Ad Widget

ಪಯಸ್ವಿನಿ ಸಹಕಾರಿ ಸಂಘ & ಊರುಬೈಲು ಭಗವಾನ್ ಸಂಘದ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಅಭಿಯಾನ

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಂಪಾಜೆ ಕೊಡಗು ಮತ್ತು ಶ್ರೀ ಭಗವಾನ್ ಸಂಘ (ರಿ) ಊರುಬೈಲು ಇವರ ಜಂಟಿ ಆಶ್ರಯದಲ್ಲಿ ತಾ.1ರಿಂದ 5 ರವರೆಗೆ ಸಂಪಾಜೆ ಮತ್ತು ಚೆಂಬು ಸಹಕಾರಿ ಭವನಗಳಲ್ಲಿ ನಡೆದ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಅಭಿಯಾನದ ಸಮಾರೋಪ ಸಮಾರಂಭ ತಾ.5 ಶನಿವಾರದಂದು ಬಾಲಂಬಿಯಲ್ಲಿ ನಡೆಯಿತು.

. . . . . . . . .

ಪಯಸ್ವಿನಿ ಸಹಕಾರ ಸಂಘದ ಅದ್ಯಕ್ಷರಾದ ಯನ್.ಸಿ.ಅನಂತ್ ಅದ್ಯಕ್ಷತೆ ವಹಿಸಿದ್ದರು. ಭಗವಾನ್ ಸಂಘದ ಅದ್ಯಕ್ಷ ರವಿರಾಜ್ ಹೊಸೂರು ಸ್ವಾಗತಿಸಿದರು .ಈ ಸಂದರ್ಭದಲ್ಲಿ ನೋಂದಣಿ ಜವಾಬ್ದಾರಿ ನಿರ್ವಹಿಸಿದ ಕಲ್ಲುಗುಂಡಿ ಸ್ಪಾಟ್ ಕಂಪ್ಯೂಟರ್ ನ ಕಿಶೋರ್ ಕುಮಾರ್ ರವರನ್ನು ಗೌರವಿಸಲಾಯಿತು.ಸಂಘದ ನಿರ್ದೇಶಕ ದಿನೇಶ್ ಸಣ್ಣಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶಶಿಧರ್. ಎ.ಪಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸರ್ವರನ್ನೂ ಅಭಿನಂದಿಸಿದರು.

. . . . . . .

ಸಭೆಯಲ್ಲಿ ಎರಡೂ ಸಂಘಗಳ ನಿರ್ದೇಶಕರು, ಸದಸ್ಯರು, ಫಲಾನುಭವಿಗಳು ,ಕಂಪ್ಯೂಟರ್ ಸಿಬ್ಬಂದಿಗಳು ,ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading