ಹರಿಹರ ಪಳ್ಳತ್ತಡ್ಕ : ಇಂದಿನಿಂದ “17ನೇ ವರ್ಷದ ಶ್ರೀ ಗಣೇಶೋತ್ಸವ” – ಇಂದು ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ – ನಾಳೆ(ಸೆ.14) ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ – ಸೆ.15ರಂದು ಶ್ರೀ ಗೌರಿ ಮತ್ತು ಗಣೇಶ ದೇವರ ಮೆರವಣಿಗೆ ಹಾಗೂ ವಿಸರ್ಜನೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಸೆ.13 ಆದಿತ್ಯವಾರದಿಂದ ಸೆ.15 ಮಂಗಳವಾರದ ವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ “17ನೇ ವರ್ಷದ ಶ್ರೀ ಗಣೇಶೋತ್ಸವ”ವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಮೊದಲ ದಿನವಾದ ಇಂದು(ಸೆ.13) ಬೆಳಿಗ್ಗೆ ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಿತು. ನಂತರ ಸಂಜೆ ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಪಳ್ಳತ್ತಡ್ಕ, ಶ್ರೀ ದುರ್ಗಾ ಭಜನಾ ಮಂಡಳಿ ಬಾಳುಗೋಡು ಹಾಗೂ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ-ನಡುಗಲ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಗೌರಿ ದೇವಿಗೆ ಮಹಾಪೂಜೆ ನಡೆಯಿತು.
ನಾಳೆ(ಸೆ.14) ಸೋಮವಾರದಂದು ಬೆಳಿಗ್ಗೆ 9:22ಕ್ಕೆ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಂತರ ಶ್ರೀ ಗಣಪತಿ ಪೂಜೆ, ಸಾಮೂಹಿಕ ಶ್ರೀ ಲಕ್ಷ್ಮೀ ಗಣಪತಿ ಹವನ ನಡೆದು ಮಧ್ಯಾಹ್ನ 12:30ಕ್ಕೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:00 ಗಂಟೆಯಿಂದ ಶ್ರೀ ದೇವಿ ಭಜನಾ ತಂಡ ಹರಿಹರ ಪಳ್ಳತ್ತಡ್ಕ, ಶ್ರೀ ಚಾಮುಂಡೇಶ್ವರಿ ಭಜನಾ ತಂಡ ಹರಿಹರ ಪಳ್ಳತ್ತಡ್ಕ ಹಾಗೂ ಶ್ರೀ ಹರಿಹರೇಶ್ವರ ಭಜನಾ ತಂಡ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:00 ಗಂಟೆಯಿಂದ ಮಹಾಪೂಜೆ ನಡೆಯಲಿದೆ. ಅದೇ ರೀತಿ ನಾಳೆ ಸೆ.14ರಂದು ಬೆಳಿಗ್ಗೆ ವಾಲಿಬಾಲ್ ಪಂದ್ಯಾಟ ಹಾಗೂ ಮಧ್ಯಾಹ್ನ 1:00 ಗಂಟೆಯಿಂದ ಅಂಗನವಾಡಿ ಮಕ್ಕಳಿಗೆ, 1 ರಿಂದ 10ನೇ ತರಗತಿ ಮಕ್ಕಳಿಗೆ, ಸಾರ್ವಜನಿಕ ಪುರುಷರಿಗೆ ಹಾಗೂ ಸಾರ್ವಜನಿಕ ಮಹಿಳೆಯರಿಗೆ ಕ್ರೀಡಾ ಕಾರ್ಯಕ್ರಮ ನಡೆಯಲಿದೆ.
ಕೊನೆಯ ದಿನವಾದ ಸೆ.15 ಮಂಗಳವಾರದಂದು ಬೆಳಿಗ್ಗೆ 8:42ಕ್ಕೆ ಶ್ರೀ ಗಣಪತಿ ದೇವರ ಪ್ರಾತಃಕಾಲ ಪೂಜೆ ನಡೆದು ಬೆಳಿಗ್ಗೆ 9:05ಕ್ಕೆ ಶ್ರೀ ಗೌರಿ ಮತ್ತು ಶ್ರೀ ಗಣೇಶ ದೇವರ ಮೆರವಣಿಗೆ ಹೊರಟು ನಾಸಿಕ್ ಬ್ಯಾಂಡ್, ಕುಣಿತ ಭಜನೆ, ಗೊಂಬೆ ಕುಣಿತದ ಅದ್ಧೂರಿ ಮೆರವಣಿಗೆಯೊಂದಿಗೆ ಐನೆಕಿದು, ಬಾಳುಗೋಡು, ಹರಿಹರ ಪಳ್ಳತ್ತಡ್ಕ ಮೂರು ಗ್ರಾಮಗಳಲ್ಲಿ ಮೆರವಣಿಗೆ ಬಂದು ಸಾಯಂಕಾಲ 5:42ಕ್ಕೆ ಶ್ರೀ ಗೌರಿ ಮತ್ತು ಶ್ರೀ ಗಣಪತಿ ದೇವರ ಮೂರ್ತಿಗಳನ್ನು ವಿಸರ್ಜಿಸಲಾಗುವುದು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading