ಯೇನೇಕಲ್ಲು : ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯ ಜುಲೈ 9 : ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ಡ್ ಯೇನೆಕಲ್ಲು ಇದರ ವತಿಯಿಂದ ಮಹಿಳೆಯರಿಗಾಗಿ ಮೂರು ದಿನಗಳ ಕಾಲ ನಡೆಯುವ ಮಹಿಳಾ ಕೌಶಲ್ಯ ತರಬೇತಿಯನ್ನು ಶಿಬಿರವನ್ನು ಇಂದು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ವಹಿಸಿದ್ದರು. 

. . . . . . . . .

ಮುಖ್ಯ ಅತಿಥಿಗಳಾಗಿ ಶ್ರೀಯುತ ರತನ್ ಕಲ್ಕುದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೃಷಿ ಪತ್ತಿನ ಸಹಕಾರಿ ಸಂಘ ಏನಕಲ್ಲು ಇವರು ಕಾರ್ಯಕ್ರಮ ಉದ್ಘಾಟಿಸಿ ಟ್ರಸ್ಟ್ ನವರು ನಡೆಸುತ್ತಿರುವ ಮಹಿಳಾ ಸಬಲೀಕರಣಕ್ಕೆ ಇಂತಹ ಕಾರ್ಯಕ್ರಮದ ಆಯೋಜನೆಯ ಬಗ್ಗೆ ಶ್ಲಾಘಿಸಿದರು. ಹಾಗೂ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ರಾಮಕೃಷ್ಣ ಮಲ್ಲಾರ ಮಾತನಾಡಿ “ಇಂದು ಟ್ರಸ್ಟ್ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಇವತ್ತು ಮಹಿಳೆಯರು ಪರವಾಲಂಬಿ ಆಗದೆ ಸ್ವಾವಲಂಬಿಯಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ದೃಷ್ಟಿಯಿಂದ ನಾವು ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ ಇನ್ನು ಮುಂದೆಯೂ ಕೂಡ ಹೆಚ್ಚಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ” ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ತರಬೇತುದಾರರಾದ ಸುಮ ಕುಧ್ವ

. . . . . . .

ಮಾಲಕರು ಸೌಂದರ್ಯ ಬ್ಯೂಟಿ ಪಾರ್ಲರ್ ಪಂಜ,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಹಾಗೂ ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ಉಪಸ್ಥಿತರಿದ್ದರು. ಟ್ರಸ್ಟ್ ನ ಖಜಂಜಿಯಾದ ನಾಗರಾಜ್ ಪರಮಲೆ ಎಲ್ಲರನ್ನೂ ಸ್ವಾಗತಿಸಿದರು. ಟ್ರಸ್ಟ್ ನ ಉಪಾಧ್ಯಕ್ಷರಾದ ಶಿವರಾಂ ಚಿದ್ಗಲ್ ಧನ್ಯವಾದ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು 30 ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading