ಜೇಸಿಐ ಸುಳ್ಯ ಪಯಸ್ವಿನಿಗೆ ಸಿಂಧು-2026 ಲೇಡಿ ಜೇಸಿ ಸಮ್ಮೇಳನ | ಟಾಪ್ 5 ಘಟಕದೊಂದಿಗೆ, ಹಲವು ಪುರಸ್ಕಾರ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು ಮಹಿಳಾ ಪರ ಕಾರ‍್ಯಕ್ರಮಗಳ ಆಯೋಜನೆಯಲ್ಲಿ ಸಾಧನೆ ಮೆರೆದಿದ್ದು, ಜುಲೈ 5ರಂದು ಬೈಂದೂರಿನ ಜೆ.ಎನ್.ಆರ್. ಕಲಾಮಂದಿರದಲ್ಲಿ ನಡೆದ ಜೇಸಿಐ ಭಾರತ ವಲಯ-15ರ ಲೇಡಿ ಜೇಸಿ ಸಮ್ಮೇಳನ “ಸಿಂಧು-2026″ರಲ್ಲಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದೆ.

. . . . . . . . .

ಕಾರ‍್ಯಕ್ರಮದಲ್ಲಿ ಜೇಸಿಐ ಭಾರತ ವಲಯ-15ರ ವಲಯಾಧ್ಯಕ್ಷ ಜೆ.ಎಫ್.ಎಸ್. ಸಂತೋಷ್ ಶೆಟ್ಟಿ ಹಾಗೂ ಪ್ರಥಮ ಮಹಿಳೆ ಜೆ.ಎಫ್.ಎಂ. ಸಿಂಧು ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೊಂಟಡ್ಕ ಮತ್ತು ಲೇಡಿ ಜೇಸಿ ಸಂಯೋಜಕ ಜೇಸಿ. ಶೋಭಾ ಅಶೋಕ್ ಚೂಂತಾರು ತಂಡದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

. . . . . . .

ವಲಯ ಮಟ್ಟದಲ್ಲಿ ಟಾಪ್-5 ಮಹಿಳಾ ಜೇಸಿ ಘಟಕಗಳಲ್ಲಿ ಒಂದಾಗಿ ಜೇಸಿಐ ಸುಳ್ಯ ಪಯಸ್ವಿನಿ ಹೊರಹೊಮ್ಮಿದ್ದು, ಘಟಕದಿಂದ ಆಯೋಜಿಸಲಾದ ಮಹಿಳಾ ದಿನಾಚರಣೆ, ಶೀರೋಸ್ ಡೇ, ಪ್ರಯಾಸ್ ದಿನ, “ಮಾಂ ಟು ಮಿ” ಫೋಟೋ ಸ್ಪರ್ಧೆ ಸೇರಿದಂತೆ ಹಲವು ಮಹಿಳಾ ಸಬಲೀಕರಣ ಕಾರ‍್ಯಕ್ರಮಗಳಿಗೆ ವಿಶೇಷ ಮನ್ನಣೆಗಳು ವಲಯ ಮಟ್ಟದಲ್ಲಿ ದೊರೆತಿದೆ.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಜೇಸಿ. ಎಚ್.ಜಿ.ಎಫ್. ತಾರಾ ಮಾದವ ಚೂಂತಾರು, ಜೇಸಿ. ಸತ್ಯ ಶಾಂತಿ ತ್ಯಾಗ ಮೂರ್ತಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading