ಸುಳ್ಯ : ಎಲ್‌ಐಸಿ ಉಪಗ್ರಹ ಶಾಖೆ ಯಲ್ಲಿ 18ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮ

ಸುಳ್ಯ: ಭಾರತೀಯ ಜೀವ ವಿಮಾ ನಿಗಮದ ಸುಳ್ಯ ಉಪಗ್ರಹ ಶಾಖೆಯ 18ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಸುಳ್ಯದ ಎಲ್‌ಐಸಿ ಕಚೇರಿಯಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

. . . . . . . . .

ಮುಖ್ಯ ಅತಿಥಿಗಳಾಗಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕ ಗಣಪತಿ ಎನ್. ಭಟ್, ಪುತ್ತೂರು ಶಾಖೆಯ ಮುಖ್ಯ ಪ್ರಬಂಧಕ ಉಜ್ವಲ್ ಎಚ್. ಹಾಗೂ CLIA ಪ್ರಬಂಧಕ ವಿ.ಎಸ್. ಕುಮಾರ್ ಉಪಸ್ಥಿತರಿದ್ದರು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಖಾ ಪ್ರಬಂಧಕ ವೀರೇಶ್ ಹೂಗಾರ್ ಅವರು ಸುಳ್ಯ ಕಚೇರಿಯ 18 ವರ್ಷಗಳ ಯಶಸ್ವಿ ಪಯಣ, ಪ್ರತಿನಿಧಿಗಳ ಪರಿಶ್ರಮ ಹಾಗೂ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಕೊಡುಗೆಯನ್ನು ಸ್ಮರಿಸಿದರು. ವಿವಿಧ ಮನರಂಜನಾ ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ವ್ಯವಹಾರಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ ಹಾಗೂ ವಿವಿಧ ಅಭಿಯಾನಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಆಡಳಿತ ಅಧಿಕಾರಿ ವೇಲು ಮೋಹನ್. ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ನಾಯಕ್ ಗಣೇಶ್ ಹೆಗಡೆ ಮತ್ತು ನಿಶಾಂತ್ ಕೆ., ಉದ್ಯೋಗಿಗಳಾದ ರೋಷನ್ ಸಂದೀಪ್ ಹಾಗೂ ನಿಗಮದ ಹಲವಾರು ಪ್ರತಿನಿಧಿಗಳು ಉ ಪಸ್ಸಿತರಿದ್ದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಮಹತ್ವವನ್ನು ಸಾರುವ ಸಂಭ್ರಮವೂ ಕಾರ್ಯಕ್ರಮದಲ್ಲಿ ಮೇಳೈಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಎಲ್‌ಐಸಿಯ ಬೆಳವಣಿಗೆಯಲ್ಲಿ ಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಕರೆ ನೀಡಿದರು. ಸುಳ್ಯ ಕಚೇರಿಯ ಸಾಧನೆ ಹಾಗೂ ತಂಡದ ಒಗ್ಗಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಾಧನೆಗೆ ಶುಭ ಹಾರೈಸಿದರು.ಕಳೆದ 18 ವರ್ಷಗಳಿಂದ ಗ್ರಾಹಕರ ವಿಶ್ವಾಸ, ಪ್ರತಿನಿಧಿಗಳ ಪರಿಶ್ರಮ ಹಾಗೂ ಸಿಬ್ಬಂದಿಗಳ ಸಮರ್ಪಣಾ ಮನೋಭಾವದೊಂದಿಗೆ ಮುನ್ನಡೆಯುತ್ತಿರುವ ಸುಳ್ಯ ಎಲ್‌ಐಸಿ ಕಚೇರಿಯ ಈ ವಾರ್ಷಿಕೋತ್ಸವವು ಕೇವಲ ಒಂದು ಆಚರಣೆಯಾಗಿರದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡುವ ಸಂಕಲ್ಪದ ಸಂಭ್ರಮವಾಗಿ ಮೂಡಿಬಂದಿತು.ಒಗ್ಗಟ್ಟಿನ ಶಕ್ತಿ, ಪರಿಶ್ರಮದ ಸಾಧನೆ ಹಾಗೂ ಸೇವೆಯ ಸಂಕಲ್ಪದೊಂದಿಗೆ ಸುಳ್ಯ ಎಲ್‌ಐಸಿ ಕಚೇರಿಯ ಯಶಸ್ಸಿನ ಪಯಣ ಮುಂದುವರಿಯಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading