ವಿಮಾನಯಾನ ಕ್ಷೇತ್ರದಲ್ಲಿ ಅಕ್ಷಯ ಕಾಲೇಜು ವಿದ್ಯಾರ್ಥಿಗಳ ಮಿಂಚು: ಪ್ರತಿಷ್ಠಿತ ಏರ್‌ಪೋರ್ಟ್‌, ತಾರಾ ಹೋಟೆಲ್‌ಗಳಲ್ಲಿ ೨೦ ಮಂದಿಗೆ ಉದ್ಯೋಗ

​ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಏವಿಯೇಶನ್ ವಿಭಾಗದ ೨೦ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ವಿಮಾನ ನಿಲ್ದಾಣಗಳು ಹಾಗೂ ಸ್ಟಾರ್ ಹೋಟೆಲ್‌ಗಳಲ್ಲಿ ಆಕರ್ಷಕ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

. . . . . . . . .

​ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಗ್ರೌಂಡ್ ಆಪರೇಶನ್, ಗೆಸ್ಟ್ ಸರ್ವೀಸ್, ಸೇಲ್ಸ್ ಆ್ಯಂಡ್ ಬಿಸಿನೆಸ್ ವಿಭಾಗಗಳಲ್ಲಿ ಹಾಗೂ ಗೋವಾ, ಬೆಂಗಳೂರು, ಮಂಗಳೂರಿನ ಖ್ಯಾತ ತಾರಾ ಹೋಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

. . . . . . .

​ನೇಮಕಗೊಂಡ ವಿದ್ಯಾರ್ಥಿಗಳ ವಿವರ:

  • ​ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್: ಮೇಘ, ವರ್ಷಾ, ನಂದಿತಾ (ಗ್ರೌಂಡ್ ಆಪರೇಶನ್), ಪ್ರಜ್ಞಾ (ರಾಯಲ್ ವಾಲ್ಟ್ರನ್ಸ್), ಮಹಮ್ಮದ್ ಜಾವದ್ (ಸೇಲ್ಸ್ ಆ್ಯಂಡ್ ಬಿಸಿನೆಸ್ ಆಪರೇಶನ್), ಸುಲ್ತಾನ್ ಡಿ., ಮೊಹಮ್ಮದ್ ಫರ್ಹಾತ್, ಹರ್ಷಿತ್, ವಿಶ್ವಾಸ್ ಎನ್. ಹಾಗೂ ಶೇಖ್ ಹಂದಾನ್ (ಸೇಲ್ಸ್ ಆ್ಯಂಡ್ ಬಿಸಿನೆಸ್ ಅಸೋಸಿಯೇಟ್).
  • ​ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್: ಜೀವಿತಾ (ಗ್ರೌಂಡ್ ಆಪರೇಶನ್), ಶ್ರೀರಕ್ಷಾ ಜಿ.ಪಿ. (ಗೆಸ್ಟ್ ಸರ್ವಿಸ್ ಅಸೋಸಿಯೇಟ್), ಅಕ್ಷಿತಾ ಎಚ್.ವಿ., ವಾಣಿಶ್ರೀ, ಗೀತಾ, ಮೋಹನ್ ಹಾಗೂ ಬಿ.ಡಿ. ರಕ್ಷಿತ್ (ಸೇಲ್ಸ್ ಅಸೋಸಿಯೇಟ್).
  • ​ಹಾಸ್ಪಿಟಾಲಿಟಿ ಕ್ಷೇತ್ರ: ಕಾರ್ತೀಕ್ (ಪ್ರಂಟ್ ಆಫೀಸ್, ಗೋವಾ ಗೋಲ್ಡ್ ಫಿಂಚ್ ಸ್ಟಾರ್ ಹೋಟೆಲ್), ರಕ್ಷಿತಾ (ಪ್ರಂಟ್ ಆಫೀಸ್, ಮಂಗಳೂರು ಸೀ ವ್ಯೂ ಸ್ಟಾರ್ ಹೋಟೆಲ್) ಹಾಗೂ ಮೋಕ್ಷಿತಾ (ಹಾಸ್ಪಿಟಾಲಿಟಿ ವಿಭಾಗ, ಬೆಂಗಳೂರು ಜೆ.ಡಬ್ಲ್ಯೂ ಸ್ಟಾರ್ ಪ್ರಾಪರ್ಟೀಸ್).
  • ​ಉದ್ಯೋಗಾಧಾರಿತ, ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ​”ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಹಾಗೂ ಉದ್ಯೋಗಾಧಾರಿತ ಶಿಕ್ಷಣ ನೀಡುವ ಗುರಿ ಹೊಂದಿದೆ. ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಅಗತ್ಯವಿರುವ ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ, ಆಂಗ್ಲ ಭಾಷಾ ಪ್ರಾವೀಣ್ಯ, ಗ್ರಾಹಕ ಸೇವೆ ಹಾಗೂ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಹಾಗೂ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಪಡೆಯಲು ಅಗತ್ಯ ವೇದಿಕೆ ಕಲ್ಪಿಸಲಾಗುತ್ತಿದೆ.”​— ಜಯಂತ್ ನಡುಬೈಲು, ಚೇರ್ಮನ್, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading