ಕುಮಾರ ಪರ್ವತ ಚಾರಣಕ್ಕೆ ಟ್ರೆಕ್ಕಿಂಗ್ ಗೈಡ್‌ಗಳ ನೇಮಕಾತಿ ; ಆಸಕ್ತ ಅಭ್ಯರ್ಥಿಗಳ ನೋಂದಣಿಗೆ ಆಹ್ವಾನ

ಸೋಮವಾರಪೇಟೆ ತಾಲೂಕಿನ ಕುಮಾರಳ್ಳಿ ಗ್ರಾಮದಲ್ಲಿರುವ ಪುಷ್ಪಗಿರಿ ವನ್ಯಜೀವಿ ವಲಯ ವ್ಯಾಪ್ತಿಗೆ ಒಳಪಡುವ ಕುಮಾರ ಪರ್ವತ ಚಾರಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಸುರಕ್ಷಿತ, ಶಿಸ್ತುಬದ್ಧ ಹಾಗೂ ಗುಣಮಟ್ಟದ ಟ್ರೆಕ್ಕಿಂಗ್ ಅನುಭವ ಒದಗಿಸುವ ಉದ್ದೇಶದಿಂದ ಟ್ರೆಕ್ಕಿಂಗ್ ಗೈಡ್ ಗಳ ಅವಶ್ಯಕತೆಯಿದ್ದು, ಟ್ರೆಕ್ಕಿಂಗ್ ಗೈಡ್ ಗಳಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಆಹ್ವಾನಿಸಲಾಗಿದ್ದು, ಪ್ರಕೃತಿ ಮತ್ತು ಟ್ರೆಕ್ಕಿಂಗ್ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ದೈಹಿಕವಾಗಿ ಸಧೃಡರಾಗಿರುವ 18 ವರ್ಷ ಮೇಲ್ಪಟ್ಟವರು ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟ್ರೆಕ್ಕಿಂಗ್ ಗೈಡ್ ತರಬೇತಿ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದ್ದು,
ಭಾಗವಹಿಸುವವರಿಗೆ ಟ್ರೆಕ್ಕಿಂಗ್ ಮಾರ್ಗದರ್ಶನ, ಪ್ರವಾಸಿಗರ ಸುರಕ್ಷತೆ, ಪ್ರಥಮ ಚಿಕಿತ್ಸೆ, ಅರಣ್ಯ ಮತ್ತು ವನ್ಯಜೀವಿ ಅರಿವು, ಪರಿಸರ ಸಂರಕ್ಷಣೆ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮದ ಕುರಿತು ತರಬೇತಿ ನೀಡಿ ಅಧಿಕೃತ ಪ್ರಮಾಣಪತ್ರ ನೀಡಲಾಗುವುದು. ಈ ವಿಷಯದ ಬಗ್ಗೆ ಆಸಕ್ತಿಯುಳ್ಳವರು 9380098454 ಸಂಖ್ಯೆಗೆ ಕರೆಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕಾಗಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ವಲಯ ಅರಣ್ಯಾಧಿಕಾರಿಗಳು, ಪುಷ್ಪಗಿರಿ ವನ್ಯಜೀವಿ ವಲಯ, ಸೋಮವಾರಪೇಟೆ ಇವರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಪುಷ್ಪಗಿರಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading