ಮಂಡೆಕೋಲು: ಸುಸಜ್ಜಿತ ಶಾಲಾ ಗ್ರಂಥಾಲಯ ಉದ್ಘಾಟನೆ

“ನಿರಂತರ ಪುಸ್ತಕ ಓದುವ ಹವ್ಯಾಸ ನಮ್ಮ ಬದುಕನ್ನೇ ಬದಲಾಯಿಸುತ್ತದೆ. ಪುಸ್ತಕ ಓದು ಮಕ್ಕಳ ಜ್ಞಾನ ವರ್ಧಿಸುತ್ತದೆ” ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೀಕೃತಗೊಂಡ ಸುಸಜ್ಜಿತ ಗ್ರಂಥಾಲಯವನ್ನು ಉದ್ಘಾಟಿಸಿ, ಮಾತನಾಡಿದರು.
‌‌
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಶ್ ಕಣೆಮರಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡರು ಮಾತನಾಡಿ “ಗ್ರಾಮೀಣ ಪ್ರದೇಶದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಯಲ್ಲಿ ಊರವರ ಪಾತ್ರ ಮಹತ್ವವಾದದ್ದು, ಕ್ಷೇತ್ರದ ಕಡೆಯಿಂದ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ” ಎಂದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪೆರಾಜೆ ಮಾತನಾಡಿ “ಶಾಲಾ ಅಭಿವೃದ್ಧಿಗೆ ಗ್ರಾಮಪಂಚಾಯತ್ ಸದಾ ಸಹಕಾರ ನೀಡುತ್ತದೆ. ಗ್ರಂಥಾಲಯಕ್ಕೆ ಪಂಚಾಯತ್ ವತಿಯಿಂದ ಪುಸ್ತಕಗಳನ್ನು ನೀಡುವುದಾಗಿ ಹೇಳಿದರು.
‌ಈ ಸಂದರ್ಭದಲ್ಲಿ ಭಾಗಿರಥಿ ಅವರನ್ನು ಹಾಗೂ ಯೋಜನಾಧಿಕಾರಿ ಮಾಧವ ಗೌಡರನ್ನು ಎಸ್‌ಡಿಎಂಸಿ ಕಡೆಯಿಂದ ಗೌರವಿಸಲಾಯಿತು.
ಶಾಲಾ ಗ್ರಂಥಾಲಯಕ್ಕೆ‌ ಜಿಲ್ಲಾ ಪಂಚಾಯತ್ ಅನುಧಾನದಲ್ಲಿ ಸುಮಾರು ಒಂದು ಲಕ್ಷದ ಪೀಠೋಪಕರಣ, ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಪುಸ್ತಕಗಳು ದೊರಕಿವೆ.
ಶಾಲಾ ಹಳೆವಿಧ್ಯಾರ್ಥಿ ಸಂಘದ ಕಡೆಯಿಂದ ಶಾಲೆಯಲ್ಲಿ ಆರಂಭಗೊಳಿಸಲು ಎಲ್.ಕೆ.ಜಿ ತರಗತಿಗೆ ಸುಮಾರು ಅರುವತ್ತೇಳು ಸಾವಿರದ ಪೀಠೋಪಕರಣ ಕೊಡುಗೆಯಾಗಿ ನೀಡಲಾಗಿದೆ. ಇದರ ಜೊತೆಗೆ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ಪುಸ್ತಕ ಹಾಗೂ ಗ್ರಂಥಾಲಯಕ್ಕೆ ಬೇಕಾದ ವಿವಿಧ ಪರಿಕರಗಳನ್ನು ನೀಡಿದ್ದಾರೆ. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸತ್ಯಶಾಂತಿತ್ಯಾಗಮೂರ್ತಿಯವರು ವಿವಿಧ ಭಾವಚಿತ್ರಗಳನ್ನು ನೀಡಿದ್ದಾರೆ.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಮಾತನಾಡಿ “ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಎಲ್ಲರಿಗೂ ಶಾಲಾಭಿವೃದ್ಧಿ ಸಮಿತಿ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಮಂಜೂರಾದ ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ ಅತ್ಯಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಕಾರ್ಯದರ್ಶಿ ಜಾನಕಿ ವೇಧಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿ ಕಾವ್ಯಶ್ರೀ ಹಾಗೂ ದೀಪಿಕಾ ಪ್ರಾರ್ಥಿಸಿ, ಶಾಲಾ ಶಿಕ್ಷಕಿ ಹರ್ಷಿತಾ ಸ್ವಾಗತಿಸಿ, ಚಶ್ಮಿತಾ ವಂದಿಸಿದರು. ಶಿಕ್ಷಕಿ ವಿದ್ಯಾ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading