ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಲ್ಲಿ 5,431 SDA ಮತ್ತು FDA ಹುದ್ದೆಗಳ ಬೃಹತ್ ನೇಮಕಾತಿ : ವಿದ್ಯಾಮಾತಾ ಅಕಾಡೆಮಿಯಲ್ಲಿ ಆನ್ಲೈನ್ ಮತ್ತು ನೇರ ತರಬೇತಿ ಪ್ರಾರಂಭ

ಪುತ್ತೂರು / ಸುಳ್ಯ:ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬೃಹತ್ ಸಂಖ್ಯೆಯ ದ್ವಿತೀಯ ದರ್ಜೆ ಸಹಾಯಕ (SDA) ಹಾಗೂ ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 5,431 ಹುದ್ದೆಗಳಿಗೆ ಈ ಬೃಹತ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.ದ್ವಿತೀಯ ಪಿಯುಸಿ, ಯಾವುದೇ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ನಿಗದಿಯಾಗಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ, ಒಬಿಸಿ (OBC) ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷಗಳವರೆಗೆ ಗರಿಷ್ಠ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಇದರೊಂದಿಗೆ ಸರಕಾರಿ ನಿಯಮಾವಳಿಗಳ ಪ್ರಕಾರ ಇತರ ವಿಶೇಷ ಮೀಸಲಾತಿ ಅಭ್ಯರ್ಥಿಗಳಿಗೂ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

. . . . . . . . .

ಅರ್ಜಿ ಸಲ್ಲಿಕೆಗೆ 2026ರ ನವೆಂಬರ್ 25 ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ, ಅಂಕಪಟ್ಟಿಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಹಾಗೂ ಮೀಸಲಾತಿ ಸೌಲಭ್ಯಕ್ಕಾಗಿ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರಗಳೊಂದಿಗೆ ಸಿದ್ಧರಿರಬೇಕಾಗಿದೆ. ಈ ಬೃಹತ್ ಸರಕಾರಿ ನೇಮಕಾತಿಯ ಸದುಪಯೋಗವನ್ನು ಪ್ರತಿಯೊಬ್ಬ ಅರ್ಹ ಉದ್ಯೋಗಾಕಾಂಕ್ಷಿಯೂ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಪುತ್ತೂರು ಮತ್ತು ಸುಳ್ಯದ ಪ್ರಸಿದ್ಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿ ವತಿಯಿಂದ ಅಭ್ಯರ್ಥಿಗಳಿಗೆ ಸಂಪೂರ್ಣ ಮಾರ್ಗದರ್ಶನ ಅತ್ಯುತ್ತಮ ತರಬೇತಿ ಮೂಲಕ ನಡೆಯಲಿದೆ.

. . . . . . .

ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗದಲ್ಲಿರುವವರಿಗೆ /ಗೃಹಣಿಯರಿಗೆ ಅನುಕೂಲ ಆಗುವಂತೆ ರಾತ್ರಿ 07 ರಿಂದ 09ರವರೆಗೆ ಆನ್ಲೈನ್ ತರಬೇತಿ ಹಾಗೂ ನೇರವಾಗಿ ತರಬೇತಿಗೆ ಹಾಜರಾಗುವವರಿಗಾಗಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.45ರವರೆಗೆ ತರಬೇತಿ ನಡೆಯಲಿದೆ. ಅಲ್ಲದೇ ಇದರ ಜೊತೆಗೆ ಸಂಪೂರ್ಣ ನೋಟ್ಸ್, ಈ ಹಿಂದೆ ನಡೆದ ಪರೀಕ್ಷೆಗಳ ವಿವರಣೆ, ದಿನನಿತ್ಯ ಮಾದರಿ ಪರೀಕ್ಷೆಗಳೂ ನಡೆಯಲಿದೆ. ಉಚಿತ ಅರ್ಜಿ ಸಲ್ಲಿಕೆ ನೆರವುನ್ನು ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಒದಗಿಸಲಾಗುತ್ತಿದೆ. ನವೆಂಬರ್ 10ರಿಂದ ತರಬೇತಿ ಪ್ರಾರಂಭವಾಗಲಿದ್ದು, ಇಂದಿನಿಂದಲೇ ಪ್ರವೇಶ ಪ್ರಕೃಯೇ ಪ್ರಾರಂಭ ಆಗಿದೆ.ಹೆಚ್ಚಿನ ವಿವರಗಳಿಗಾಗಿ ಹಾಗೂ ನೋಂದಾಯಿಸಿಕೊಳ್ಳಲು ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯ ಸಂಪರ್ಕ ಸಂಖ್ಯೆಗಳಾದ 9620468869 / 9945182516 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading