ಜಾಮಿಆಃ ಇರ್ಫಾನಿಯ್ಯಃ ಚಪ್ಪಾರಪ್ಪಡವು ವಾರ್ಷಿಕ ಸಮ್ಮೇಳನದ ಪ್ರಚಾರಾರ್ಥ ಕುಟುಂಬ ಸಮ್ಮಿಲನ

ಸುಳ್ಯ: ಜಾಮಿಆಃ ಇರ್ಫಾನಿಯ್ಯಃ ಚಪ್ಪಾರಪ್ಪಡವು 35ನೇ ವಾರ್ಷಿಕ ಹಾಗೂ 23ನೇ ಸನದುದಾನ ಮಹಾ ಸಮ್ಮೇಳನದ ಪ್ರಚಾರಾರ್ಥವಾಗಿ IDS ಸುಳ್ಯ ವಲಯದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮವು ನವೆಂಬರ್ 3ರಂದು ಮಂಗಳವಾರ ಸುಳ್ಯದ ಸುಪ್ರೀಂ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಎಸ್.ಎ. ಹಮೀದ್ ವಹಿಸಿದ್ದರು.ಜಂಇಯ್ಯತುಲ್ ಇರ್ಫಾನಿಯ್ಯೀನ್ ದ.ಕ ಜಿಲ್ಲಾಧ್ಯಕ್ಷ ಉಮರ್ ದಾರಿಮಿ ಸಾಲ್ಮರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಭಾಷಣಗಾರರಾಗಿ ಆಗಮಿಸಿದ ಜಿಲ್ಲಾ ಪ್ರ.ಕಾರ್ಯದರ್ಶಿ ಸವಾದ್ ಫೈಝಿ ಇರ್ಫಾನಿ ವಿಷಯ ಮಂಡಿಸಿದರು.

. . . . . . . . .

ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಫೈಜಿ ಐವರ್ನಾಡು, ಇಲ್ಯಾಸ್ ಇರ್ಫಾನಿ ಕೊಳ್ತಿಗೆ ಮಾತನಾಡಿ ಶುಭಹಾರೈಸಿದರು.

. . . . . . .

ಕಾರ್ಯಕ್ರಮದಲ್ಲಿ ಅಶ್ರಫ್ ಮುಸ್ಲಿಯಾರ್ ಅಡ್ಕಾರ್, ಸುಲ್ತಾನ್ ಉಸ್ತಾದ್ ಈಶ್ವರಮಂಗಲ, ಹಾಜಿ ಅಬ್ದುಲ್ಲ ಈಶ್ವರಮಂಗಲ, ಹಾಜಿ ಅಹ್ಮದ್ ಸುಪ್ರೀಂ, ಹಾಜಿ ಅಬ್ದುಲ್ಖಾದರ್ ಆಜಾದ್, ಹಾಜಿ ಅಬ್ದುಲ್ ಖಾದರ್ ಅಜ್ಜಾವರ, ಮುಹಮ್ಮದ್ ಮಣಿಮಜಲ್ ಮುಂತಾದ ಇರ್ಫಾನಿಆಃ ದಅವಾ ಸಂಘ ಸುಳ್ಯ ವಲಯದ ಸದಸ್ಯರು, ಧಾರ್ಮಿಕ ಮುಖಂಡರು, ಹಲವಾರು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಮುಂಬರುವ ಡಿಸೆಂಬರ್ 24ರಿಂದ 27ರವರೆಗೆ ನಡೆಯಲಿರುವ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆ ನೀಡಲಾಯಿತು.IDS ಸುಳ್ಯ ವಲಯ ಪ್ರ.ಕಾರ್ಯದರ್ಶಿ ಶಮೀಮ್ ಅರ್ಶದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading