ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ :12-09-2026 ಶನಿವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ… ಮೊ : 9591969197

. . . . . . . . .

*01,🐏ಮೇಷರಾಶಿ🐏*📃,ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ, ಗಮನಿಸಿ:-ಇಂದು ನಿಮಗೆ ಮಾನಸಿಕ ಒತ್ತಡವಿರುತ್ತದೆ,ಪರಿಹಾರ:- ನವಗ್ರಹ ಮಂತ್ರ ಪಠಿಸಿ,

. . . . . . .

*02,🐂ವೃಷಭರಾಶಿ🐂*📃,ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನು ಜನರು ಕೊಂಡಾಡುವರು. ಅಪೂರ್ಣವಾಗಿರುವ ಕೆಲಸಗಳನ್ನು ಬೇಗ ಮಾಡಿ ಮುಗಿಸಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ,ಗಮನಿಸಿ:- ಇಂದು ನಿಮ್ಮ ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸಿ, ಪರಿಹಾರ:-ಶ್ರೀ ದತ್ತಾತ್ರೇಯ ಸ್ವಾಮಿಯನ್ನು ಸ್ಮರಣೆ ಮಾಡಿ,

*03,👥ಮಿಥುನರಾಶಿ👥*📃,ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು. ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ. ಕುಟುಂಬದವರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯುವಿರಿ,ಗಮನಿಸಿ:- ಇಂದು ಅನಿರೀಕ್ಷಿತ ದನಲಾಭವಾಗುವುದು,ಪರಿಹಾರ:-ದೇವಾಲಯಕ್ಕೆ ಎಳ್ಳು ದಾನ ಮಾಡಿ,

*04,🦀ಕಟಕ ರಾಶಿ🦀*📃,ಬಿರುಬಿಸಿಲಿನ ಬಾಧೆಗೆ ಬಳಲಿದಂತೆ, ಗ್ರಹಗಳ ಅಶುಭಫಲ ಸಂಚಾರದಿಂದ ಬಳಲುವಿರಿ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನಲ್ಲಿ ಮೊರೆ ಹೋಗಿ. ನಿಮ್ಮ ಕಾರ್ಯಗಳಲ್ಲಿ ಅಲ್ಪ ಗೆಲುವು ಕಂಡುಬರುವುದು. ವಿಜಯದ ಯೋಜನೆಗಾಗಿ ಕಾರ್ಯಶೀಲರಾಗಿ. ಉತ್ತಮ ಸಹವರ್ತಿಗಳು ನಿಮ್ಮನ್ನು ಸಂಧಿಸುತ್ತಾರೆ. ನೀವು ಮಾಡಿದ ಸಂಶೋಧನಾ ಕೆಲಸಕ್ಕೆ ಶೀಘ್ರವೇ ಮನ್ನಣೆ ದೊರೆಯುವುದು,ಗಮನಿಸಿ:-ನಿಮ್ಮ ಮುಂದಿನ ದಾರಿ ಸುಗಮವಾಗುವುದು!, ಪರಿಹಾರ:-ಶ್ರೀ ಸೋಮೇಶ್ವರ ಸ್ವಾಮಿಯನ್ನು ಸ್ಮರಿಸಿ,

*05,🦁ಸಿಂಹ ರಾಶಿ🦁*📃,ಸಂಸಾರವು ಸುಖಮಯವಾಗಿರುವುದು. ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ. ಹೊಸ ಕುಟುಂಬದ ಸದಸ್ಯರ ಆಗಮನದ ಸುದ್ದಿ ನಿಮ್ಮನ್ನು ರೋಮಾಂಚನಗೊಳಿಸಬಹುದು. ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ. ಹಾಗಾಗಿ ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು,ಗಮನಿಸಿ:-ಹಣಕಾಸಿನ ತೊಂದರೆ ಇರುವುದಿಲ್ಲ,ಪರಿಹಾರ:- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ,

*06,👩‍🦳ಕನ್ಯಾ ರಾಶಿ👩‍🦳*📃,ಇದುವರೆಗೂ ಅನುಭವಿಸಿದ ಸಂಕಟಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಈ ದಿನ ಹೊಸ ಉತ್ಸಾಹ ನೆಮ್ಮದಿ ಮೂಡುವುದು. ಬಂಧುಗಳಿಂದ ಮತ್ತು ಮಿತ್ರರಿಂದ ಸಹಕಾರ ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಮಾತುಗಳು ನಿಮ್ಮನ್ನು ಗೆಲ್ಲಿಸಲಿವೆ. ಜನರ ನಡುವೆ ಗುರುತಿಸಿಕೊಳ್ಳುವಿರಿ, ಗಮನಿಸಿ:-ಇಂದು ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು,ಪರಿಹಾರ:-ಸಂಜೆ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ!,

*07,⚖️ತುಲಾ ರಾಶಿ⚖️*📃,ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ಹಣದ ಪರದಾಟ ತಪ್ಪುವ ಯೋಜನೆಗಳನ್ನು ನಿಮ್ಮ ದೈವ ರೂಪಿಸುತ್ತದೆ. ಆದರೆ ಅದಕ್ಕಾಗಿ ಅವಸರ ಪಡಬೇಡಿ. ಬರುವ ಹಣಕಾಸಿನಲ್ಲಿ ಉಳಿತಾಯ ಮಾಡಿ,ಗಮನಿಸಿ:- ಇಂದು ಸಾಲ ತೀರಿಸುವ ಬಗ್ಗೆ ಗಮನ ನೀಡಿ, ಪರಿಹಾರ:-ಅನಾಥರಿಗೆ ಅನ್ನದಾನ ಮಾಡಿ,

*08,🦂ವೃಶ್ಚಿಕ ರಾಶಿ🦂*📃,ಮಿತ್ರರ ಜೊತೆ ಭೂರಿ ಭೋಜನ ಸವಿಯುವ ಭಾಗ್ಯ ನಿಮ್ಮದಾಗುವುದು. ಮತ್ತು ಸ್ನೇಹಿತರಿಂದ ಉತ್ತಮ ಸಲಹೆಗಳು ಕೇಳಿಬರುವುವು. ಅವನ್ನು ನೀವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು. ನಿಮ್ಮ ಸೌಮ್ಯ ನಡವಳಿಕೆಯ ಪರಿಣಾಮದಿಂದ ಉತ್ತಮ ಫಲವನ್ನು ಹೊಂದುವಿರಿ. ಕೆಲಸದಲ್ಲಿ ಬಡ್ತಿ ದೊರೆಯುವುದು. ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು, ಗಮನಿಸಿ:-ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ನಿಮಗೆ ಸಂತಸ ತರುವುದು,ಪರಿಹಾರ:-ಶ್ರೀ ಆಂಜನೇಯನ ಪ್ರಾರ್ಥನೆ ಮಾಡಿ,

*09,🏹ಧನುಸ್ಸುರಾಶಿ🏹*📃,ವಿವಾಹ ಯೋಗ್ಯರಿಗೆ ಕಂಕಣಭಾಗ್ಯದ ವಿವಾಹದ ಮಾತುಕತೆಗಳು ಫಲಪ್ರದವಾಗುವುವು. ಆರ್ಥಿಕ ವಿಷಯದಲ್ಲಿ ಚೇತರಿಕೆ ಕಂಡುಬರುವುದು. ನಿಮ್ಮ ಮನಸ್ಸಿನ ಸ್ಥಿತಿಯಂತೆ ಕಾರ್ಯ ಕೈಗೂಡುವುದರಿಂದ ಒಳಿತಾಗುವುದು. ರಾಜಕಾರಣಿಗಳಿಗೆ ವಿರೋಧಿಗಳಿಂದ ತೊಂದರೆ ಇದೆ. ಧನಲಾಭದ ವಿಷಯದಲ್ಲಿ ದೈವ ನಿಮಗೆ ಸಹಕರಿಸಲಿದೆ,ಗಮನಿಸಿ:-ಮನೆಯಲ್ಲಿ ಸಂಗಾತಿಯ ಹುಸುಕೋಪಕ್ಕೆ ಗುರಿ ಆಗುವಿರಿ,ಪರಿಹಾರ:-ಕುಲದೇವರನ್ನು ಪ್ರಾರ್ಥನೆ ಮಾಡಿ,

*10,🐊ಮಕರ ರಾಶಿ🐊*📃,ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ಭೂ ವ್ಯವಹಾರದವರಿಗೆ ಉತ್ತಮ ಲಾಭ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು,ಗಮನಿಸಿ:-ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯಲಿದೆ, ಪರಿಹಾರ:-ತಾಯಿ ದುರ್ಗಾಮಾತೆಯನ್ನು ಭಕ್ತಿಯಿಂದ ಪ್ರಾರ್ಥಿಸಿ,

*11,⚱️ಕುಂಭ ರಾಶಿ⚱️*📃,ಬುದ್ಧಿವಂತರಾದ ನಿಮಗೆ ಮೋಸ ಮಾಡುವ ವ್ಯಕ್ತಿ ಎದುರಾಗಬಹುದು. ಅವಸರ ಮಾಡದೆ ಇದ್ದಲ್ಲಿ ಕಾರ್ಯ ಸಾಫಲ್ಯವನ್ನು ಹೊಂದುವುದು. ನೀವಾಡುವ ಮಾತು ಇನ್ನೊಬ್ಬರ ಮನಸ್ಸನ್ನು ನೋಯಿಸದಿರಲಿ. ಈ ಬಗ್ಗೆ ಎಚ್ಚರ ವಹಿಸಿ. ಕೇವಲ ಯೋಚನೆಗಳಲ್ಲೇ ಮುಳುಗಿರಬೇಡಿ. ಅದರಿಂದ ಹೊರಕ್ಕೆ ಬನ್ನಿ. ನಂಬಿಕಸ್ಥರು ಲಾಭದ ದಾರಿ ತೋರುವರು,ಗಮನಿಸಿ:-ಮಕ್ಕಳು ಮಾಡುವ ಅಚಾತುರ್ಯಕ್ಕೆ ನೀವು ಬೆಲೆ ತೆರಬೇಕಾಗುವುದು,ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಜಪವನ್ನು ಮಾಡಿ,

*12,🐋ಮೀನ ರಾಶಿ🐋*📃,ಹಳೆಯ ವಿವಾದಕ್ಕೆ ತೆರೆ ಬೀಳಲಿದೆ. ಆದಷ್ಟು ತಾಳ್ಮೆಯಿಂದ ಇರಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಸಹಕಾರ ಅತ್ಯಗತ್ಯ. ಕೆಲ ಸಮಯವಾದರೂ ವಿಶ್ರಾಂತಿ ಪಡೆದಲ್ಲಿ ಮುಂದಿನ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಲು ಅನುಕೂಲವಾಗುವುದು. ದೈಹಿಕ ಆರೋಗ್ಯ ಕೂಡಾ ಅಷ್ಟೆ ಪ್ರಮುಖವಾದುದು, ಗಮನಿಸಿ:- ಇಂದು ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇದೆ,ಪರಿಹಾರ:-ಶಿವಪಂಚಾಕ್ಷರಿ ಮಂತ್ರ ಜಪಿಸಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading