ಯೇನೆಕಲ್ಲಿನಲ್ಲಿ ಒಕ್ಕಲಿಗ ಗೌಡರ ಮಹಾ ಅಭಿಯಾನ

ಸುಬ್ರಹ್ಮಣ್ಯ ಜುಲೈ 13 : ಒಕ್ಕಲಿಗ ಗೌಡ ಸೇವಾ ಸಂಘ(ರಿ.) ಕಡಬ ತಾಲೂಕು ಇದರ ಸುಬ್ರಹ್ಮಣ್ಯ ವಲಯದ ಏನೆಕಲ್ಲು ಗ್ರಾಮದ ಒಕ್ಕಲಿಗ ಗೌಡರ ಮಹಾ ಅಭಿಯಾನ ಕಾರ್ಯಕ್ರಮ ರವಿವಾರ ಯೇನೆಕಲ್ಲಿನಲ್ಲಿ ನಡೆಯಿತು. 

. . . . . . . . .

ಈ ಅಭಿಯಾನದಲ್ಲಿ ಏನೆಕಲ್ಲು ಗ್ರಾಮದ ಮುತ್ಲಾಜೆ ಬೈಲು, ಕಲ್ಕುದಿ ಬೈಲು, ಕರ್ನಾಜೆ ಕಿಬ್ಬೊಡಿ ಬೈಲು, ಮಲ್ಲಾರ ಮಾದನಮನೆ ಬೈಲು, ಕೋಟಿ ಗೌಡನ ಮನೆ ಅಂಬೆಕಲ್ಲು ಬೈಲು, ಕುರ್ಕಿಲ್ ಅಮೈ ಬೈಲು, ಸಂಕಡ್ಕ ಉರ್ದೋಳಿ ಬೈಲು, ಪರಮಲೆ ಪುಂಡಿಗದ್ದೆ ಬೈಲು ಮತ್ತು ತುಂಬತಾಜೆ ಬೈಲು ಹೀಗೆ 22 ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿನಲ್ಲಿ ನಾಲ್ಕರಿಂದ ಐದು ಜನ ಸ್ವಯಂಸೇವಕರು ಮನೆಮನೆ ಭೇಟಿ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. ಭೇಟಿಯ ಮನೆ ಬೇಟಿಯ ಸಂದರ್ಭದಲ್ಲಿ ಮನೆಯವರಿಗೆ ಕಡಬ ತಾಲೂಕಿನ ಹೊಸಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನದ ಮಾಹಿತಿಗಳನ್ನು, ಆರ್ಥಿಕ ಕ್ರೂಡೀಕರಣದ ಬಗ್ಗೆ ವಿವರಿಸಲಾಯಿತು.

. . . . . . .

ಅಭಿಯಾನದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ ಬೈಲು, ಉಪಾಧ್ಯಕ್ಷ ತಮ್ಮಯ್ಯ, ಗೌಡ ಹಿರಿಯರಾದ ತಿಮ್ಮಪ್ಪ ಗೌಡ ಕುಂಡಡ್ಕ, ಆಶಾ ತಿಮ್ಮಪ್ಪ ಗೌಡ, ಸೂರಪ್ಪ ಗೌಡ ಬಲಾಡಿ, ರಾಮಯ್ಯಗೌಡ ಮಾದನ ಮನೆ, ಕಡಬ ತಾಲೂಕು ಸಂಘಟನಾ ಕಾರ್ಯದರ್ಶಿ ಶಿವರಾಮ ಯೇನೆಕಲ್ಲು, ಯೇನೆಕಲ್ಲು ಗ್ರಾಮ ಸಮಿತಿಯ ಅಧ್ಯಕ್ಷ ಶಿವಪ್ರಸಾದ ಮಾದನಮನೆ, ಕಾರ್ಯದರ್ಶಿ ಪ್ರಶಾಂತ್ ಕೋಡಿಬೈಲು, ಸುಬ್ರಹ್ಮಣ್ಯ ವಲಯ ಅಧ್ಯಕ್ಷ ಉಮೇಶ ಹೊಸಳಿಕೆ, ಉಪಾಧ್ಯಕ್ಷ ಬಾಲಕೃಷ್ಣ ಕಣಕಲ್, ಐನೆಕಿದು ಗ್ರಾಮ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಟ್ಟೆಮನೆ, ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಸುಬ್ರಹ್ಮಣ್ಯ ಗ್ರಾಮ ಸಮಿತಿ ಕಾರ್ಯದರ್ಶಿ ವಿಶ್ವನಾಥ ನಡುತೋಟ, ಬಳ್ಪ ಗ್ರಾಮ ಸಮಿತಿ ಅಧ್ಯಕ್ಷ ಹರೀಶ ಕಲಂಗುಡಿ, ಸೂರಪ್ಪ ಗೌಡ ಬಾಲಾಡಿ, ರಾಮಯ್ಯ ಗೌಡ ಮಾದನ ಮನೆ ಹಾಗೂ ಕಡಬ ತಾಲೂಕಿನ 42 ಗ್ರಾಮಗಳ ಪ್ರಮುಖರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading