ಸುಳ್ಯದ ಇನ್ಫಿಟೆಕ್‌ನಲ್ಲಿ ದೀಪಾವಳಿ ವಿಶೇಷ ಆಫರ್ | ಕಂಪ್ಯೂಟರ್ ವಿವಿಧ ತರಬೇತಿಗಳಿಗೆ ವಿಶೇಷ ಆಫರ್

ಕಂಪ್ಯೂಟರ್ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸುಳ್ಯದ ಇನ್ನಿ ಟೆಕ್ ಸಂಸ್ಥೆಯು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್‌ ಘೋಷಿಸಿದೆ. ವಿವಿಧ ಕಂಪ್ಯೂಟರ್ ತರಬೇತಿ ಕೋರ್ಸ್‌ಗಳಿಗೆ ದಾಖಲಾತಿ ಆರಂಭಗೊಂಡಿದ್ದು, ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

. . . . . . . . .

ಕಂಪ್ಯೂಟರ್ ಬೇಸಿಕ್, ಸಿಟಿಟಿಪಿ (CTTP), ವೆಬ್ ಡಿಸೈನಿಂಗ್, ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ತರಗತಿಗಳು ಆರಂಭಗೊಳ್ಳಲಿವೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಕೌಶಲ ಬೆಳೆಸಿಕೊಂಡು ಉದ್ಯೋಗಾವಕಾಶಗಳನ್ನು ಪಡೆಯಲು ಬಯಸುವವರಿಗೆ ಈ ತರಬೇತಿ ನೆರವಾಗಲಿದೆ.

. . . . . . .

ಸಂಸ್ಥೆಯಲ್ಲಿ ನುರಿತ ತಂತ್ರಜ್ಞರಿಂದ ತರಬೇತಿ, ಪ್ರಮಾಣಪತ್ರ ಆಧಾರಿತ ಕೋರ್ಸ್‌ಗಳು ಹಾಗೂ ಪ್ರಾಯೋಗಿಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ತರಬೇತಿ ಪೂರ್ಣಗೊಳಿಸಿದವರಿಗೆ ಉದ್ಯೋಗ ಪಡೆಯಲು ಶೇ.100ರಷ್ಟು ಉದ್ಯೋಗ ನೆರವು ಒದಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಮತ್ತು ತಾಂತ್ರಿಕ ಕೌಶಲಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ತಮ್ಮ ಆಸಕ್ತಿ ಮತ್ತು ಭವಿಷ್ಯದ ಗುರಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಂಡು ತರಬೇತಿ ಪಡೆಯಬಹುದು. ನವರಾತ್ರಿ ವಿಶೇಷ ಆಫರ್‌ನ ಪ್ರಯೋಜನ ಪಡೆಯಲು ಆಸಕ್ತರು ಸುಳ್ಯದ ಇನ್ನಿ ಟೆಕ್ ಸಂಸ್ಥೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ದಾಖಲಾತಿ ಮಾಡಿಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading