ಸುಬ್ರಹ್ಮಣ್ಯ : ನ.05ರಂದು ಕೆ.ಎಸ್.ಎಸ್ ಕಾಲೇಜಿನಲ್ಲಿ “ಮುಖವಾಡ” ನಾಟಕ ಪ್ರದರ್ಶನ

ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನ ಕುಸುಮ ಸಾರಂಗ ರಂಗ ಘಟಕದ ವತಿಯಿಂದ ನ.05 ಗುರುವಾರದಂದು ‘ನಾಟಕ ಶಿಬಿರ 2026-27’ ನಡೆಯಲಿದ್ದು, ಸಂಜೆ 5:30ಕ್ಕೆ ಕೆ.ಎಸ್.ಎಸ್ ಕಾಲೇಜಿನ ಸಭಾಂಗಣದಲ್ಲಿ ಕಳೆದ 9 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ನಟ, ನಿರ್ದೇಶಕ ಹಾಗೂ ತಂತ್ರಜ್ಞರಾಗಿ ತೊಡಗಿಸಿಕೊಂಡಿರುವ ಮಿಥುನ್ ಕುಮಾರ್ ಸೋನ ರವರು ರಚಿಸಿ ನಿರ್ದೇಶಿಸಿರುವ “ಮುಖವಾಡ” ನಾಟಕ ಪ್ರದರ್ಶನ ನಡೆಯಲಿದ್ದು, ಕೆ.ಎಸ್.ಎಸ್ ಕಾಲೇಜು ಈ ನಾಟಕದ ನಿರ್ಮಾಣ ಮಾಡಿದೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಮಾರ್ಗದರ್ಶನ ಮಾಡಿದ್ದು, ಐ.ಕ್ಯೂ.ಎ.ಸಿ ಕೋ-ಆರ್ಡಿನೇಟರ್ ಶ್ರೀಮತಿ ಶ್ರೀಲತಾ ಕಮಿಲ ಸಹಕಾರ ನೀಡಿದ್ದಾರೆ. ನಾಟಕ ತಂಡದ ಸಂಚಾಲಕರಾಗಿ ಡಾ. ಪ್ರಸಾದ್ ಎನ್ ಹಾಗೂ ಸಹ ಸಂಚಾಲಕರಾಗಿ ಶ್ರೀಮತಿ ಕೃತಿಕಾ ಪಿ.ಎಸ್(ತಾಂತ್ರಿಕ ವರ್ಗ) ಕಾರ್ಯನಿರ್ವಹಿಸಿದ್ದಾರೆ. ಈ ನಾಟಕದಲ್ಲಿ ಬರುವ ಹಾಡನ್ನು ತೇಜು ಕೊಲ್ಲಮೊಗ್ರು, ಅಶ್ವತ್ ಐವರ್ನಾಡು, ಶರಣು ಕಲ್ಲುಗುಂಡಿ, ನವ್ಯಶ್ರೀ ಎಸ್.ವಿ ಸುಬ್ರಹ್ಮಣ್ಯ ಹಾಗೂ ಹನೀಕ್ಷಾ ಎಸ್.ಆರ್ ಹರಿಹರ ಹಾಡಿದ್ದು, ಪುತ್ತೂರು ಕಬಕದ ಶ್ರೀರಾಜ್ ಮ್ಯೂಸಿಕ್ ವರ್ಲ್ಡ್ ನಲ್ಲಿ ಹಾಡಿನ ರೆಕಾರ್ಡಿಂಗ್ ಮಾಡಲಾಗಿದೆ. ಬೆಳಕಿನ ವಿನ್ಯಾಸವನ್ನು ನಿರ್ದೇಶಕರಾದ ಮಿಥುನ್ ಕುಮಾರ್ ಸೋನ ಮಾಡಿದ್ದು, ಕುಸುಮ ಸಾರಂಗದ ನಿಕಟಪೂರ್ವ ಸಂಚಾಲಕರು ಹಾಗೂ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ತುಕಾರಾಂ ಏನೆಕಲ್ಲು ಹಾಗೂ ಕುಸುಮ ಸಾರಂಗ ರಂಗ ಘಟಕದ ಪೂರ್ವ ವಿದ್ಯಾರ್ಥಿಗಳು ಸಹಕರಿಸಿದ್ದಾರೆ. ಈ ನಾಟಕದಲ್ಲಿ 27 ಪಾತ್ರಗಳಿದ್ದು, ರಾಕ್ಷಸ ಪಾತ್ರದಲ್ಲಿ ಅಶ್ವಥ್ ಕೆ(ತೃತೀಯ ಬಿ.ಎ), ರಘು ಪಾತ್ರದಲ್ಲಿ ವಿಘ್ನೇಶ್(ತೃತೀಯ ಬಿ.ಕಾಂ), ಮಾಧವ ಪಾತ್ರದಲ್ಲಿ ತೇಜನ್(ತೃತೀಯ ಬಿ.ಕಾಂ), ಇನ್ಸ್‌ಪೆಕ್ಟರ್ ಅಚ್ಯುತ್ ಕುಮಾರ್ ಪಾತ್ರದಲ್ಲಿ ರಂಜಿತ್(ತೃತೀಯ ಬಿ.ಎ), ದೇವಪ್ಪ ಶೆಟ್ಟಿ ಪಾತ್ರದಲ್ಲಿ ಮಿಥುನ್ ಕೆ.ಎ(ತೃತೀಯ ಬಿ.ಎ), ನಿರೂಪಕ/ಕೋರ್ಟ್ ಹವಾಲ್ದಾರ್ ಪಾತ್ರದಲ್ಲಿ ಶ್ರೀಹರಿ ಎಸ್.ಕೆ(ತೃತೀಯ ಬಿ.ಎ), ಕಾನ್ಸ್‌ಟೇಬಲ್ ಸುಬ್ಬ ಪಾತ್ರದಲ್ಲಿ ಕುಶಾಂತ್ ಪಿ.ಬಿ(ತೃತೀಯ ಬಿ.ಎ), ನಿರೂಪಕ/ಭೋಜಪ್ಪ ಪಾತ್ರದಲ್ಲಿ ಶರಣು(ತೃತೀಯ ಬಿ.ಎ), ಡ್ರೈವರ್ ಚಂದ್ರ ಪಾತ್ರದಲ್ಲಿ ನಿರಂಜನ(ತೃತೀಯ ಬಿ.ಕಾಂ), ಲಕ್ಷ್ಮೀ ಪಾತ್ರದಲ್ಲಿ ದೀಕ್ಷಾ ಎಂ.ಕೆ(ತೃತೀಯ ಬಿ.ಬಿ.ಎ), ನಿರೂಪಕಿ/ಪತ್ರಕರ್ತೆ ರೇಷ್ಮಾ ಪಾತ್ರದಲ್ಲಿ ಜೀವಿತಾ ವೈ.ಎನ್(ತೃತೀಯ ಬಿ.ಎ), ಕಮಲ ಪಾತ್ರದಲ್ಲಿ ಸುವೀಕ್ಷಾ ಎ.ವಿ(ತೃತೀಯ ಬಿ.ಬಿ.ಎ), ವಾಣಿ ಪಾತ್ರದಲ್ಲಿ ಮೌಲ್ಯ ಎನ್(ತೃತೀಯ ಬಿ.ಬಿ.ಎ), ಫಾತಿಮಾ/ಡಾಕ್ಟರ್ ಕಲ್ಯಾಣಿ ಪಾತ್ರದಲ್ಲಿ ಸಂಗೀತ ನಿಂಗಪ್ಪ ಗೊರವರ್(ತೃತೀಯ ಬಿ.ಎ), ಶಿಕ್ಷಕಿ ರೀಟಾ ಪಾತ್ರದಲ್ಲಿ ಉಂಡೇಲ ಗೀತಾ(ದ್ವಿತೀಯ ಬಿ.ಕಾಂ), ನಿರೂಪಕ/ಶಂಕರ ಪಾತ್ರದಲ್ಲಿ ಪೃಥ್ವಿರಾಜ್(ದ್ವಿತೀಯ ಬಿ.ಕಾಂ), ನಿರೂಪಕ/ವಕೀಲ ವಿಶ್ವನಾಥ್ ಪಾತ್ರದಲ್ಲಿ ಧೀರಜ್ ಎಂ(ದ್ವಿತೀಯ ಬಿ.ಕಾಂ), ಅಡ್ವೋಕೇಟ್ ನವ್ಯಾ/ಡ್ಯಾನ್ಸರ್ ಪಾತ್ರದಲ್ಲಿ ನವ್ಯಶ್ರೀ ಎಸ್.ವಿ(ದ್ವಿತೀಯ ಬಿ.ಕಾಂ), ಕಾನ್ಸ್‌ಟೇಬಲ್ ಸುನಂದಾ ಪಾತ್ರದಲ್ಲಿ ಧನ್ಯಶ್ರೀ(ದ್ವಿತೀಯ ಬಿ.ಕಾಂ), ನಿರೂಪಕಿ/ಸುಧಾ ಪಾತ್ರದಲ್ಲಿ ಹನೀಕ್ಷಾ ಎಸ್.ಆರ್(ದ್ವಿತೀಯ ಬಿ.ಕಾಂ), ನಿರೂಪಕಿ/ರುಕ್ಮಿಣಿ/ಕೋರ್ಟ್ ಜಡ್ಜ್ ಪಾತ್ರದಲ್ಲಿ ಜನನಿ(ದ್ವಿತೀಯ ಬಿ.ಬಿ.ಎ), ನಿರೂಪಕಿ/ಕವಿತಾ/ಸರೋಜಾ ಪಾತ್ರದಲ್ಲಿ ಹರ್ಷಿತಾ(ದ್ವಿತೀಯ ಬಿ.ಬಿ.ಎ), ನಿರೂಪಕ/ಹರೀಶ ಪಾತ್ರದಲ್ಲಿ ತಶ್ವಿನ್ ಪಿ.ಡಿ(ಪ್ರಥಮ ಬಿ.ಎ), ನಿರೂಪಕಿ/ಪತ್ರಕರ್ತೆ ಗಿರಿಜಾ ಪಾತ್ರದಲ್ಲಿ ಸಷ್ಮಾ ಎಸ್.ಕೆ(ಪ್ರಥಮ ಬಿ.ಕಾಂ), ಅಜ್ಜಿ ಪಾತ್ರದಲ್ಲಿ ರಕ್ಷಿತಾ ಬಿ.ಕೆ(ಪ್ರಥಮ ಬಿ.ಬಿ.ಎ), ನಿರೂಪಕಿ/ನಿರ್ಮಲಾ/ಕೋರ್ಟ್ ಕ್ಲರ್ಕ್ ಪಾತ್ರದಲ್ಲಿ ವಿನುತಾ ಎಸ್.ಪಿ(ಪ್ರಥಮ ಬಿ.ಬಿ.ಎ) ಹಾಗೂ ಬಡ ಮಹಿಳೆ/ಮೀನಾಕ್ಷಿ ಪಾತ್ರದಲ್ಲಿ ಲಿಖಿತಾ ಕೆ(ಪ್ರಥಮ ಬಿ.ಕಾಂ) ಅಭಿನಯಿಸಲಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆಯಲ್ಲಿರುವ ಪ್ರಜಾಪ್ರಭುತ್ವಕ್ಕೆ ಕಾಣದ ಕೈಗಳಿಂದಾಗುವ ಮೋಸದ ಜಾಲಕ್ಕೆ ಬಲಿಯಾದ ಜನ, ಹಳ್ಳಿ, ಗ್ರಾಮ, ತಾಲೂಕು ಹೀಗೆ ಅನೇಕರಿಗೆ ಆಗಿರುವ ಸಮಸ್ಯೆಗಳ ಕುರಿತು ಕಥಾ ಹಂದರವನ್ನು ಹೊಂದಿರುವ ಈ ಕಥೆ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವಂತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಆಯೋಜಕರು ವಿನಂತಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading