ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಸುಳ್ಯದ ಖ್ಯಾತ ಕವಿ, ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ ಸನ್ಮಾನ

ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ “ಮುನಿಸು ತರವೇ ಮುಗುದೆ” ಖ್ಯಾತಿಯ ಸುಳ್ಯದ ಖ್ಯಾತ ಕವಿ, ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಸುಬ್ರಾಯ ಚೊಕ್ಕಾಡಿಯವರಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮವು ಸೆ.11ರಂದು ರಂದು ನಡೆಯಿತು. ಪ್ರಜಾಧ್ವನಿ ಕರ್ನಾಟಕ ತಂಡವು ಶ್ರೀಯುತ ಚೊಕ್ಕಾಡಿಯವರ ಸ್ವಗೃಹಕ್ಕೆ ಭೇಟಿ ನೀಡಿ ಅವರನ್ನು ಹಾಗೂ ಅವರ ಧರ್ಮಪತ್ನಿಯವರನ್ನು ಸನ್ಮಾನಿಸಿತು. ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷ ಪ್ರವೀಣ್ ಮುಂಡೋಡಿ ಚೊಕ್ಕಾಡಿಯವರ ಕಿರುಪರಿಚಯ ಮಾಡಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

. . . . . . . . .

ಸನ್ಮಾನ ಸ್ವೀಕರಿಸಿದ ಸುಬ್ರಾಯ ಚೊಕ್ಕಾಡಿಯವರು ಮಾತನಾಡಿ ಪ್ರಜಾಧ್ವನಿ ತಂಡಕ್ಕೆ ಧನ್ಯವಾದ ತಿಳಿಸಿ, ತಂಡದ ಸಮಾಜಮುಖಿ ಕಾರ್ಯಕ್ರಮಗಳಿಗೆ ಹಾಗೂ ಉತ್ತಮ ಸಮಾಜ ನಿರ್ಮಾಣದ ಪ್ರಯತ್ನಗಳಿಗೆ ಶುಭ ಹಾರೈಸಿದರು.

. . . . . . .

ಪ್ರಜಾಧ್ವನಿ ತಂಡದ ಕೆ.ಪಿ ಮೋಹನ್ ಕಡಬ, ಶಿವಶಂಕರ್ ಕಡಬ, ವಸಂತ ಪೆಲತ್ತಡ್ಕ, ಮಹೇಶ್ ಬೆಳ್ಳಾರ್ಕರ್, ಅಶ್ರಫ್ ಸಾಹುಕಾರ್, ಮಂಜುನಾಥ ಮಡ್ತಿಲ, ಕೇಶವ ಮೊರಂಗಲ್ಲು, ಭರತ್ ಕುಕ್ಕುಜಡ್ಕ, ಚೆನ್ನಕೇಶವ ಕಣಪಿಲ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading