ಬಾಳಿಲ : ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ದಿವಂಗತ ನೆಟ್ಟಾರು ವೆಂಕಟಸುಬ್ಬರಾವ್ ರವರ ಸ್ಮೃತಿ ದಿನಾಚರಣೆ

ಬಾಳಿಲ : ಜು.06 ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ದಿವಂಗತ ನೆಟ್ಟಾರು ವೆಂಕಟಸುಬ್ಬರಾವ್ ಇವರ ಸ್ಮೃತಿ ದಿನಾಚರಣೆ ಮತ್ತು ನವೀಕೃತ ಶಾಲಾ ಕಛೇರಿಯ ಉದ್ಘಾಟನೆಯು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಸ್ಮೃತಿ ದಿನಾಚರಣೆಯ ಮುಖ್ಯ ಆಮಂತ್ರಿತರಾಗಿ ಭಾಗವಹಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ರಾಮಪ್ರಸಾದ್ ಕಾಂಚೋಡು ಮಾತನಾಡುತ್ತಾ ಸಂಸ್ಥಾಪಕರ ತ್ಯಾಗ ಬದ್ಧತೆ ಹಾಗೂ ಸಮರ್ಪಣಾ ಮನೋಭಾವವನ್ನು ನೆನಪಿಸಿಕೊಂಡರು.

. . . . . . . . .

ಶಾಲೆಯ 2003-04ರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕೊಡುಗೆಯಿಂದ ನವೀಕರಿಸಲಾದ ಶಾಲೆಯ ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಸಿದ ಶಾಲೆಯ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಮಾಜಿ ಸಂಚಾಲಕರೂ ಆಗಿರುವ ಎನ್.ವೆಂಕಟ್ರಮಣ ಭಟ್ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಪಿ.ಜಿ.ಎಸ್.ಎನ್.ಪ್ರಸಾದ್ ಪೂಜ್ಯರನ್ನು ಸ್ಮರಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಧಾಕರ ರೈ ಭಾಗವಹಿಸಿದರು. 

. . . . . . .

ವಿದ್ಯಾಬೋಧಿನೀ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷರಾದ ರಾಧಾಕೃಷ್ಣ ರಾವ್ ಸಭೆಯ ಅಧ್ಯಕ್ಷ ಸ್ಥಾನವಹಿಸಿ ಮಾತನಾಡುತ್ತಾ ಸಂಸ್ಥಾಪಕರನ್ನು ಸ್ಮರಿಸಿ ಆದರ್ಶಗಳನ್ನು ನೆನಪಿಸಿದರು. ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹರಿಣಾಕ್ಷಿ.ಬಿ ಹಾಗೂ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಪಿ.ಟಿ.ಎ ಅಧ್ಯಕ್ಷರಾದ ಸೀತಾರಾಮ.ಕೆ ಹಾಗೂ ಪ್ರೌಢಶಾಲಾ ಪಿ.ಟಿ.ಎ ಅಧ್ಯಕ್ಷರಾದ ರಮೇಶ ಕಾಚಿಲ ಸಭೆಯಲ್ಲಿ ಭಾಗವಹಿಸಿದರು.

ಸ್ಮೃತಿ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕ ಉದಯಕುಮಾರ್ ರೈ ಸ್ವಾಗತಿಸಿದರು. ಸಹ ಶಿಕ್ಷಕಿ ಸಹನಾ ವಂದಿಸಿದ ಈ ಕಾರ್ಯಕ್ರಮವನ್ನು ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್.ಯು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading