ಬೆಳ್ಳಾರೆ : ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಪದಸ್ವೀಕಾರ ಸಮಾರಂಭ – “ಮಕ್ಕಳು ನಾಯಕತ್ವ ಮತ್ತು ಸಾಮಾಜಿಕ ಗುಣ ಬೆಳೆಸಿ” : ವಿನಯ್ ಕುಮಾರ್

“ಮಕ್ಕಳಿಗೆ ಎಳವೆಯಲ್ಲಿಯೇ ಸಾಮಾಜಿಕ ಸೇವೆಯನ್ನು ಕಲಿಸಲು ರೋಟರಿ ಕ್ಲಬ್ ಪ್ರಯೋಜಕತ್ವದಲ್ಲಿ ಇಂಟರ್ಯಾಕ್ಟ್ ಕ್ಲಬ್ ಆರಂಭಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಆಲೋಚನೆಗಳು ಬೆಳೆಯಲು ಸಹಕಾರಿಯಾಗುತ್ತದೆ” ಎಂದು ರೋಟರಿ ಜಿಲ್ಲೆ 3181, ವಲಯ 5ರ ಜಿಲ್ಲಾ ತರಬೇತಿ ತಂಡದ ಸಂಯೋಜಕ ವಿನಯ್ ಕುಮಾರ್ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪ್ರಾಯೋಜಿತ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

. . . . . . . . .

ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರೋಹನ್ ಫೆರ್ನಾಂಡಿಸ್, ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕೀರ್ತನಾ.ಪಿ, ಖಜಾoಜಿಯಾಗಿ ಯು.ಎಸ್ ಶಮಂತ್, ಉಪಾಧ್ಯಕ್ಷರಾಗಿ ಮಿಥುನ್.ಎ, ಕಮ್ಯುನಿಟಿ ಸರ್ವಿಸ್ ಚೆಯರ್ ಮೆನ್ ಆಗಿ ಮಹಮ್ಮದ್ ಅಶ್ಫಾಕ್, ಇನ್ಸ್ಟಿಟ್ಯೂಟ್ ಸರ್ವಿಸ್ ಚೆಯರ್ ಮೆನ್ ಆಗಿ ಕಲಂದರ್ ಶಮ್ಮಾಸ್, ಕ್ಲಬ್ ಸರ್ವಿಸ್ ಚೆಯರ್ ಮೆನ್ ಆಗಿ ಮೋಕ್ಷತ್.ವಿ, ಇಂಟರ್ ನ್ಯಾಷನಲ್ ಸರ್ವಿಸ್ ಚೆಯರ್ ಮೆನ್ ಆಗಿ ಅನ್ವಿತ್ ರೈ ಅವರಿಗೆ ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಆರೀಫ್ ಬೆಳ್ಳಾರೆ ಪದಪ್ರದಾನಗೈದರು. ವಲಯ ಲೆಫ್ಟಿನೆಂಟ್ ಚಂದ್ರಶೇಖರ್ ರೈ, ಜಿಲ್ಲಾ ಸಮನ್ವಯಧಿಕಾರಿ ಶಶಿಧರ್ ಬಿ.ಕೆ, ಬೆಳ್ಳಾರೆ ಇಂಟರ್ಯಾಕ್ಟ್ ಕ್ಲಬ್ ಚೆಯರ್ ಮೆನ್ ಪ್ರಮೋದ್ ಕುಮಾರ್ ಶೆಟ್ಟಿ, ನಿರ್ಗಮಿತ ಅಧ್ಯಕ್ಷ ಗಗನ್ ಎಂ.ಎಸ್, ಶಿಕ್ಷಕ ಪ್ರತಿನಿಧಿ ಸಂಸ್ಥೆಯ ನಿರ್ದೇಶಕ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಉಮೇಶ್ ಮಣಿಕ್ಕಾರ, ಉಪಸ್ಥಿತರಿದ್ದರು. ವಿದ್ಯಾರ್ಥಿ ಶಿಕ್ಷಕಿಯರಾದ ದಿವ್ಯಜ್ಯೋತಿ, ಹೇಮಾಶ್ರೀ ಅತಿಥಿಗಳನ್ನು ಪರಿಚಯಿಸಿದರು. ನೌಫಾಜ್ ಸ್ವಾಗತಿಸಿದರು. ವಿದ್ಯಾರ್ಥಿ ಶಿಕ್ಷಕಿ ಆರತಿ ವಂದಿಸಿದರು. ಅನ್ವಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading