“ದ.ಕ.ಗೌಡ ಸಮುದಾಯದ ಬಗ್ಗೆ ಎಸ್. ಆರ್.ವಿಶ್ವನಾಥ್ ಹೇಳಿಕೆ ಖಂಡನೀಯ” – ಹೇಳಿಕೆ ಹಿಂಪಡೆಯುವಂತೆ ಸುಳ್ಯ ಗೌಡರ ಯುವಸೇವಾ ಸಂಘ ಆಗ್ರಹ

“ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಕರ್ನಾಟಕ ರಾಜ್ಯದ ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಗೌಡ ಸಮುದಾಯದವರು ಒಕ್ಕಲಿಗರಲ್ಲ ಎಂದು ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಅದನ್ನು ತಕ್ಷಣ ಹಿಂಪಡೆಯಬೇಕು” ಎಂದು ಸುಳ್ಯ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ಆಗ್ರಹಿಸಿದರು.

. . . . . . . . .

ಸುಳ್ಯದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಶೇ.65ಕ್ಕಿಂತ ಹೆಚ್ಚು ಒಕ್ಕಲಿಗ ಸಮುದಾಯಕ್ಕೆ ಸೇರಿದ ಗೌಡ ಸಮುದಾಯದವರೇ ಆಗಿದ್ದಾರೆ. ಈ ವಿಚಾರವನ್ನು ರಾಜಕೀಯೇತರವಾಗಿ ಖಂಡಿಸುತ್ತಿದ್ದು, ಶಾಸಕರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.

. . . . . . .

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, “ಶಾಸಕ ಎಸ್.ಆರ್. ವಿಶ್ವನಾಥ್ ಅವರು ಸಮುದಾಯವನ್ನು ಹೀಯಾಳಿಸುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಜನಪ್ರತಿನಿಧಿಯಾಗಿ ಇಂತಹ ಅನವಶ್ಯಕ ಹೇಳಿಕೆ ನೀಡಬಾರದು” ಎಂದು ಹೇಳಿದ ಅವರು “ಆದಿ ಚುಂಚನಗಿರಿ ಮಠವನ್ನು ಒಕ್ಕಲಿಗ ಸಮುದಾಯದ ಪೀಠವೆಂದು ಒಪ್ಪಿಕೊಳ್ಳುವುದಾದರೆ, ಮಂಗಳೂರಿನಲ್ಲಿ ಅದರ ಶಾಖಾ ಮಠವೂ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಯಾರನ್ನಾದರೂ ಟೀಕಿಸುವುದಾದರೆ ವೈಯಕ್ತಿಕವಾಗಿ ಟೀಕಿಸಲಿ; ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸೂಕ್ತವಲ್ಲ. ಶಾಸಕ ವಿಶ್ವನಾಥ್ ಅವರು ಮಂಗಳೂರಿಗೆ ಬಂದರೆ ಇಲ್ಲಿನ ಒಕ್ಕಲಿಗ ಸಮಾಜದ ಬಗ್ಗೆ ಪರಿಚಯ ಮಾಡಿಕೊಡಲು ನಾವು ಸಿದ್ಧರಿದ್ದೇವೆ. ಒಂದು ಸಮುದಾಯವನ್ನು ಹೀಯಾಳಿಸುವುದನ್ನು ಯಾರೂ ಸಹಿಸುವುದಿಲ್ಲ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ, ಸಮುದಾಯದ ಮುಖಂಡ ದೊಡ್ಡಣ್ಣ ಬರಮೇಲು ಹಾಗೂ ಸಂತೋಷ್ ಜಾಕೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading