ಕೋಟೆಮುಂಡುಗಾರಿನಲ್ಲಿ 35ನೇ ವರ್ಷದ ಗಣೇಶೋತ್ಸವ – ವೈಭವದ ಶೋಭಾಯಾತ್ರೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ ಯುವಕ ಮಂಡಲ ಕಳಂಜ ಕೋಟೆಮುಂಡುಗಾರು ಬಳಿ 35ನೇ ವರ್ಷದ ಶ್ರೀ ಗಣೇಶೋತ್ಸವ ಸೆ.14 ರಂದು ನಡೆಯಿತು.‌

. . . . . . . . .

ಸಂಜೆ ವೈಭವದ ಶೋಭಾಯಾತ್ರೆ ನಡೆದು ಮೂರ್ತಿ ಜಲಸ್ತಂಭನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಸೆ.14 ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನಡೆದ ಬಳಿಕ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇದರ ವತಿಯಿಂದ ಭಜನಾ ಕಾರ್ಯಕ್ರಮ, ಗಣಪತಿ ಹವನ ನಡೆದು, ಅಕ್ಷರಾಭ್ಯಾಸ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಹಗಲು ವೇಳೆ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳ ನಡೆಸಿ ಬಹುಮಾನ ವಿತರಿಸಲಾಯಿತು.

. . . . . . .

ಸಂಜೆ ವಿದುಷಿ ಇಂದುಮತಿ ನಾಗೇಶ್‌ ಇವರ ನಿರ್ದೇಶನದಲ್ಲಿ ನಟರಾಜ ನೃತ್ಯನಿಕೇತನ ಸುಳ್ಯ ಶಾಖೆಯ ಶಿಷ್ಯ ವೃಂದದವರಿಂದ “ಭರತ ನೃತ್ಯ ವೈಭವ” ನಡೆಯಿತು. ಆ ಬಳಿಕ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಾಂಡಿಗದ್ದೆ ಶಾಲೆಯ ಶಿಕ್ಷಕ ಯಶೋಧರ ಕಳಂಜ ಹಾಗೂ ಅವರ ತಂದೆ ಹುಕ್ರಪ್ಪ ಅವರನ್ನು ಗೌರವಿಸಲಾಯಿತು. ಇತ್ತೀಚೆಗೆ ನಿವೃತ್ತರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಉದ್ಯೋಗವಾಗಿದ್ದು ನಿವೃತ್ತರಾದ ಪರಮೇಶ್ವರ ನಾಯ್ಕ ಪಾಡಾಜೆ ಅವರನ್ನು ಯುವಕ ಮಂಡಲ ಕಳಂಜ ವತಿಯಿಂದ ಗೌರವಿಸಲಾಯಿತು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಗಣೇಶೋತ್ಸವದ ಯಶಸ್ಸಿಗೆ ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading