ಜೇಸಿಐ ಭಾರತ ವಲಯ 15ರ ಉಪಾಧ್ಯಕ್ಷೆಯಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಆಯ್ಕೆ

ಸುಳ್ಯ: 2027ನೇ ಸಾಲಿನ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

. . . . . . . . .

ವಲಯ ಆಡಳಿತ ಮಂಡಳಿಯಲ್ಲಿ ಈ ವರ್ಷ ಐದು ಉಪಾಧ್ಯಕ್ಷ ಸ್ಥಾನಗಳಿದ್ದು, ಇದಕ್ಕಾಗಿ ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯ ಬಳಿಕ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಎರಡು ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳ ನಡುವೆ ನವೆಂಬರ್ 1ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಮತದಾನ ನಡೆಯಿತು. ವಲಯದ ಎಲ್ಲಾ ಘಟಕಾಧ್ಯಕ್ಷರುಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರು ಬಹುಮತದೊಂದಿಗೆ ಆಯ್ಕೆಯಾಗಿದ್ದು, ಅತ್ಯಧಿಕ ಮತಗಳನ್ನು ಪಡೆದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

. . . . . . .

ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಜೇಸಿಐ ಭಾರತ ವಲಯ 15ರ ವಲಯ ಸಮ್ಮೇಳನ ‘ಆರ್ಯ-2026’ರಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಜೇಸಿಐ ಭಾರತದ ನ್ಯಾಷನಲ್ ಎಕ್ಸಿಕ್ಯೂಟಿವ್ ಆಫೀಸರ್ ಜೇಸಿ ಈಶಾನ್ ಅಗರ್ವಾಲ್, ಜೇಸಿಐ ಭಾರತ ವಲಯ 15ರ ನಾಮನಿರ್ದೇಶನ ಸಮಿತಿ ಅಧ್ಯಕ್ಷ ಜೆ.ಎಫ್.ಎಸ್. ಅಭಿಲಾಷ್ ಬಿ.ಎ. ಕುಂದಾಪುರ, ಸಮಿತಿ ಸದಸ್ಯರಾದ ಪೂರ್ವ ವಲಯಾಧ್ಯಕ್ಷ ಅಡ್ವಕೇಟ್ ಗಿರೀಶ್ ಎಸ್.ಪಿ. ಕಾಪು, ಜೇಸಿ ಪುರುಷೋತ್ತಮ್ ಶೆಟ್ಟಿ ಪುತ್ತೂರು ಹಾಗೂ ಜೇಸಿ ರಾಯನ್ ಉದಯನ್ ಕ್ರಾಸ್ತ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಲೇಖಕಿ ಹಾಗೂ ಸಾಹಿತ್ಯ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲತಾಶ್ರೀ ಅವರು ಸಾಮಾಜಿಕ ಮುಖಂಡ ಸುಪ್ರೀತ್ ಮೋಂಟಡ್ಕ ಅವರ ಪತ್ನಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading