ಬ್ರಿಡ್ಜ್ ಮ್ಯಾನ್ ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್ ನಿಧನಕ್ಕೆ ಸುಳ್ಯ ಬಿಜೆಪಿ ಸಂತಾಪ

“ತೂಗು ಸೇತುವೆಯ ಸರದಾರರು, ಗ್ರಾಮೀಣ ಪ್ರದೇಶ ಸಾಮಾನ್ಯ ಜನರಿಗೆ ತೂಗು ಸೇತುವೆ ನಿರ್ಮಿಸಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದ ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್ ನಿಧನರಾಗಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆಯೆಂದು” ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

“ಸುಳ್ಯ ಮಾತ್ರವಲ್ಲದೆ ದೇಶದ ಆನೇಕ ಕಡೆ ನೂರಾರು ಸೇತುವೆ ನಿರ್ಮಿಸಿ ಗ್ರಾಮೀಣ ಭಾರತದ ಜನರಿಗೆ ಸಂಪರ್ಕದ ಕೊಂಡಿಯಾಗಿ ಬ್ರಿಡ್ಜ್ ಮ್ಯಾನ್‌ಯೆಂದು ಗುರುತಿಸಿಕೊಂಡ ಮಹಾನ್ ವ್ಯಕ್ತಿ, ಸುಳ್ಯ ತಾಲೂಕಿನ ಆರಂಬೂರು, ಕುಕ್ಕುಂಬಳ, ಓಡಬಾಯಿ, ಪಂಜಿಕಲ್ಲು, ಮುರೂರು ಹೀಗೆ ವಿವಿಧೆಡೆ ತೂಗು ಸೇತುವೆ ನಿರ್ಮಿಸುವ ಮೂಲಕ ಜನರಿಗೆ ಸಂಪರ್ಕ ಸೇತುವೆಯಾದವರು. ಗಿರೀಶ್ ಭಾರಧ್ವಾಜ್ ಅವರ ಕೊಡುಗೆಯನ್ನು ಸಮಾಜ ಎಲ್ಲಾ ಕಾಲಕ್ಕೂ ನೆನಪಿಸುತ್ತದೆ ಇವರ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಆದರೆ ಇಂದು ನಮ್ಮ ಜೊತೆಯಿಲ್ಲ ಅವರ ಸಾಧನೆ ನಮ್ಮ ಕಣ್ಣು ಮುಂದಿದೆ. ಅವರ ಆತ್ಮಕ್ಕೆ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ನಮನಗಳನ್ನು ಸಲ್ಲಿಸುತ್ತಿದ್ದೇವೆಂದು” ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading