ಮೂರ ಹೆಮ್ಮೆ "ಕಾರ್ಯಕ್ರಮಕ್ಕೆ ಸೆ.8 ರಂದು ಅಪರಾಹ್ನ 2 ಗಂಟೆಗೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗಮಿಸಿ ಚಾಲನೆ ನೀಡಲಿದ್ದಾರೆ. ವಿವಿಧ ಘಟಕಗಳ...
ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸೀ ಘಟಕದ ಸದಸ್ಯರಿಗೆ ಕೊಡಮಾಡುವ 'ಸಾಧನಾಶ್ರೀ' ಪ್ರಶಸ್ತಿಗೆ ಬೆಳ್ಳಾರೆ ಜೇಸಿಐ ಘಟಕದಿಂದ ಜೇಸೀ ಎಚ್.ಜಿ.ಎಫ್ ಜಗದೀಶ್ ಪಿ ಎಲ್ ಆಯ್ಕೆಯಾಗಿದ್ದು, ಇಂದು (ಸೆ.06) ಅವರು ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಅದ್ವಿತೀಯ ವ್ಯವಹಾರ ಸಮ್ಮೇಳನ 2020 ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಇವರು ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷರಾಗಿದ್ದಾರೆ. ಯುವ...
ಮಂಗಳೂರು ನಗರ ಉತ್ತರವಲಯದ ಗಾಂಧಿನಗರ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಯಾಗಿ ಸೇವೆ ಸಲ್ಲಿಸುತ್ತಿರುವ ಇಂದ್ರಾವತಿ ಎನ್ ಇವರು 2020 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 1996 ರಲ್ಲಿ ಸೇವೆಗೆ ಸೇರಿದ ಇವರು 24 ವರ್ಷಗಳ ಸುದೀರ್ಘ ಅವಧಿಯಲ್ಲಿ 22 ವರ್ಷ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಉತ್ತಮ ಜನಾನುರಾಗಿಯಾಗಿದ್ದಾರೆ. ಇಲಾಖೆ...
Loading posts...
All posts loaded
No more posts
