ಚಾಲನ ಪರವಾನಿಗೆ ರಹಿತ ವಾಹನ ಚಾಲಕನು ತನ್ನ ವೈಯಕ್ತಿಕ ನೆಲೆಯಲ್ಲಿ ಮೃತನ ವಾರಿಸುದಾರರಿಗೆ ಪರಿಹಾರ ನೀಡುವಂತೆ ಸುಳ್ಯ ನ್ಯಾಯಾಲಯದಿಂದ ಆದೇಶ

ದಿನಾಂಕ 15/10/2024 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಅಕೌಂಟೆಂಟ್ ಭೋಜಪ್ಪ ಗೌಡರು ತನ್ನ ಬಾಪ್ತು ಕೆಎ 21 EC 3742 ನೋಂದಣಿ ನಂಬ್ರದ ಹೋಂಡಾ ಶೈನ್ ಮೋಟರ್ ಸೈಕಲ್ ನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ವೇಳೆ ಸೋಣoಗೇರಿ ಎಂಬಲ್ಲಿ ಅವರ ಎದುರುಗಡೆಯಿಂದ ಬರುತ್ತಿದ್ದ ಕೆ.ಎ 21 W 7626 ನೊಂದಣಿ ನಂಬ್ರದ ಒಂದು ರಾಯಲ್ ಎನ್ಫೀಲ್ಡ್ ಮೋಟರ್ ವೆಹಿಕಲ್ ಸವಾರನು ಭೋಜಪ್ಪ ಗೌಡರ ವಾಹನಕ್ಕೆ ಡಿಕ್ಕಿ ಪಡಿಸಿ ಮೃತರ ಸಾವಿಗೆ ಕಾರಣರಾಗಿರುತ್ತಾರೆ ಎಂದು ಆರೋಪಿಸಿ ಸುಳ್ಯ ವೃತ್ತ ನಿರೀಕ್ಷಕರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿ, ಅದರಲ್ಲಿ ಇಬ್ಬರು ವಾಹನ ಸವಾರ ತಪ್ಪಿನಿಂದ ಅಪಘಾತ ಆಗಿದೆ ಎಂದು ಸೂಚಿಸಲಾಗಿತ್ತು.

. . . . . . . . .

     ಬಳಿಕ ಮೃತರ ವಾರಿಸುದಾರರು ಮೋಟಾರ್ ಕಾಯಿದೆಯ ವಿಮಾ ಪರಿಹಾರಕ್ಕಾಗಿ ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಅದರಲ್ಲಿ ತನಿಖೆ ಯನ್ನು ನಡೆಸಿದ ಮಾನ್ಯ ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಧಿಶೆಯಾದ ಶ್ರೀಮತಿ ದಮಯಂತಿ ಸೋಮಯ್ಯ ರವರು ಮೃತರ ವಾಹನಕ್ಕೆ ಡಿಕ್ಕಿಪಡಿಸಿದ ಮೋಟರ್ ಸೈಕಲ್ ಸವಾರ ವಸಂತ ರವರು ತನ್ನ ಪಾಲಿನ 50% ವಿಮಾ ಪರಿಹಾರ ಹಣ ರೂ 23,17,200 ನ್ನು(ಇಪ್ಪತ್ತುಮೂರು ಲಕ್ಷದ ಹದಿನೇಳು ಸಾವಿರದ ಇನ್ನೂರು ಮಾತ್ರ) ತೀರ್ಪಿನ ದಿನಾಂಕದ ಮೂರು ತಿಂಗಳ ಒಳಗಾಗಿ ನ್ಯಾಯಾಲಯದಲ್ಲಿ ಠೇವಣಿ ಮಾಡುವಂತೆ ದಿನಾಂಕ 24/06/2026 ರಂದು ಆದೇಶ ಮಾಡಿರುವುದಾಗಿದೆ.

. . . . . . .

 ಇದರಿಂದ ವಾಹನ ಸವಾರರು ಡಿಎಲ್ ಕಡ್ಡಾಯವಾಗಿ ಹೊಂದಿರಬೇಕು ಮತ್ತು ತಾನು ಚಲಾಯಿಸುವ ವಾಹನಕ್ಕೆ ವಿಮಾ ಪಾಲಿಸಿಯನ್ನು ಮಾಡಿರಬೇಕು ಹಾಗೂ ಆರ್‌ಸಿ ರಿನಿವಲ್ ಮಾಡಿರಬೇಕು ಎಂಬ ಅಂಶ ಈ ತೀರ್ಪಿನಿಂದ ಗಮನಾರ್ಹವಾಗಿರುತ್ತದೆ ಇಲ್ಲದಿದ್ದಲ್ಲಿ ವೈಯಕ್ತಿಕವಾಗಿ ವಾಹನ ಸವಾರ ಮತ್ತು ಮಾಲೀಕರು ಸಂಕಷ್ಟಕೀಡಾಗುವುದು ಖಚಿತವಾಗಿರುತ್ತದೆ.

        ಅರ್ಜಿದಾರರ ಪರವಾಗಿ ಸುಳ್ಯದ ವಕೀಲರಾದ ಯಂ.ವೆಂಕಪ್ಪಗೌಡ, ಚಂಪಾ ವಿ ಗೌಡ, ರಾಜೇಶ್ ಬಿ. ಜಿ ಹಾಗೂ ಶ್ಯಾಮ್ ಪ್ರಸಾದ್ ಏನ್.ಕೆ ರವರು ವಾದಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading