ಕೊಲ್ಲಮೊಗ್ರು : ಪರಿಸರ ಮಾಹಿತಿ ಜಾಗೃತಿ ಕಾರ್ಯಕ್ರಮ

.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ವತಿಯಿಂದ ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರು ಕಾರ್ಯಕ್ಷೇತ್ರದ ದ. ಕ. ಜಿ. ಪ ಹಿರಿಯ ಪ್ರಾಥಮಿಕ ಶಾಲೆ , ಕೊಲ್ಲಮೊಗ್ರು ಇಲ್ಲಿ ಪರಿಸರ ಮಾಹಿತಿ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸುಬ್ರಹ್ಮಣ್ಯ ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ
ಸತೀಶ್ ಟಿ ಎನ್ ರವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಂತಹ ಕಾರ್ಯಕ್ರಮ ಗ್ರಾಮೀಣ ಮಟ್ಟದಲ್ಲಿ ಪರಿಸರ ಜಾಗೃತಿ ಮೂಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ.
ನಾವೆಲ್ಲರೂ ಪರಿಸರದ ಜಾಗೃತಿಯನ್ನು ಮಾಡಬೇಕಾಗಿದೆ ಮುಂದಿನ ಪೀಳಿಗೆಗೆ ಪರಿಸರದ ಅಗತ್ಯತೆಯ ಅರಿವು ಮಾಡಿಸಬೇಕಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಳ ವಹಿಸಿದ್ದರು.

. . . . . . . . .

ಮುಖ್ಯ ಅತಿಥಿಯಾಗಿ ಸುಬ್ರಮಣ್ಯ ವಲಯದ ಭಜನಾ ಪರಿಷತ್ ವಲಯಧ್ಯಕ್ಷರಾದ ಚಂದ್ರಶೇಖರ್ ಕೊಂದಳ ಹಾಗೂ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಕೋನಡ್ಕ ಶುಭಕೋರಿದರು. ಪರಿಸರ ಜಾಗೃತಿ ಬಗ್ಗೆ ಹಾಗೂ ಯೋಜನೆ ಕಾರ್ಯಕ್ರಮಗಳ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ದಿನೇಶ್ ರವರು ಮಾಹಿತಿ ನೀಡಿದರು.
ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಹಾಗೂ ಪರಿಸರದ ಬಗೆಗಿನ ವಿಡಿಯೋವನ್ನು ತೋರಿಸಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಸುಬ್ರಮಣ್ಯ ವಲಯದ ಮೇಲ್ವಿಚಾರಕರಾದ ಬಾಲಕೃಷ್ಣಗೌಡ ಕೆ ರವರು ಸ್ವಾಗತಿಸಿದರು. ಕೊಲ್ಲಮೋಗ್ರು ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಷ್ಮ ರವರು ಧನ್ಯವಾದವಿತ್ತರು. ಪರಿಸರ ಜಾಗೃತಿ ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀಮತಿ ಸಾವಿತ್ರಿರವರು ನೆರವೇರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading