- Tuesday
- August 11th, 2026
ಅಜ್ಜಾವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಉಚಿತವಾಗಿ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಜ.17 ರಂದು ಗ್ರಾಮದ ಆರು ಕಡೆಗಳಲ್ಲಿ ನಡೆಯಲಿದೆ. ದೊಡ್ಡೇರಿ ಭಜನಾ ಮಂದಿರದ ಬಳಿ, ಮುಳ್ಯ ಭಜನಾ ಮಂದಿರದ ಬಳಿ, ಮೇನಾಲ ಹಾಲು ಸೊಸೈಟಿ ಬಳಿ, ಕಾಂತಮಂಗಲ ಬಸ್ ಸ್ಟಾಂಡ್ ಬಳಿ, ಅಜ್ಜಾವರ ಹಾಲು ಸೊಸೈಟಿ ಬಳಿ, ಅಡ್ಪಂಗಾಯ ಶಾಲಾ ಬಳಿ ನಡೆಯಲಿದೆ ಎಂದು...
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆಯುವ ಆಧುನಿಕ ಸುಳ್ಯದ ನಿರ್ಮಾತೃ ಡಾ| ಕುರುಂಜಿ ವೆಂಕಟ್ರಮಣ ಗೌಡರ ೯೨ನೇ ಜಯಂತ್ಯೋತ್ಸವ ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ ಜ.23 ರಂದು ನಡೆಯಲಿದೆ ಎಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷ ಕೆ.ವಿ.ಜಿ. ಸುಳ್ಯ...
ಮುಂದೂಡಲ್ಪಟ್ಟಿದ್ದ ಪೋಲೀಯೋ ಲಸಿಕಾ ಕಾರ್ಯಕ್ರಮ ಜ.31 ಕ್ಕೆ ನಡೆಯಲಿದೆ. 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕುವಂತೆ ತಾಲೂಕು ವೈಧ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಘಟನೆಗಳು ದೇಣಿಗೆ ಸಂಗ್ರಹಿಸುವ ಕ್ರಮ ಸರಿಯಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಸುಳ್ಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ. ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನ್ಯಾಯಾಲಯದ ತೀರ್ಪಿನ ಪ್ರಕಾರ ಹಾಗೂ ಎಲ್ಲಾ ಅಡ್ಡಿಗಳು ನಿವಾರಣೆಯಾಗಿ ರಾಮ ಮಂದಿರ ನಿರ್ಮಾಣವಾದರೆ ಸಂತೋಷವೇ. ಅದಕ್ಕೆ ಯಾರೂ...
ಗ್ರಾಮ ಪಂಚಾಯತ್ ಚುನಾವಣೆ 2020 ರ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಜ.23 ರಂದು ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದ್ದಾರೆ. ಈ ಮೀಸಲಾತಿ ಪ್ರಕ್ರಿಯೆಯನ್ನು ಆಯಾಯ ತಾಲೂಕು ಹಾಗೂ ಸುಳ್ಯ ತಾಲೂಕಿನ ಮೀಸಲಾತಿ ಪ್ರಕ್ರಿಯೆಯನ್ನು ಸುಳ್ಯದಲ್ಲಿ ನಡೆಸುವಂತೆ ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಯವರ...
ಐನೆಕಿದು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ನೂತನ ಸಚಿವರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಶಾಸಕ ಎಸ್ ಅಂಗಾರ ಅವರನ್ನು ಸುಬ್ರಹ್ಮಣ್ಯದಲ್ಲಿ ಭೇಟಿಯಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಐನೆಕಿದು ಗ್ರಾಮ ಸಮಿತಿ ಅಧ್ಯಕ್ಷ ಕಿರಣ್ ಪೈಲಾಜೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ , ಐನೆಕಿದು- ಸುಬ್ರಹ್ಮಣ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಅಜಿತ್...
ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಪ್ರಯುಕ್ತ ಐನೆಕಿದು ವ್ಯಾಪ್ತಿಯಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ನಿನ್ನೆ ಕೋಟೆ ಅಶ್ವಥ್ ಕಟ್ಟೆಯಲ್ಲಿ ಪ್ರಾರ್ಥನೆ ಮಾಡಿ ಪ್ರಾರಂಭಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಶಾರೀರಿಕ್ ಪ್ರಮುಖ್ ಭುಕ್ಷೀತ್ ನೀರ್ಪಾಡಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ ಹಿರಿಯ ಸ್ವಯಂ ಸೇವಕರಾದ ಕಿಶೋರ್ ಕುಮಾರ್ ಕೂಜುಗೋಡು, ಸುಬ್ರಹ್ಮಣ್ಯ ಸಿ.ಎ ಬ್ಯಾಂಕ್...
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಂಗ್ರಹದ ಅಭಿಯಾನಕ್ಕೆ ಜ.16 ರಂದು ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಪ್ರಾರ್ಥನೆ ನೆರವೇರಿಸಿ ಚಾಲನೆ ನೀಡಲಾಯಿತು.ಬಳಿಕ ಈ ಭಾಗದ ಹಿಂದೂ ಬಾಂಧವರ ಮನೆ ಮನೆಗೆ ತೆರಳಿ ಕೂಪನ್ ನೀಡಿ ನಿಧಿ ಸಂಗ್ರಹಕ್ಕೆ ತೆರಳಲಾಯಿತು . ಈ ಸಂದರ್ಭದಲ್ಲಿ ಶ್ರೀ ಶಾರದಾಂಬಾ ಭಜನ ಮಂದಿರದ ಅದ್ಯಕ್ಷ ಸೀತಾರಾಮ...
Loading posts...
All posts loaded
No more posts
