ಸೆ. 15ರಂದು “ಸುಸ್ನಿಲ” ಜೇಸಿಐ ಸಪ್ತಾಹ 2026ರ ಸಮಾರೋಪ | ಕಮಲಪತ್ರ, ಪಯಸ್ವಿನಿಶ್ರೀ, ಕಲಾಶ್ರೀ ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರದಾನ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ (ರಿ.), ಸುಳ್ಯ ಘಟಕದ ವತಿಯಿಂದ “ಸುಸ್ನಿಲ – ಸ್ನೇಹದ ಸ್ಪಂದನ, ಸೇವೆಯ ಸಂಭ್ರಮ” ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿರುವ ಜೇಸಿಐ ಸಪ್ತಾಹ 2026ರ ಸಮಾರೋಪ ಸಮಾರಂಭವು ಸೆ. 15ರಂದು ಸಂಜೆ 6.30ಕ್ಕೆ ಅಂಬಟೆಅಡ್ಕ, ಸುಳ್ಯ, ಆರೋಹಿ ಎನ್‌ಕ್ಲೀವ್ ಸಭಾಂಗಣದಲ್ಲಿ ನಡೆಯಲಿದೆ.

. . . . . . . . .

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಹಾಗೂ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಸಲುವಾಗಿ ಸಮಾರೋಪ ಸಮಾರಂಭದಲ್ಲಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಜೇಸಿಐಯ ಪ್ರತಿಷ್ಠಿತ ಕಮಲ ಸಹರನ್ ಅವರ ಹೆಸರಿನಲ್ಲಿ ಕೊಡಮಾಡುವ “ಕಮಲಪತ್ರ” ಪುರಸ್ಕಾರವನ್ನು ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ JC HGF ಭೀಮರಾವ್ ವಾಷ್ಠರ್ ಅವರಿಗೆ ಪ್ರದಾನ ಮಾಡಲಾಗುವುದು.
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಪಯಸ್ವಿನಿಶ್ರೀ” ಪುರಸ್ಕಾರವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯದ ಪ್ರಾಂಶುಪಾಲ ಡಾ. ಲೀಲಾಧರ ಡಿ.ವಿ. ಅವರಿಗೆ ನೀಡಿ ಗೌರವಿಸಲಾಗುವುದು.
ಜೇಸಿಐ ಸುಳ್ಯ ಪಯಸ್ವಿನಿಯ ಸ್ಥಾಪಕರು ಹಾಗೂ ಸ್ಥಾಪಕ ವಲಯ ಅಧ್ಯಕ್ಷರಾಗಿದ್ದ ದಿವಂಗತ ಯು. ದುಗ್ಗಪ್ಪ ಗೌಡ ಅವರ ಸ್ಮರಣಾರ್ಥ ನೀಡಲಾಗುವ ಪ್ರತಿಷ್ಠಿತ “ಕಲಾಶ್ರೀ” ಪುರಸ್ಕಾರವನ್ನು ಗಾನಗಂಧರ್ವ ಖ್ಯಾತಿಯ ಗಾಯಕ, ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಟ ಶಶಿಧರ ಕೋಟೆ ಅವರಿಗೆ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸಮಾಜದ ಸೇವಾ ಕ್ಷೇತ್ರದಲ್ಲಿ ಮೌನವಾಗಿ, ನಿರಂತರವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಸಾಧಕರನ್ನು ಗುರುತಿಸಿ ನೀಡಲಾಗುವ “ *ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್*” ಪ್ರಶಸ್ತಿಯನ್ನು ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಇದೀಗ ನೂತನವಾಗಿ ಉಪ ತಹಶೀಲ್ದಾರ್ ಆಗಿ ನೇಮಕಗೊಂಡಿರುವ ಅವಿನ್ ರಂಗತ್ತಮಲೆ ಹಾಗೂ ಅಂತರಾಷ್ಟ್ರೀಯ ಮ್ಯಾರಥಾನ್ ಕ್ರೀಡಾಪಟು ವಿನಯ್ ನಾರಾಲು ಅವರಿಗೆ ಪ್ರದಾನ ಮಾಡಲಾಗುವುದು.
ಸಮಾಜಮುಖಿ ಚಿಂತನೆ, ಸೇವಾ ಮನೋಭಾವ, ಶಿಕ್ಷಣ, ಆಡಳಿತ, ಕಲೆ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವ ಮೂಲಕ ಯುವಜನರಲ್ಲಿ ಸೇವೆ ಮತ್ತು ನಾಯಕತ್ವದ ಮನೋಭಾವವನ್ನು ಬೆಳೆಸುವುದು ಜೇಸಿಐ ಸುಳ್ಯ ಪಯಸ್ವಿನಿಯ ಆಶಯವಾಗಿದೆ.
ಸೆಪ್ಟೆಂಬರ್ 15ರಂದು ಮಂಗಳವಾರ ಸಂಜೆ 6.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅತಿಥಿ ಗಣ್ಯರು, ಜೇಸಿಐ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷೆ JFM ಲತಾಶ್ರೀ ಸುಪ್ರೀತ್ ಮೊಂಟಡ್ಕ ತಿಳಿಸಿದ್ದಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading