ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬೆಳ್ಳಾರೆಯ ಪ್ರಸಾದ್ ಟೆಕ್ಸ್ ಟೈಲ್ಸ್‌ನಲ್ಲಿ ವಿಶೇಷ ರಿಯಾಯಿತಿ ಸೇಲ್ ; 5 ರಿಂದ 10 ಶೇ. ವರೆಗೆ ವಿಶೇಷ ರಿಯಾಯಿತಿ – ಹೊಸ ಹೊಸ ವಸ್ತ್ರ ಸಂಗ್ರಹಗಳ ಆಕರ್ಷಣೆ

54 ವರ್ಷಗಳ ವಸ್ತ್ರ ಪರಂಪರೆ ಹಾಗೂ ಸಾರ್ಥಕ ಸೇವೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ ಬೆಳ್ಳಾರೆಯ ಪ್ರತಿಷ್ಠಿತ ಪ್ರಸಾದ್ ಟೆಕ್ಸ್ ಟೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಹೊಸ ವಸ್ತ್ರ ಸಂಗ್ರಹಗಳೊಂದಿಗೆ ವಿಶೇಷ ರಿಯಾಯಿತಿ ಮಾರಾಟ ಆರಂಭಗೊಂಡಿದೆ. ಗ್ರಾಹಕರಿಗೆ ಶೇ. 5ರಿಂದ 10ರ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

. . . . . . . . .

ಜವುಳಿ ಉದ್ಯಮದಲ್ಲಿ ಸದಾ ಹೊಸತನಕ್ಕೆ ಆದ್ಯತೆ ನೀಡುತ್ತಾ, ಪ್ರಸಿದ್ಧ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ವಸ್ತ್ರಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿರುವ ಪ್ರಸಾದ್ ಟೆಕ್ಸ್ ಟೈಲ್ಸ್, ಬೆಳ್ಳಾರೆಯ ಹೃದಯಭಾಗದಲ್ಲಿ ಸುಸಜ್ಜಿತ ಹಾಗೂ ವಿಶಾಲವಾದ ಮಳಿಗೆಯನ್ನು ಹೊಂದಿದೆ. ಗುಣಮಟ್ಟದ ಸೇವೆ ಮತ್ತು ವೈವಿಧ್ಯಮಯ ವಸ್ತ್ರ ಸಂಗ್ರಹಗಳ ಮೂಲಕ ಗ್ರಾಹಕರ ಜನಮನ್ನಣೆ ಗಳಿಸಿದೆ. ಸುಳ್ಯ ತಾಲೂಕಿನ ಗ್ರಾಹಕರಲ್ಲದೆ ಹೊರ ತಾಲೂಕುಗಳಿಂದಲೂ ಮದುವೆ ಜವುಳಿ ಖರೀದಿಗಾಗಿ ಗ್ರಾಹಕರು ಇಲ್ಲಿಗೆ ಆಗಮಿಸುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ.

. . . . . . .

ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ನೂತನ ವಿನ್ಯಾಸದ ಕಾಂಜೀವರಂ ಸೀರೆಗಳು, ಫ್ಯಾನ್ಸಿ ಸೀರೆಗಳು, ಟಿಶ್ಯೂ ಸೀರೆಗಳು, ಸಾಫ್ಟ್ ಸಿಲ್ಕ್, ಪೋಚಂಪಳ್ಳಿ ಸೀರೆಗಳು ಸೇರಿದಂತೆ ಮಹಿಳೆಯರ ಮೆಚ್ಚಿನ ವೈವಿಧ್ಯಮಯ ಸಂಗ್ರಹಗಳು ಲಭ್ಯವಿವೆ. ಆಧುನಿಕ ವಿನ್ಯಾಸದ ಕುರ್ತಿಗಳು, ಲೆಹೆಂಗಾ, ಗೌನ್, ಚೂಡಿದಾರ್ ಸೆಟ್‌ಗಳು, ಜೀನ್ಸ್ ಸೇರಿದಂತೆ ವಿವಿಧ ಉಡುಪುಗಳ ಬೃಹತ್ ಸಂಗ್ರಹವಿದೆ.

ಪುರುಷರಿಗಾಗಿ ಪ್ರಸಿದ್ಧ ಬ್ರಾಂಡ್‌ಗಳ ಶರ್ಟ್, ಟ್ರೌಸರ್ಸ್, ಶೇರ್ವಾನಿ, ಸೂಟ್‌ಗಳು ಹಾಗೂ ಮಕ್ಕಳಿಗಾಗಿ ವಿವಿಧ ವಿನ್ಯಾಸದ ಸಿದ್ಧ ಉಡುಪುಗಳು ಖರೀದಿಗೆ ಲಭ್ಯವಿವೆ. ಅಲ್ಲದೆ, ಪ್ರಖ್ಯಾತ ಮಿಲ್‌ಗಳ ಸೂಟಿಂಗ್ಸ್ ಮತ್ತು ಶರ್ಟಿಂಗ್‌ಗಳೊಂದಿಗೆ ರಾಮರಾಜ್, ಉದಯಮ್, ರೇಮಂಡ್ಸ್, ಸಿಯಾರಾಮ್ಸ್ ಮೊದಲಾದ ಕಂಪನಿಗಳ ಅಧಿಕೃತ ಡೀಲರ್ ಆಗಿ ಪ್ರಸಾದ್ ಟೆಕ್ಸ್ ಟೈಲ್ಸ್ ಕಾರ್ಯನಿರ್ವಹಿಸುತ್ತಿದೆ.

ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವ ಸಂಸ್ಥೆಯು ಗ್ರಾಹಕರಿಗೆ ಗುಣಮಟ್ಟದ ವಸ್ತ್ರಗಳೊಂದಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಸಂಸ್ಥೆಯ ಮೇಲಿನ ವಿಶ್ವಾಸ ಮತ್ತು ಪ್ರೀತಿಗೆ ಗ್ರಾಹಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿರುವ ಸಂಸ್ಥೆಯ ಮಾಲಕ ಬಿ. ನರಸಿಂಹ ಜೋಶಿ ಅವರು, ದೀಪಾವಳಿ ಹಬ್ಬದ ಪ್ರಯುಕ್ತ ಆರಂಭಿಸಿರುವ ವಿಶೇಷ ರಿಯಾಯಿತಿ ಮಾರಾಟದ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading